Home
ಮೊಬೈಲ್

ಈ ಗ್ಯಾಲಕ್ಸಿಗಳಲ್ಲಿ ನಿಮ್ಮ ಮೆಚ್ಚಿನದು ಯಾವುದು?

By Super
ಈ ಗ್ಯಾಲಕ್ಸಿಗಳಲ್ಲಿ ನಿಮ್ಮ ಮೆಚ್ಚಿನದು ಯಾವುದು?


ಸ್ಯಾಮ್ ಸಂಗ್ ಕಂಪನಿಯ ಗ್ಯಾಲಕ್ಸಿ ಕುಟುಂಬಕ್ಕೆ ಇದೀಗ ಮತ್ತೆರಡು ಮೊಬೈಲ್ ಗಳು ಸೇರಿಕೊಂಡಿವೆ. ಗ್ಯಾಲಕ್ಸಿ ಮೊಬೈಲೆಂದರೆ ಅದರಲ್ಲಿರುವ ಆಯ್ಕೆ ಬಗ್ಗೆ ಎರಡು ಮಾತಿಲ್ಲ. ಆಧುನಿಕವಾದ, ನಿಮಗೆ ಬೇಕೆಂದ ಆಯ್ಕೆಗಳೆಲ್ಲವೂ ಅದರಲ್ಲಿರುತ್ತೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಯಂಗ್ ಎಂದು ಕರೆಯುವ ಸ್ಯಾಮ್ ಸಂಗ್ ಗ್ಯಾಲಕ್ಸಿ Y ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ W ಎಂಬ ಮೊಬೈಲ್ ಗಳೇ ಹೊಸದಾಗಿ ಸೇರ್ಪಡೆಯಾಗಿರುವ ಫೋನ್ ಗಳು.

ಎರಡೂ ಸ್ಮಾರ್ಟ್ ಫೋನ್ ಗಳು ಆಂಡ್ರಾಯ್ಡ್ ಬೆಂಬಲಿತವಾಗಿದೆ. ಎರಡೂ ಮೊಬೈಲ್ ಗಳು ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ Y ಮೊಬೈಲ್ ವಿಶೇಷತೆ:

* 58 x 104 x 11.5 ಎಂಎಂ ಸುತ್ತಳತೆ

* 3 ಇಂಚಿನ ಡಿಸ್ಪ್ಲೇ

* 262,000 ಬಣ್ಣ ಬೆಂಬಲಿಸುವ ಸ್ಕ್ರೀನ್

* TFT ಟಚ್ ಸ್ಕ್ರೀನ್

* 2.0 ಮೆಗಾ ಪಿಕ್ಸಲ್ ಕ್ಯಾಮೆರಾ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ಬ್ಲೂಟೂಥ್, USB ಪೋರ್ಟ್

ಸ್ಯಾಮ್ ಸಂಗ್ ಗ್ಯಾಲಕ್ಸಿ W ಮೊಬೈಲ್ ವಿಶೇಷತೆ:

* 3.7 ಇಂಚಿನ ಡಿಸ್ಪ್ಲೇ

* ಮಲ್ಟಿ ಟಚ್ ಸೌಲಭ್ಯ, ಅಕ್ಸೆಲೆರೊಮೀಟರ್

* 5 ಮೆಗಾ ಪಿಕ್ಸಲ್ ಕ್ಯಾಮೆರಾ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ಬ್ಲೂಟೂಥ್, USB ಪೋರ್ಟ್, ವೈ-ಫೈ

ಸ್ಯಾಮ್ ಸಂಗ್ ಗ್ಯಾಲಕ್ಸಿ Y ಮೊಬೈಲ್ ಬ್ಯಾಟರಿ 2ಜಿ ಜೊತೆ 17 ಗಂಟೆ ಟಾಕ್ ಟೈಂ ನೀಡಲಿದ್ದು, 850 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ W ಮೊಬೈಲ್ ಕೂಡ ಒಳ್ಳೆಯ ಬ್ಯಾಟರಿ ಬ್ಯಾಕಪ್ ನೀಡಲಿದೆ. ಎರಡೂ ಸಾಧನಗಳಲ್ಲಿ ಸಾಮಾಜಿಕ ತಾಣಗಳ ಅಪ್ಲಿಕೇಶನ್ ನೀಡಲಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ Y ಮೊಬೈಲ್ ಬೆಲೆ 8,000 ರು ಅಥವಾ ಅದಕ್ಕಿಂತ ಕಡಿಮೆ ಬೆಲೆ ಎನ್ನಲಾಗಿದೆ. ಆದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ W ಮೊಬೈಲ್ ಬೆಲೆ ಸ್ಯಾಮ್ ಸಂಗ್ ಗ್ಯಾಲಕ್ಸಿ Y ಗಿಂತ ಸ್ವಲ್ಪ ಹೆಚ್ಚಿರುವುದಾಗಿ ತಿಳಿದುಬಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+