Home
ಮೊಬೈಲ್

'ಗ್ಯಾಲಾಕ್ಸಿ ಎಸ್ 9ಪ್ಲಸ್' (256GB)ಫೋನ್ ಖರೀದಿಗೆ ಶೇ.70 ರಷ್ಟು ಜಿಯೋ ಬೈಬ್ಯಾಕ್ ಆಫರ್!!

ಭಾರತದ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರಿಗೆ ರಿಲಾಯನ್ಸ್ ಜಿಯೋ ಭರ್ಜರಿ ಆಫರ್ ಘೋಷಿಸಿದೆ.!

By Bhaskar N J

ಭಾರತದ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರಿಗೆ ರಿಲಾಯನ್ಸ್ ಜಿಯೋ ಭರ್ಜರಿ ಆಫರ್ ಘೋಷಿಸಿದೆ.! ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಪ್ಲಸ್ (256GB ವೆರಿಯಂಟ್) ಸ್ಮಾರ್ಟ್‌ಫೋನ್ ಮೇಲೆ ಶೇ. 70 ರಷ್ಟು ಬೈಬ್ಯಾಕ್ ಆಫರ್ ನೀಡಿ ಗಮನಸೆಳೆದಿದೆ.!!

ಭಾರತದಾಧ್ಯಂತ ಜಿಯೋ, ರಿಲಯನ್ಸ್ ಸ್ಟೋರ್‌ಗಳು ಹಾಗೂ ಜಿಯೋ ಅಫಿಷಿಯಲ್ ಸ್ಟೋರ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಪ್ಲಸ್ (256GB ವೆರಿಯಂಟ್) ಸ್ಮಾರ್ಟ್‌ಫೋನ್ ಖರೀದಿಸಿದವರು ಈ ಆಫರ್ ಪಡೆಯಲು ಅರ್ಹರಿದ್ದು, ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಗ್ಯಾರಂಟಿ ಬೈಬ್ಯಾಕ್ ಆಫರ್ ಅನ್ನು ನೀಡುವುದಾಗಿ ಜಿಯೋ ಘೋಷಿಸಿದೆ.!!

 'ಗ್ಯಾಲಾಕ್ಸಿ ಎಸ್ 9ಪ್ಲಸ್' (256GB) ಖರೀದಿಗೆ ಶೇ.70 ರಷ್ಟು ಬೈಬ್ಯಾಕ್ ಆಫರ್!!

ಗ್ಯಾಲಾಕ್ಸಿ ಎಸ್ 9 ಪ್ಲಸ್ (256GB ವೆರಿಯಂಟ್) ಸ್ಮಾರ್ಟ್‌ಫೋನ್ ಮೇಲೆ ಬೈಬ್ಯಾಕ್ ಆಫರ್ ಮಾತ್ರವಲ್ಲದೇ 10,000ಕ್ಕಿಂತ ಹೆಚ್ಚು ಲಾಭದ ರೀಚಾರ್ಜ್ ಆಫರ್ ಅನ್ನು ಸಹ ಜಿಯೋ ಘೋಷಿಸಿದೆ. ಹಾಗಾದರೆ, ಗ್ಯಾಲಾಕ್ಸಿ ಎಸ್ 9 ಪ್ಲಸ್ ಫೋನ್ ಮೇಲೆ ಜಿಯೋ ನೀಡಿರುವ ಆಫರ್‌ಗಳು ಯಾವುವು? ಖರೀದಿಸಿದರೆ ಏನೆಲ್ಲಾ ಲಾಭ ಎಂದು ಮುಂದೆ ತಿಳಿಯಿರಿ.!!

70 ರಷ್ಟು ಬೈಬ್ಯಾಕ್ ಆಫರ್!!

70 ರಷ್ಟು ಬೈಬ್ಯಾಕ್ ಆಫರ್!!

ಜಿಯೋ, ರಿಲಯನ್ಸ್ ಸ್ಟೋರ್‌ಗಳು ಹಾಗೂ ಜಿಯೋ ಅಫಿಷಿಯಲ್ ಸ್ಟೋರ್‌ಗಳಲ್ಲಿ ಗ್ಯಾಲಾಕ್ಸಿ ಎಸ್ 9 ಪ್ಲಸ್ (256GB ವೆರಿಯಂಟ್) ಸ್ಮಾರ್ಟ್‌ಫೋನ್ ಖರೀದಿಸಿದರೆ ಮಾತ್ರ 70 ರಷ್ಟು ಬೈಬ್ಯಾಕ್ ಆಫರ್ ನೀಡಲಾಗಿದೆ. 12 ತಿಂಗಳುಗಳ ಒಳಗಾಗಿ ಕಡಿಮೆಯೆಂದರೂ 2500 ರೂ. ಜಿಯೋ ರೀಚಾರ್ಜ್ ಮಾಡಿಸಿದವರಿಗೆ ಈ ಆಫರ್ ಲಭ್ಯವಿದೆ.!!

ಗ್ಯಾಲಾಕ್ಸಿ ಎಸ್ 9 ಪ್ಲಸ್ (256GB)ಗೆ ಮಾತ್ರ!!

ಗ್ಯಾಲಾಕ್ಸಿ ಎಸ್ 9 ಪ್ಲಸ್ (256GB)ಗೆ ಮಾತ್ರ!!

ಜಿಯೋ 70 ರಷ್ಟು ಬೈಬ್ಯಾಕ್ ಆಫರ್ ಅನ್ನು ಗ್ಯಾಲಾಕ್ಸಿ ಎಸ್ 9 ಪ್ಲಸ್ (256GB ವೆರಿಯಂಟ್) ಸ್ಮಾರ್ಟ್‌ಫೋನ್ ಮೇಲೆ ಮಾತ್ರ ನೀಡಿದೆ. ಇನ್ನುಳಿದ ಗ್ಯಾಲಾಕ್ಸಿ ಎಸ್‌ 9 ಸ್ಮಾರ್ಟ್‌ಫೋನ್‌ಗಳು ಈ ಆಫರ್‌ನಲ್ಲಿ ಲಭ್ಯವಿಲ್ಲ. ಹಾಗಾಗಿ, ಗ್ಯಾಲಾಕ್ಸಿ ಎಸ್ 9 ಪ್ಲಸ್ (256GB ವೆರಿಯಂಟ್) ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ಮಾತ್ರ ಮೊಬೈಲ್ ಬೆಲೆಯ ಶೇ 70 ರಷ್ಟು ಹಣ ವಾಪಸ್ ಸಿಗಲಿದೆ.!!

10,000ಕ್ಕಿಂತ ಹೆಚ್ಚು ಲಾಭ

10,000ಕ್ಕಿಂತ ಹೆಚ್ಚು ಲಾಭ

ಸ್ಯಾಮ್‌ಸಂಗ್ ಗ್ಯಾಲಾಕ್ಸಿ 9 ಸೀರಿಸ್ ಯಾವುದೇ ಸ್ಮಾರ್ಟ್‌ಫೋನ್‌ ಖರೀದಿಸಿ 4999 ರೂ. ಜಿಯೋ ರೀಚಾರ್ಜ್ ಮಾಡಿದರೆ 1TB ( 1024GB) ಸ್ಪೀಡ್ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ, ಎಸ್‌ಎಮ್‌ಎಸ್ ಸೇವೆಗಳನ್ನು ಒದಗಿಸಿದೆ. 4999 ರೂ.ಗಳಿಗೆ ಜಿಯೋ ಒಟ್ಟು 15,000 ಸಾವರ ರೂ.ಗಳ ಲಾಭವನ್ನು ನೀಡುತ್ತಿರುವುದಾಗಿ ಹೇಳಿಕೊಂಡಿದೆ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಪೋನ್ 5.8 ಇಂಚ್ ಕ್ವಾಡ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದರೆ, ಗ್ಯಾಲಾಕ್ಸಿ ಎಸ್‌ 9 ಪ್ಲಸ್ 6.2 ಇಂಚ್ ಕ್ವಾಡ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. 18.5:9 ಅನುಪಾತದಲ್ಲಿ ಅತ್ಯುತ್ತಮ ವಿನ್ಯಾಸಹೊಂದಿರು ಸ್ಮಾರ್ಟ್‌ಫೋನ್‌ ಹಿಂಬಾಗದಲ್ಲಿ ಎರಡು ರಿಯರ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆ ಹೊಂದಿದೆ.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ 9 ಮತ್ತು ಗ್ಯಾಲಾಕ್ಸಿ ಎಸ್‌ 9 ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಸ್ಯಾಮ್ಸಂಗ್ ಎಕ್ಸಿನೋಸ್ 9810 SoC ಪ್ರೊಸೆಸರ್ ಅನ್ನು ಹೊಂದಿವೆ (ಕೆಲವು ಮಾರುಕಟ್ಟೆಗಳಲ್ಲಿ ಸ್ನ್ಯಾಪ್‌ಡ್ರಾಗನ್ 845soc ಪ್ರೊಸೆಸರ್). ಇನ್ನು ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಣೆ ನೀಡಲಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ 9 ಸ್ಮಾರ್ಟ್‌ಫೋನ್ 4GB RAM ಮತ್ತು 64 GB/256 GB ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದ್ದರೆ, ಗ್ಯಾಲಾಕ್ಸಿ ಎಸ್‌ 9 ಪ್ಲಸ್ 6GB RAM ಮತ್ತು 64 GB/256 GB ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದೆ. ಎಸ್‌ಡಿ ಕಾರ್ಡ್ ಮೂಲಕ ಎರಡೂ ಸ್ಮಾರ್ಟ್‌ಫೋನ್‌ಗಳ ಮೆಮೊರಿಯನ್ನು 400GB ವರೆಗೂ ವಿಸ್ತರಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ.!!

ಡ್ಯುಯಲ್ ಕ್ಯಾಮೆರಾ !!

ಡ್ಯುಯಲ್ ಕ್ಯಾಮೆರಾ !!

ಕ್ಯಾಮೆರಾ ವಿಷಯದಲ್ಲಿ ಗ್ಯಾಲಾಕ್ಸಿ ಎಸ್‌ 9 ಮತ್ತು ಗ್ಯಾಲಾಕ್ಸಿ ಎಸ್‌ 9 ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಒಂದೇ ಫೀಚರ್ಸ್ ಹೊಂದಿವೆ.! ಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್‌ನ 12 (F1.5/F2.4) ಮೆಗಾಪಿಕ್ಸಲ್ ಇರುವ ಎರಡು ರಿಯರ್ ಕ್ಯಾಮೆರಾಗಳನ್ನು ಎರಡೂ ಸ್ಮಾರ್ಟ್‌ಫೋನುಗಳಲ್ಲಿ ನೀಡಲಾಗಿದ್ದು, 8MP AF (F1.7) ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ.!!

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಸೆಕ್ಯುರಿಟಿ ಮತ್ತು ಸೆನ್ಸಾರ್‌ಗಳು!!

ಸೆಕ್ಯುರಿಟಿ ಮತ್ತು ಸೆನ್ಸಾರ್‌ಗಳು!!

ಐರಿಸ್ ಸ್ಕ್ಯಾನರ್, ಫಿಂಗರ್ಪ್ರಿಂಟ್ ಸ್ಕ್ಯಾನರ್, ಫೇಸ್ ಡಿಟೆಕ್ಷನ್ ಸೆಕ್ಯುರಿಟಿ ಆಯ್ಕೆಗಳನ್ನು ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ತರಲಾಗಿದೆ. ಅಕ್ಸೆಲೆರೊಮೀಟರ್, ಗೈರೋ ಸೆನ್ಸಾರ್, ಕಂಪಾಸ್ ಹಾಲ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, RGB ಲೈಟ್ ಸೆನ್ಸಾರ್ ಮತ್ತು ಪ್ರೆಶರ್ ಸೆನ್ಸಾರ್‌ಗಳನ್ನು ಸ್ಮಾರ್ಟ್‌ಪೋನ್‌ಗಳು ಒಳಗೊಂಡಿವೆ.!!

ಬ್ಯಾಟರಿ ಶಕ್ತಿ ಮತ್ತು ಕನೆಕ್ಟಿವಿಟಿ!!

ಬ್ಯಾಟರಿ ಶಕ್ತಿ ಮತ್ತು ಕನೆಕ್ಟಿವಿಟಿ!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ 9 ಸ್ಮಾರ್ಟ್‌ಪೋನಿನಲ್ಲಿ 3,000 mAh ಬ್ಯಾಟರಿಯನ್ನು ನೀಡಲಾಗಿದೆ. ಅದೇ ಗ್ಯಾಲಾಕ್ಸಿ ಎಸ್‌ 9 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 3,500 mAh ಬ್ಯಾಟರಿಯನ್ನು ನೀಡಲಾಗಿದೆ. ಬ್ಲೂಟೂತ್ ® ವಿ 5.0 (2 Mbps ವರೆಗೆ), ANT +, ಯುಎಸ್ಬಿ ಟೈಪ್ ಸಿ ಕನೆಕ್ಟಿವಿಟಿಯನ್ನು ಸ್ಮಾರ್ಟ್ಪೋನ್ ಹೊಂದಿದೆ.!!

Best Mobiles in India

English summary
Reliance Digital together with Samsung India announced to offer Samsung Galaxy S9+ 256GB storage variant. to know more visit to kannada. gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+