Home
ಮೊಬೈಲ್

ಮಡಚುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ Xನಲ್ಲಿ ಇರಲಿದೆ ಆಂಡ್ರಾಯ್ಡ್‌ ಪೈ

ಗ್ಯಾಲಕ್ಸಿ ಎಸ್9 ಆಂಡ್ರಾಯ್ಡ್ ಪೈ ಅಪ್ ಡೇಟ್ ನಿಂದಾಗಿ ಮುಂಬರುವ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳ ಬಗ್ಗೆ ಕುತೂಹಲಕಾರಿ ವಿವರಗಳು ತಿಳಿದುಬಂದಿದೆ. ಇತ್ತೀಚೆಗೆ ತಿಳಿದು ಬಂದ ಮಾಹಿತಿಯ ಪ್ರಕಾರ ಮುಂದಿನ ಜನರೇಷನ್ನಿನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಎಸ್ 10 ನಾಲ್ಕು ಮಾಡೆಲ್ ಗಳಲ್ಲಿ ಬಿಡುಗಡೆಗೊಳ್ಳಲಿದೆ.

ಮಡಚುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ Xನಲ್ಲಿ ಇರಲಿದೆ ಆಂಡ್ರಾಯ್ಡ್‌ ಪೈ

ಇದೀಗ XDA ಡೆವಲಪರ್ಸ್ ಕಡೆಯಿಂದ ಬಂದಿರುವ ಹೊಸ ಮಾಹಿತಿಯ ಪ್ರಕಾರ ಮುಂಬರುವ ಈ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಲ್ಲಿ ಚಿಪ್ ಸೆಟ್ ನ್ನು ಬಳಸಲಾಗುತ್ತದೆ. ಅದುವೇ ಸ್ನ್ಯಾಪ್ ಡ್ರ್ಯಾಗನ್ 8150 ಸಾಕೆಟ್. ಅಧಿಕೃತವಾಗಿ ಗ್ಯಾಲಕ್ಸಿ ಎಸ್10 ಡುಯೋ ಫೋನ್ 2019 ಕ್ಕೆ ಬಿಡುಗಡೆಗೊಳ್ಳಲಿದೆ. ಫೋಲ್ಡ್ ಮಾಡಬಹುದಾದ ಅಂದರೆ ಮಡಚುವ ಸ್ಮಾರ್ಟ್ ಫೋನ್ ಬಹುಶ್ಯಃ ಅದರ ಹೆಸರು ಗ್ಯಾಲಕ್ಸಿ ಎಕ್ಸ್ ಈ ವರ್ಷಾಂತ್ಯದಲ್ಲಿ ಬಿಡುಗಡೆಗೊಳಿಸಲಾಗುವುದು ಎಂಬ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಗ್ಯಾಲಕ್ಸಿ ಎಕ್ಸ್ ವೈಶಿಷ್ಟ್ಯತೆಗಳ ಬಗೆಗಿನ ಊಹಾಪೋಹಗಳು :

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಕ್ಸ್ ಮಡಚುವ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ನ್ನು ಹೊಂದಿರಲಿದೆ ಎಂಬ ಬಗ್ಗೆ ಊಹಾಪೋಹಗಳಿದೆ. ಕಂಪೆನಿಯ ಇನ್-ಹೌಸ್ Exynos 9810 ಸಾಕೆಟ್ ಅಥವಾ Exynos 9820 ಸಾಕೆಟ್ ನ್ನು ಒಳಗೊಂಡಿರುತ್ತದೆ. ಅದೂ ಅಲ್ಲದೆ ಇನ್ನೊಂದು ಮಾಹಿತಿಯ ಪ್ರಕಾರ Exynos 9820 ಸಾಕೆಟ್ ಬಳಸಲಾಗುತ್ತದೆ ಎಂದು ಕೂಡ ಹೇಳಲಾಗಿದೆ. ಎಲ್ಲಕ್ಕಿಂತ ಪ್ರಮುಖ ವೈಶಿಷ್ಟ್ಯತೆಯೇ ಫೋಲ್ಡ್ ಮಾಡಬಹುದಾದ ಅಂದರೆ ಮಡಚಬಹುದಾಗಿರುವ ಡಿಸ್ಪ್ಲೇಯನ್ನು ಹೊಂದಿರುವುದು. ಆ ಡಿಸ್ಪ್ಲೇ 7 ಇಂಚಿನಷ್ಟು ಫ್ಲೆಕ್ಸಿಬಲ್ ಆಗಿದ್ದು OLED ಪನೆಲ್ ನ್ನು ಹೊಂದಿರುತ್ತದೆ.

ಇದುವರೆಗೂ ಯಾವಾಗ ಬಿಡುಗಡೆಗೊಳ್ಳುತ್ತದೆ ಎಂಬ ವಿಚಾರವೂ ಗೌಪ್ಯವಾಗಿಯೇ ಉಳಿದಿದೆ. ಯುಎಸ್ ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಕಂಪೆನಿಯ ಡೆವಲಪ್ ಮೆಂಟ್ ಕಾನ್ಫರೆನ್ಸ್ ನಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂದು ನಂಬಲಾಗಿದೆ. ಇದಕ್ಕಿಂತ ಮುಂಚೆ ಇದುವರೆಗೂ ಮಾರುಕಟ್ಟೆಯಲ್ಲಿ ಲಭ್ಯವಿರದ ಅತೀ ದೊಡ್ಡ ಬೆಲೆಯುಳ್ಳ ಫೋನ್ ಒಂದನ್ನು ಸ್ಯಾಮ್ ಸಂಗ್ ಬಿಡುಗಡೆಗೊಳಿಸಲಿದೆ ಮತ್ತು ಅದರ ಬೆಲೆ ಬರೋಬ್ಬರಿ $1,500 (ಅಂದರೆ ಅಂದಾಜು Rs. 1,07,000) ಎಂದು ರೂಮರ್ ಹಬ್ಬಿತ್ತು.

ಮಡಚುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ Xನಲ್ಲಿ ಇರಲಿದೆ ಆಂಡ್ರಾಯ್ಡ್‌ ಪೈ

ದುಬಾರಿ ಬೆಲೆಗೆ ಕಾರಣವೇನು?

ಆದರೆ ಇಂತಹ ದೊಡ್ಡ ಮೊತ್ತಕ್ಕೂ ಒಂದು ಕಾರಣವಿದೆ. ಮಡಚುವ ಸ್ಮಾರ್ಟ್ ಫೋನಿಗೆ ತೆಗೆದುಕೊಳ್ಳಬೇಕಾಗಿರುವ ಪೆಟೆಂಟ್ ನ ವೆಚ್ಚ ಮತ್ತು ಅದರ ಅಭಿವೃದ್ಧಿ ಕಾರ್ಯಗಳಿಂದಾಗಿ ಇಷ್ಟು ದೊಡ್ಡ ಮೊತ್ತದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ನಂಬಲಾಗಿದೆ.

ಇನ್ನುಳಿದ ವೈಶಿಷ್ಟ್ಯತೆಗಳು ಇದುವರೆಗೂ ಪ್ರಕಟಿಸಲಾಗಿಲ್ಲ, ಅಧಿಕೃತವಾಗಿಯೇ ಉಳಿದಿದೆ. ಇತರೆ ಕಂಪೆನಿಗಳ ಸ್ಮಾರ್ಟ್ ಫೋನ್ ಗಳಿಗೆ ಈ ಮಡಚುವ ಡಿವೈಸ್ ಖಂಡಿತ ವಿಭಿನ್ನ ರೀತಿಯಲ್ಲಿ ಸ್ಪರ್ಧೆಯೊಡ್ಡುವ ನಿರೀಕ್ಷೆ ಇದೆ.ಇನ್ನು ಕೆಲವು ದಿನ ಕಾದುನೋಡೊಣ ಈ ಸ್ಯಾಮ್ ಸಂಗ್ ಡಿವೈಸ್ ನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಲಿದೆ.

Best Mobiles in India

English summary
Samsung Galaxy X foldable smartphone to use SD 8150 SoC and run Android Pie. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+