ಅತ್ಯುತ್ತಮ ಟ್ಯಾಬ್ ಹಿರಿಮೆಗೆ ಪಾತ್ರವಾಗಿರುವ ಟ್ಯಾಬ್ 3

Written By:

ದಕ್ಷಿಣ ಕೊರಿಯಾದ ಹೆಚ್ಚು ವಿಶ್ವಾಸಾರ್ಹ ಸ್ಮಾರ್ಟ್‌ಫೋನ್ ತಯಾರಕ ತನ್ನ ಇತ್ತೀಚಿನ ಡಿವೈಸ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಗ್ಯಾಲಕ್ಸಿ ಟ್ಯಾಬ್ 3 ನಿಯೋ, ಎಂಬ ಹೆಸರನ್ನು ಹೊಂದಿರುವ ಈ ಟ್ಯಾಬ್ಲೆಟ್ ಯುಎಸ್ ಮಾರುಕಟ್ಟೆಯಲ್ಲಿ ಗ್ಯಾಲಕ್ಸಿ ಟ್ಯಾಬ್ 3 ಲೈಟ್ ಎಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು ಭಾರತಕ್ಕೆ ಬಂದಿರುವ 7 ಇಂಚಿನ ಟ್ಯಾಬ್ಲೆಟ್ ಆಗಿರುವ ಇದರ ಬೆಲೆ 16,490 ರೂಪಾಯಿಯಾಗಿದೆ.

ಗ್ಯಾಲಕ್ಸಿ ಟ್ಯಾಬ್ 3 ನಿಯೋ ಸಿಮಿಲರ್ ವಿನ್ಯಾಸದೊಂದಿಗೆ ಬಂದಿದೆ. ಇದು ಟೆಕ್ಸಚರ್ ಆಗಿರುವ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬಂದಿದ್ದು, ಇದು ಸ್ಯಾಮ್‌ಸಂಗ್‌ನ ಇತ್ತೀಚಿನ ಮೊಬೈಲ್‌ ಫೋನ್‌ಗಳಲ್ಲಿ ನಮಗೆ ಕಾಣಬಹುದಾಗಿದೆ. ಗ್ಯಾಲಕ್ಸಿ ಟ್ಯಾಬ್ 3 ನಿಯೋ ಹೋಮ್ ಬಟನ್, ಮೆನು ಮತ್ತು ಬ್ಯಾಕ್ ಟಚ್ ಕೀಯನ್ನು ಒಳಗೊಂಡಿದ್ದು ಕೆಳಭಾಗದಲ್ಲಿ ಇವುಗಳನ್ನು ನಿಮಗೆ ಕಾಣಬಹುದಾಗಿದೆ. ಗ್ಯಾಲಕ್ಸಿ ಟ್ಯಾಬ್ 3 ನಿಯೋವು 7 ಇಂಚು ಡಿಸ್‌ಪ್ಲೇ ಮತ್ತು 1024 x 600 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬಂದಿದೆ.

ಗ್ಯಾಲಕ್ಸಿ ಟ್ಯಾಬ್ 3 ನಿಯೋ ಆಕರ್ಷಕ ವಿಮರ್ಶೆ (ವೀಡಿಯೋ)

1.2 GHz ಡ್ಯುಯೆಲ್ ಕೋರ್ ಸಿಪಿಯು ಮತ್ತು 1ಜಿಬಿ RAM ಅನ್ನು ಒಳಗೊಂಡಿರುವ ಗ್ಯಾಲಕ್ಸಿ ಟ್ಯಾಬ್ 3 ನಿಯೋ ಕಂಪೆನಿಯ ಒಂದು ಗರಿಮೆಯಾಗಿದೆ ಎಂದೇ ಹೇಳಬಹುದು. ಆಂಡ್ರಾಯ್ಡ್ ಆವೃತ್ತಿ ಜೆಲ್ಲಿ ಬೀನ್ 4.2 ಇದರಲ್ಲಿ ಚಾಲನೆಯಾಗುತ್ತಿದ್ದು TouchWiz UI ಅಂಶ ಇದರಲ್ಲಿ ಬಂದಿದೆ.

ಇಂದಿನ ಲೇಖನದಲ್ಲಿ ಗ್ಯಾಲಕ್ಸಿ ಟ್ಯಾಬ್ 3 ನಿಯೋ ಕುರಿತ ವೀಡಿಯೋ ನೋಟ ಇದೋ ನಿಮಗಾಗಿ.

<center><iframe width="100%" height="510" src="//www.youtube.com/embed/5I00c3MBXLM" frameborder="0" allowfullscreen></iframe></center>

Read more about:
English summary
This article tells that Samsung galaxy tab 3 neo hands on review and first look.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot