Home
ಮೊಬೈಲ್

Samsung: ಬರ್ತಿದೆ ಪವರ್​ಫುಲ್ ಫೋನ್; ಬಿಡುಗಡೆ ದಿನಾಂಕ ಬಹಿರಂಗ; ಬೆಲೆ, ಫೀಚರ್ಸ್‌ ಕೂಡ ಲೀಕ್!

ಸ್ಯಾಮ್‌ಸಂಗ್ ಕಂಪನಿಯು ಹೊಸ ಫೋಲ್ಡಬಲ್ ಫೋನನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈಗಾಗಲೇ Samsung Galaxy Z Fold 6 ಫೋನನ್ನು ಬಿಡುಗಡೆ ಮಾಡಲಾಗಿದೆ. ಇದೀಗ, Galaxy Z Fold 6 Slim ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇಡುವ ಕಾಲ ಸನ್ನಿಹಿತವಾಗಿದೆ. ಮಾಹಿತಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್ ಮೊಬೈಲ್ ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಹಾಗಿದ್ರೆ, ಬನ್ನಿ ಈ ಹೊಸ ಫೋನಿನ ವಿಶೇಷತೆಗಳನ್ನು ತಿಳಿಯೋಣ.

ಪ್ರಸಿದ್ಧ ಟೆಕ್ ದೈತ್ಯ ಸ್ಯಾಮ್‌ಸಂಗ್‌ ಶೀಘ್ರದಲ್ಲೇ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಲಿದೆ. ಮುಂಬರುವ ಫೋಲ್ಡಬಲ್ ಫೋನ್ ಅನ್ನು ಅನಾವರಣಗೊಳಿಸಲು ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದು ತೆಳ್ಳಗಿನ, ಪ್ರಾಯಶಃ ಹೆಚ್ಚು ಪ್ರೀಮಿಯಂ ಫೋಲ್ಡಬಲ್ ಫೋನ್‌ನ ಮೇಲೆ ಕೇಂದ್ರೀಕರಿಸುತ್ತದೆ. ಕೊರಿಯನ್ ಪ್ರಮಾಣೀಕರಣ ಸಂಸ್ಥೆಯಲ್ಲಿ Z ಫೋಲ್ಡ್ 6 ಸ್ಲಿಮ್ ಅನ್ನು ಗುರುತಿಸಲಾಗಿದೆ.ಹಾನರ್ ಮ್ಯಾಜಿಕ್ V3 ಫೋನಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಬರ್ತಿದೆ ಪವರ್​ಫುಲ್ ಫೋನ್; ಬಿಡುಗಡೆ ದಿನಾಂಕ ಬಹಿರಂಗ; ಬೆಲೆ, ಫೀಚರ್ಸ್‌ ಲೀಕ್

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್ ಬೆಲೆ

ಸೇಫ್ಟಿ ಕೊರಿಯಾ ಪ್ರಮಾಣೀಕರಣ ಸೈಟ್‌ನಲ್ಲಿ SM-F958N ಮಾದರಿ ಸಂಖ್ಯೆ ಹೊಂದಿರುವ ಸ್ಯಾಮ್‌ಸಂಗ್ ಫೋನನ್ನು ಗುರುತಿಸಲಾಗಿದೆ. SM-F958N ಮುಂಬರುವ ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್ ಫೋನ್ ಎಂದು ಸೂಚಿಸುತ್ತಿದೆ. ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್ ಸುಮಾರು 1,76,135 ರೂ. ($2,100) ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ. ಗ್ಯಾಲಕ್ಸಿ Z ಫೋಲ್ಡ್ 6 ಫೋನಿನ 12+256GB ರೂಪಾಂತರವನ್ನು ಭಾರತದಲ್ಲಿ 1,09,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆಗಿಂತ $200 ಹೆಚ್ಚು ಇರಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್ ಬಿಡುಗಡೆ ದಿನಾಂಕ

ದಕ್ಷಿಣ ಕೊರಿಯಾದ ಪ್ರಕಟಣೆಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್ ಅನ್ನು ದಕ್ಷಿಣ ಕೊರಿಯಾದಲ್ಲಿ ಸೆಪ್ಟೆಂಬರ್ 25 ರಂದು ಬಿಡುಗಡೆ ಮಾಡಬಹುದು. ಬಳಿಕ, ಮುಂಬರುವ ಹುವಾವೇ ಮೇಟ್ X6 ಮತ್ತು ಹಾನರ್ ಮ್ಯಾಜಿಕ್ V3 ಸ್ಮಾರ್ಟ್‌ಫೋನಿಗೆ ಪ್ರತಿಸ್ಪರ್ಧಿಯಾಗಿ ಈ ಫೋಲ್ಡಬಲ್ ಫೋನನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ W25 ಎಂಬ ಹೆಸರಿನೊಂದಿಗೆ ಚೀನಾದಲ್ಲಿ ಲಾಂಚ್ ಮಾಡಲಿದೆ. ಉಳಿದಂತೆ, ಇತರೆ ಮಾರುಕಟ್ಟೆಗಳಲ್ಲಿ ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್‌ನ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಬರ್ತಿದೆ ಪವರ್​ಫುಲ್ ಫೋನ್; ಬಿಡುಗಡೆ ದಿನಾಂಕ ಬಹಿರಂಗ; ಬೆಲೆ, ಫೀಚರ್ಸ್‌ ಲೀಕ್

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್ ಫೋನಿನ ವೈಶಿಷ್ಟ್ಯಗಳು

ಸೋರಿಕೆಯ ಪ್ರಕಾರ, ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್ ಫೋನ್ ಮಡಿಸಿದಾಗ 10 mm ಅನ್ನು ದಪ್ಪ ಹೊಂದಿರಲಿದೆ. ಇದು 6.5 ಇಂಚಿನ ಕವರ್ ಡಿಸ್ಲ್ಪೇ ಮತ್ತು 8 ಇಂಚಿನ ಮಡಿಸಬಹುದಾದ ಮುಖ್ಯ ಡಿಸ್ಲ್ಪೇಯನ್ನು ಹೊಂದಿರುತ್ತದೆ. ವಿಶೇಷವೆಂದರೆ, ಇದು ಸ್ಯಾಮ್‌ಸಂಗ್‌ನ ಮೊದಲ ಫೋಲ್ಡಬಲ್ ಆಗಿರಬಹುದು. ಕಂಪನಿಯು ಈ ಫೋನಿನ ತಯಾರಿಕೆಯಲ್ಲಿ ಟೈಟಾನಿಯಂ ಅನ್ನು ಬಳಸಿದೆ.

ವರದಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್ ಫೋನ್ ಕವರ್ ಡಿಸ್ಲ್ಪೇಯಲ್ಲಿ 10 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ. ಮುಖ್ಯ ಮತ್ತು ಟೆಲಿಫೋಟೋ ಕ್ಯಾಮೆರಾ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, 12 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ಪ್ರಮುಖವಾಗಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಸ್ಲಿಮ್ ಫೋನ್ ಅತ್ಯುತ್ತಮವಾದ ಅಂಡರ್-ಡಿಸ್ಪ್ಲೇ ಕ್ಯಾಮೆರಾ (UPC) ಅಪ್‌ಗ್ರೇಡ್ ಅನ್ನು ಹೊಂದಿರಲಿದೆ. ಸ್ಟ್ಯಾಂಡರ್ಡ್ Z ಫೋಲ್ಡ್ 6 ಫೋನಿನ 4 ಮೆಗಾ ಪಿಕ್ಸೆಲ್ ಲೆನ್ಸ್ ಬದಲಿಗೆ, Z ಫೋಲ್ಡ್ 6 ಸ್ಲಿಮ್ ಮೊಬೈಲ್ 5 ಮೆಗಾ ಪಿಕ್ಸೆಲ್‌ನೊಂದಿಗೆ ಬರಲಿದೆ.

Best Mobiles in India

English summary
Samsung Galaxy Z Fold 6 Slim launch date, design, availability, camera details tipped
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+