ಹೊಸ ಸ್ಯಾಮ್ ಸಂಗ್ ವೈ ಡ್ಯೂಯೊಸ್ ಬರಲಿದೆ ನೋಡಿ

Posted By: Staff
ಹೊಸ ಸ್ಯಾಮ್ ಸಂಗ್ ವೈ ಡ್ಯೂಯೊಸ್ ಬರಲಿದೆ ನೋಡಿ

ಗ್ರಾಹಕ ಸ್ನೇಹಿ ಸಾಧನಗಳನ್ನು ತಯಾರಿಸುವಲ್ಲಿ ಸ್ಯಾಮ್ ಸಂಗ್ ನದ್ದು ಉತ್ತಮ ಸ್ಥಾನ. ಇದೀಗ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸ್ಯಾಮ್ ಸಂಗ್ ಹೊಸ ಸ್ಮಾರ್ಟ್ ಫೋನನ್ನು ಪರಿಚಯಿಸಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ ಡ್ಯೂಯೊಸ್ ಎಂಬ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದು, 832 MHz ಸಿಂಗರ್ ಕೋರ್ ಪ್ರೊಸೆಸರನ್ನು ಈ ಮೊಬೈಲ್ ಪಡೆದುಕೊಂಡಿದೆ. 2012 ರ ಆರಂಭದಲ್ಲಿ ಈ ಸ್ಮಾರ್ಟ್ ಫೋನ್ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ ಡ್ಯೂಯೊಸ್ ಮೊಬೈಲ್:

* 3.14 ಇಂಚಿನ TFT ಮಲ್ಟಿ ಟಚ್ ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್

* 109 ಗ್ರಾಂ ತೂಕ

* 109.8 x 60 x 11.98 ಎಂಎಂ ಸುತ್ತಳತೆ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊSD ಕಾರ್ಡ್ ಸ್ಲಾಟ್

* 3 ಮೆಗಾ ಪಿಕ್ಸಲ್ ಕ್ಯಾಮೆರಾ, 320 x 240 ಪಿಕ್ಸಲ್ ರೆಸೊಲ್ಯೂಷನ್

* ಡ್ಯೂಯಲ್ ಸಿಮ್ ಆಯ್ಕೆ

* ಯೂ ಟೂಬ್ ಪ್ಲೇಯರ್

* HTML ಬ್ರೌಸರ್

* ಮೈಕ್ರೊ USB ಚಾರ್ಜರ್

* GSM 900/ 1800 MHz ಆಪರೇಟಿಂಗ್ ಫ್ರಿಕ್ವೆನ್ಸಿ

* GPS, ಗ್ಲೋಬರ್ ರೋಮಿಂಗ್, EDGE

* 3.5 ಎಂಎಂ ಆಡಿಯೋ ಜ್ಯಾಕ್

ಈ ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ ಡ್ಯೂಯೊಸ್ ಮೊಬೈಲ್ ನಲ್ಲಿ ಸಂಪರ್ಕಕ್ಕೆಂದು ಬ್ಲೂಟೂಥ್, USB 2.0, ವೈ-ಫೈ ಸಂಪರ್ಕವನ್ನು ಒದಗಿಸಲಾಗಿದೆ. ಮೊಬೈಲ್ ನಲ್ಲಿ ಅಕ್ಸೆಲೆರೊಮೀಟರ್, ಡಿಜಿಟಲ್ ಕಾಂಪಾಸ್ ಸೆನ್ಸಾರ್ ಕೂಡ ಇದೆ.

MP3, AAC, AAC+ ಮತ್ತು MPEG4 ಫಾರ್ಮೆಟ್ ಗಳನ್ನು ಬೆಂಬಲಿಸುವ ವಿಡಿಯೋ ಮತ್ತು ಆಡಿಯೊ ಸೌಲಭ್ಯ ಇದರಲ್ಲಿದೆ. ಜೊತೆಗೆ ಎಫ್ ಎಂ ರೇಡಿಯೋ ಕೂಡ ಸಾಧ್ಯವಾಗಲಿದೆ. 1300 mAh ಲೀಥಿಯಂ ಬ್ಯಾಟರಿ ಪಡೆದುಕೊಂಡಿರುವ ಈ ಮೊಬೈಲ್ ಉತ್ತಮ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ಈ ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ ಡ್ಯೂಯೊಸ್ ಮೊಬೈಲ್ ಬೆಲೆ 10,000 ರೂಪಾಯಿಯಾಗಿರುವ ಅಂದಾಜಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot