Home
ಮೊಬೈಲ್

Galaxy Z Flip 7 FE: ಮತ್ತೊಂದು ಫ್ಲಿಪ್ ಫೋನ್ ಆಗಮನಕ್ಕೆ ಸಜ್ಜು!

ಈ ವರ್ಷದ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮದಲ್ಲಿ ತನ್ನ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಾದ Galaxy Z Fold 7 ಮತ್ತು Galaxy Z Flip 7 ಅನ್ನು ಅನಾವರಣಗೊಳಿಸಲು ಸ್ಯಾಮ್‌ಸಂಗ್ ಸಿದ್ಧತೆ ನಡೆಸಿದೆ. ಇದರೊಂದಿಗೆ, ಕ್ಲಾಮ್‌ಶೆಲ್ ವಿನ್ಯಾಸದ ಮತ್ತೊಂದು ಫೋನ್ ಅನ್ನು ಪರಿಚಯಿಸುವ ಸಾಧ್ಯತೆ ಇದೆ ಎಂಬ ವದಂತಿಗಳು ಹರಿದಾಡುತ್ತಿವೆ. ವಿಶೇಷವೆಂದರೆ, ಈ ಫೋನ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. Galaxy Z Flip 7 FE ಎಂದು ಕರೆಯಲ್ಪಡುವ ಈ ಹೊಸ ಸ್ಮಾರ್ಟ್‌ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಕೆಲವು ಮಾಹಿತಿ ಸೋರಿಕೆಯಾಗಿದೆ.

ಹೌದು, ವರದಿಗಳ ಪ್ರಕಾರ ಹೊಸ Galaxy Z Flip 7 FE ಫೋನ್ ಕೂಡ Galaxy Z Flip 6 ರಂತೆಯೇ ಅಷ್ಷೇ ಗಾತ್ರದ ಕವರ್ ಸ್ಕ್ರೀನ್ ಅನ್ನು ಹೊಂದಿರಬಹುದು. ಇದರ ಕವರ್ ಸ್ಕ್ರೀನ್ ಸುಮಾರು 3.4 ಇಂಚುಗಳಷ್ಟು ಗಾತ್ರವನ್ನು ಹೊಂದಿರಬಹುದು, ಇದು ನೋಟಿಫಿಕೇಶನ್‌ಗಳು ಮತ್ತು ಇತರ ಮಾಹಿತಿಯನ್ನು ಸುಲಭವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ, ಕಾರ್ಯಕ್ಷಮತೆಗಾಗಿ ಪ್ರಬಲವಾದ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆ ಇದೆ. ಈ ಪ್ರೊಸೆಸರ್ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ವೇಗದ ಗತಿಯ ಕಾರ್ಯಾಚರಣೆಯನ್ನು ನೀಡಬಲ್ಲದು ಎನ್ನಲಾಗಿದೆ.

ಕಾರ್ಯಕ್ಷಮತೆಗಾಗಿ, ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನೊಂದಿಗೆ ಈ ಫೋನ್ 12GB RAM ನೊಂದಿಗೆ ಜೋಡಣೆಯಾಗಬಹುದು, ಇದು ಮಲ್ಟಿಟಾಸ್ಕಿಂಗ್ ಮತ್ತು ಅಪ್ಲಿಕೇಶನ್‌ಗಳ ಸುಗಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಕ್ಯಾಮೆರಾ ವಿಭಾಗದಲ್ಲಿ, Galaxy Z Flip 7 FE ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಸೇರಿದಂತೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು.ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 10-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ನೀಡುವ ನಿರೀಕ್ಷೆಯಿದೆ.

ವಿಶೇಷವೆಂದರೆ, ಈ ಫೋನಿನ ಹಿಂಭಾಗದ ಮತ್ತು ಮುಂಭಾಗದ ಎಲ್ಲಾ ಮೂರು ಕ್ಯಾಮೆರಾಗಳು 4K 60fps ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುವ ಸಾಧ್ಯತೆ ಇದೆ. ಬ್ಯಾಟರಿ ವಿಷಯಕ್ಕೆ ಬಂದರೆ, ಈ ಫೋನ್ 25W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ 4,000mAh ಬ್ಯಾಟರಿಯನ್ನು ಹೊಂದಿರಬಹುದು. ಇದರೊಂದಿಗೆ, ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP48 ರೇಟಿಂಗ್, ಅತ್ಯುತ್ತಮ ದೃಶ್ಯ ಅನುಭವಕ್ಕಾಗಿ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ LTPO ಸೂಪರ್ AMOLED 2X ಡಿಸ್‌ಪ್ಲೆ ಅನ್ನು ಸಹ ಹೊಂದಿರುವ ನಿರೀಕ್ಷೆಯಿದೆ.

Galaxy Z Flip 7 FE: ಮತ್ತೊಂದು ಫ್ಲಿಪ್ ಫೋನ್ ಆಗಮನಕ್ಕೆ ಸಜ್ಜು!

ಬೆಲೆಯ ಕುರಿತು ಹೇಳುವುದಾದರೆ, ಗ್ರೀಕ್‌ನ ಟೆಕ್‌ಮ್ಯಾನಿಯಾಕ್ಸ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಈ Galaxy Z Flip 7 FE ಪೋನ್ ಬೆಲೆ EUR 1,000 (ಸುಮಾರು 96,000 ರೂಪಾಯಿಗಳು) ಕ್ಕಿಂತ ಕಡಿಮೆ ಇರಬಹುದು. ಒಂದು ವೇಳೆ ಇದು ನಿಜವಾದರೆ, ಈ ಫೋನ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಫ್ಲ್ಯಾಗ್‌ಶಿಪ್ ಮಾದರಿಯಾದ Galaxy Z Flip 6 ಗೆ ಸಮಾನವಾದ ಬೆಲೆಯನ್ನು ಹೊಂದಿರುತ್ತದೆ. Galaxy Z Flip 6 ರ 12GB RAM ಮತ್ತು 256GB ಸಂಗ್ರಹಣೆಯ ಮೂಲ ಮಾದರಿಯ ಬೆಲೆ EUR 899 (ಸುಮಾರು 86,000 ರೂಪಾಯಿಗಳು) ರಿಂದ ಪ್ರಾರಂಭವಾಗುತ್ತದೆ..

ಒಟ್ಟಾರೆಯಾಗಿ ಈ ಸೋರಿಕೆಯ ಮಾಹಿತಿಯನ್ನು ಗಮನಿಸಿದರೆ, ಮುಂಬರುವ Galaxy Z Flip 7 FE ಕಳೆದ ವರ್ಷ ಬಿಡುಗಡೆಯಾದ ಪ್ರಮುಖ ಮಾದರಿಯಾದ Galaxy Z Flip 6 ನ ಮರುಬ್ರಾಂಡೆಡ್ ಆವೃತ್ತಿಯಂತೆ ಕಾಣುತ್ತಿದೆ.ಈ ಫೋನ್‌ನ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ ಈ ಕುರಿತು ಇನ್ನಷ್ಟು ಸ್ಪಷ್ಟ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಒಂದು ವೇಳೆ ಸ್ಯಾಮ್‌ಸಂಗ್ ಬೆಲೆಯಲ್ಲಿ ರಾಜಿಯಾದರೆ ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಯಸುವ ಗ್ರಾಹಕರಿಗೆ ಈ ಹೊಸ ಮಾದರಿಯು ಆಕರ್ಷಕ ಆಯ್ಕೆಯಾಗಬಹುದು. ಈ ಕುರಿತು ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Galaxy Z Flip 7 FE is said to be equipped with the Snapdragon 8 Gen 3 SoC, Qualcomm's top-tier chipset for 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+