ಸ್ಯಾಮ್‌ಸಂಗ್‌ನಿಂದ ಎರಡು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ
ಸ್ಯಾಮ್‌ಸಂಗ್ ಭಾರತದ ಮಾರುಕಟ್ಟೆಗೆ ಕಡಿಮೆ ಬೆಲೆಯ ಎರಡು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಎರಡು ಸ್ಮಾರ್ಟ್‌ಫೋನ್ ಜೆಲ್ಲಿ ಬೀನ್ ಓಎಸ್, 1500mAh ಬ್ಯಾಟರಿಯನ್ನು ಹೊಂದಿದೆ.
ಸ್ಯಾಮ್‌ಸಂಗ್ ಗೆಲಾಕ್ಸಿ ಟ್ರೆಂಡ್ ಡ್ಯುಯೊಸ್ ಸ್ಮಾರ್ಟ್‌ಫೋನ್‌ಗೆ 8,290 ರೂಪಾಯಿ, ಸ್ಯಾಮ್‌ಸಂಗ್ ಗೆಲಾಕ್ಸಿ ಸ್ಟಾರ್ ಪ್ರೊ 6,750 ರೂಪಾಯಿ ನಿಗದಿ ಮಾಡಿದೆ.ಈ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಿಲೋಡೆಡ್ ಆಗಿ ಕನ್ನಡ ಸೇರಿದಂತೆ ಹಿಂದಿ,ಬೆಂಗಾಳಿ,ಪಂಜಾಬಿ, ಮರಾಠಿ,ಗುಜರಾತಿ,ಮಲೆಯಾಳಂ,ತೆಲುಗು,ತಮಿಳು ಭಾಷೆಗಳ ಆಪ್‌ಗಳನ್ನು ಸ್ಯಾಮ್‌ಸಂಗ್ ಅಳವಡಿಸಿದೆ.
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಟ್ರೆಂಡ್ ಡ್ಯುಯೊಸ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್(480 x 800 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,3ಜಿ,ಬ್ಲೂಟೂತ್,ಮೈಕ್ರೋಯುಎಸ್‌ಬಿ
1500 mAh ಬ್ಯಾಟರಿ
ಸ್ಯಾಮ್‌ಸಂಗ್ ಗೆಲಾಕ್ಸಿ ಸ್ಟಾರ್ ಪ್ರೊ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ WVGA ಸ್ಕ್ರೀನ್ (480x800 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1GHz ಪ್ರೊಸೆಸರ್
512MB ರ್‍ಯಾಮ್
4GB ಆಂತರಿಕ ಮೆಮೊರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
1500mAh ಬ್ಯಾಟರಿ


Click it and Unblock the Notifications








