ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ Samsung Galaxy Z Flip6 ಗಿಫ್ಟ್! ಬೆಲೆ ಎಷ್ಟು?
ಟೆಕ್ ದೈತ್ಯ ಸ್ಯಾಮ್‌ಸಂಗ್ (Samsung) ಇತ್ತೀಚಿಗೆ ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 (Samsung Galaxy Z Flip6) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದನ್ನು ಪ್ಯಾರಿಸ್ ಒಲಿಂಪಿಕ್ಸ್ 2024 (Paris Olympics 2024) ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ (Paralympic) ಭಾಗವಹಿಸುವ ಕ್ರೀಡಾಪಟುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮತ್ತು ಮಹಿಳೆಯರಿಗೆ ಈ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ವಿಶೇಷವೆಂದರೆ, ಈಗಾಗಲೇ ಈ ಫೋನ್, ಪ್ರೀ-ಆರ್ಡರ್‌ನಲ್ಲಿ ಹೊಸ ದಾಖಲೆ ಬರೆದಿದೆ.
ಸ್ಯಾಮ್‌ಸಂಗ್ ಕಂಪನಿಯು 1998 ರಿಂದ ಒಲಿಂಪಿಕ್ಸ್‌ನ ಪಾಲುದಾರರಾಗಿದೆ. ಹೀಗಾಗಿ, ಒಲಿಂಪಿಕ್ ಕ್ರೀಡಾಕೂಟದ ಸಮಯದಲ್ಲಿ ವಿವಿಧ ವಿಶೇಷ ಮಾದರಿಯ ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 (Samsung Galaxy Z Flip6) ಒಲಿಂಪಿಕ್ ಆವೃತ್ತಿಯನ್ನು ಲಾಂಚ್ ಮಾಡಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಪುರುಷ ಮತ್ತು ಮಹಿಳೆಯರಿಗಾಗಿ ಸ್ಯಾಮ್‌ಸಂಗ್ ಈ ವಿಶೇಷ ಫೋನನ್ನು ಪರಿಚಯಿಸಿದೆ.

Samsung Galaxy Z Flip 6 ಒಲಿಂಪಿಕ್ ಆವೃತ್ತಿಯ ಫೋನ್ ಅನ್ನು ಸುಮಾರು 17,000 ಪ್ಯಾರಿಸ್ ಒಲಿಂಪಿಕ್ ಸ್ಪರ್ಧಿಗಳು, ಪ್ಯಾರಾಲಿಂಪಿಕ್ ಸ್ಪರ್ಧಿಗಳು ಮತ್ತು ಒಲಿಂಪಿಕ್ ಸಮಿತಿಯ ಸದಸ್ಯರಿಗೆ ನೀಡುತ್ತಿದೆ. ಈ ಫೋನ್ ಅನ್ನು ಒಲಿಂಪಿಕ್ ಥೀಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಚಿನ್ನದ ಬಣ್ಣದಲ್ಲಿ ಒಲಿಂಪಿಕ್ ಚಿಹ್ನೆಯನ್ನು ಪ್ರತಿನಿಧಿಸುವ 5 ಉಂಗುರಗಳನ್ನು ಒಳಗೊಂಡಿದೆ. ಇದಕ್ಕಾಗಿ ಸ್ಯಾಮ್‌ಸಂಗ್ ಫ್ರೆಂಚ್ ವಿನ್ಯಾಸಕರೊಂದಿಗೆ ಕೈಜೋಡಿಸಿದೆ.
100GB 5G ಡೇಟಾದೊಂದಿಗೆ ಇ-ಸಿಮ್
ಒಲಂಪಿಕ್ ಆವೃತ್ತಿಯಲ್ಲಿ ವಿನ್ಯಾಸ ಮಾತ್ರವಲ್ಲ, ಸಾಫ್ಟ್‌ವೇರ್‌ನಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಒಲಿಂಪಿಕ್ಸ್‌ನ ಅಧಿಕೃತ ಅಪ್ಲಿಕೇಶನ್‌ಗಳು, 100GB 5G ಮೊಬೈಲ್ ಡೇಟಾದೊಂದಿಗೆ ಪೂರ್ವ-ಸ್ಥಾಪಿತ ಇ-ಸಿಮ್ (eSIM), ಅನ್‌ಲಿಮಿಟೆಡ್ ಡೇಟಾ, ಸಾರ್ವಜನಿಕ ಸಾರಿಗೆ ಬಳಕೆಗಾಗಿ ಪ್ರವೇಶ ಕಾರ್ಡ್‌ಗಳು ಇತ್ಯಾದಿಗಳನ್ನು ಒಳಗೊಂಡಿದೆ. ಈ ಫೋನ್ Galaxy AI ವೈಶಿಷ್ಟ್ಯವನ್ನು ಹೊಂದಿದೆ. ಇದು ನೈಜ ಸಮಯದಲ್ಲಿ ಫೋನ್ ಕರೆಗಳನ್ನು ರವಾನಿಸಬಹುದು. ಇದು ಫ್ರಾನ್ಸ್‌ನಲ್ಲಿರುವ ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಹೆಚ್ಚು ಸಹಾಯ ಮಾಡುತ್ತದೆ.
ಯಾವ ಯಾವ ಅಪ್ಲಿಕೇಶನ್‌ಗಳು ಲಭ್ಯ
ಒಲಿಂಪಿಕ್ಸ್‌ನ ಅಧಿಕೃತ ಅಪ್ಲಿಕೇಶನ್‌ಗಳು ಈ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ. ಪ್ಯಾರಿಸ್ 2024 ಅಪ್ಲಿಕೇಶನ್, ಅಥ್ಲೀಟ್ 365 ಪ್ಲಾಟ್‌ಫಾರ್ಮ್ (ಕ್ರೀಡಾಪಟುಗಳಿಗೆ ಮೀಸಲಾದ ಸಾಮಾಜಿಕ ನೆಟ್‌ವರ್ಕ್) ಮತ್ತು ಸುಲಭ ನ್ಯಾವಿಗೇಷನ್‌ಗಾಗಿ ಟ್ರಾನ್ಸ್‌ಪೋರ್ಟ್ ಅಕ್ರೆಡ್ ಅಪ್ಲಿಕೇಶನ್ ಅನ್ನು ಈ ಫೋನ್ ಒಳಗೊಂಡಿದೆ.

Galaxy Z ಫ್ಲಿಪ್ 6 ಫೋನಿನ ಫೀಚರ್ಸ್
ಡಿಸ್‌ಪ್ಲೇ: ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಸ್ಮಾರ್ಟ್‌ಫೋನ್ 6.7 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. 2640 x 1080 ಪಿಕ್ಸೆಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಇನ್ನು ಕವರ್ ಸ್ಕ್ರೀನ್ 3.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಸಾಮರ್ಥ್ಯದಲ್ಲಿ ಇದೆ. ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ 2 ರಕ್ಷಣೆ ಪಡೆದಿದೆ.
ಪ್ರೊಸೆಸರ್: ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 SoC ಚಿಪ್‌ಸೆಟ್ ಪ್ರೊಸೆಸರ್ ಹೊಂದಿದೆ. ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಒಳಗೊಂಡಿದೆ. ಈ ಫೋನ್ 12GB RAM, 256 ಮತ್ತು 512GB ಸ್ಟೋರೇಜ್ ಅನ್ನು ಹೊಂದಿದೆ.
ಕ್ಯಾಮೆರಾ: ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಫೋನ್ 50+12 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದು 10 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಈ ಫೋನ್ 4000mAh ಬ್ಯಾಟರಿ ಬ್ಯಾಕಪ್ ಸೌಲಭ್ಯ ಸಹ ಪಡೆದುಕೊಂಡಿದೆ. ಜೊತೆಗೆ 25w ವೇಗದ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್, ವೈರ್‌ಲೆಸ್ ಪವರ್‌ಶೇರ್ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ.
Samsung Galaxy Z Flip 6 ಫೋನಿನ ಬೆಲೆ ಎಷ್ಟು?
Samsung Galaxy Z Flip 6 ಫೊನಿನ 12GB + 256GB ಸ್ಟೋರೇಜ್ ಮಾದರಿಯ ಬೆಲೆ ಸುಮಾರು 91,800 ರೂ. ($1,099) ಇದೆ. 512GB ಸ್ಟೋರೇಜ್ ರೂಪಾಂತರದ ಬೆಲೆ ಸುಮಾರು 1,01,800 ರೂ. ($1,219) ಇದೆ. ಈ Galaxy Z Flip 6 ಸ್ಮಾರ್ಟ್‌ಫೋನ್ ಅನ್ನು ಸಿಲ್ವರ್ ಶ್ಯಾಡೋ, ಹಳದಿ, ನೀಲಿ ಮತ್ತು ಪುದೀನ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.


Click it and Unblock the Notifications








