Home
ಮೊಬೈಲ್

Samsung: ಜನ ಮೆಚ್ಚಿದ ಫೋನ್‌ಗಳು.. ಯಾವುದು ಬೆಸ್ಟ್‌? ಬೆಲೆ, ಫೀಚರ್ಸ್‌ ಹೇಗಿವೆ? ನೋಡಿ

Galaxy Z Fold 6 Special Edition vs Galaxy s24 Ultra: ಟೆಕ್ ದೈತ್ಯ ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 6ನ ವಿಶೇಷ ಆವೃತ್ತಿಯನ್ನು (Samsung Galaxy Z Fold 6 Special Edition) ಬಿಡುಗಡೆ ಮಾಡಿದೆ. ಈ ಮೊಬೈಲ್ ಗ್ಯಾಲಕ್ಸಿ Z ಪೋಲ್ಡ್‌ 6 ಗಿಂತ ಸ್ವಲ್ಪ ತೆಳುವಾಗಿದೆ. ಇದಲ್ಲದೆ, ಕಂಪನಿಯು ಇದರ ಡಿಸ್ಪ್ಲೇ ಮತ್ತು ಕ್ಯಾಮೆರಾ ಸೆಟಪ್ ಸೇರಿದಂತೆ ಕೆಲವು ಇತರೆ ವೈಶಿಷ್ಟ್ಯಗಳಲ್ಲಿ ಬದಲಾವಣೆ ಮಾಡಿದೆ.

ಕಂಪನಿಯ ಇತ್ತೀಚಿನ ಗ್ಯಾಲಕ್ಸಿ Z ಫೋಲ್ಡ್‌ 6 ವಿಶೇಷ ಆವೃತ್ತಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ s24 ಅಲ್ಟ್ರಾ (Samsung Galaxy s24 Ultra) ಫೋನಿಗೆ ಪ್ರಬಲ ಸ್ಪರ್ಧೆ ನೀಡುತ್ತಿದೆ. ಹೀಗಾಗಿ, ನಾವು ಈ ಲೇಖನದಲ್ಲಿ ಎರಡೂ ಫೋನ್‌ಗಳ ವೈಶಿಷ್ಟ್ಯಗಳು, ಬೆಲೆ ಸೇರಿದಂತೆ ಯಾವೆಲ್ಲಾ ವ್ಯತ್ಯಾಸಗಳಿವೆ ಎಂದು ತಿಳಿಸಿದ್ದೇವೆ. ಈ ಮೂಲಕ ನೀವು, ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದನ್ನು ಖರೀದಿಸಲು ಉತ್ತಮ ಎಂದು ತಿಳಿಯಬಹುದು.

Samsung: ಜನ ಮೆಚ್ಚಿದ ಫೋನ್‌ಗಳು.. ಬೆಲೆ, ಫೀಚರ್ಸ್‌ ಹೇಗಿವೆ? ಯಾವುದು ಬೆಸ್ಟ್‌?

ಗ್ಯಾಲಕ್ಸಿ Z ಫೋಲ್ಡ್‌ ವಿಶೇಷ ಆವೃತ್ತಿ vs ಗ್ಯಾಲಕ್ಸಿ s24 ಅಲ್ಟ್ರಾ ವ್ಯತ್ಯಾಸ

ಬೆಲೆ ವಿವರ

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 6 ವಿಶೇಷ ಆವೃತ್ತಿ ದಕ್ಷಿಣ ಕೊರಿಯಾದಲ್ಲಿ ಮಾತ್ರ ಲಭ್ಯವಿದೆ. ಇದನ್ನು ಕೇವಲ ಒಂದೇ ರೂಪಾಂತರದಲ್ಲಿ ಪರಿಚಯಿಸಲಾಗಿದೆ. ಇದರ ಬೆಲೆ 1,70,000 ರೂ. (27,89,600 KRW) ಆಗಿದೆ. ಗ್ಯಾಲಕ್ಸಿ s24 ಅಲ್ಟ್ರಾ ಫೋನಿನ 12GB + 256GB ರೂಪಾಂತರವನ್ನು 129,999 ರೂ.ಗಳಲ್ಲಿ ಖರೀದಿಸಬಹುದು. ಇನ್ನೂ 12GB + 512GB ರೂಪಾಂತರವನ್ನು 139,999 ರೂ.ಗಳಲ್ಲಿ ಕೊಳ್ಳಬಹುದು. ಮತ್ತು 12GB + 1TB ರೂಪಾಂತರವನ್ನು 159,999 ರೂ. ಬೆಲೆಯಲ್ಲಿ ಖರೀದಿಸಬಹುದು.

ಡಿಸ್ಪ್ಲೇ ವಿವರ

ಗ್ಯಾಲಕ್ಸಿ Z ಫೋಲ್ಡ್‌ 6 ವಿಶೇಷ ಆವೃತ್ತಿಯು 8 ಇಂಚಿನ ಬಾಹ್ಯ ಡಿಸ್ಪ್ಲೇ ಮತ್ತು 6.5 ಇಂಚಿನ ಆಂತರಿಕ ಡಿಸ್ಪ್ಲೇ ಹೊಂದಿದೆ. ಇದು ಗ್ಯಾಲಕ್ಸಿ Z ಫೋಲ್ಡ್ 6 ಗಿಂತ 1.5 ಎಂಎಂ ತೆಳ್ಳಗಿರುತ್ತದೆ ಮತ್ತು ಮೂರು ಗ್ರಾಂ ಹಗುರವಾಗಿರುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ s24 ಅಲ್ಟ್ರಾ ಮೊಬೈಕ್ 6.8 ಇಂಚಿನ ಡೈನಾಮಿಕ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಗ್ಯಾಲಕ್ಸಿ Z ಫೋಲ್ಡ್‌ 6 ವಿಶೇಷ ಆವೃತ್ತಿಯು ಕ್ವಾಲ್ಕಾಮ್‌ನ ಸ್ನಾಪ್ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಆದರೆ, ಗ್ಯಾಲಕ್ಸಿ s24 ಅಲ್ಟ್ರಾ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ.

ಸ್ಟೋರೇಜ್ ಆಯ್ಕೆ

ಗ್ಯಾಲಕ್ಸಿ Z ಫೋಲ್ಡ್‌ 6 ವಿಶೇಷ ಆವೃತ್ತಿಯು 16GB RAM ಮತ್ತು 512GB ಸ್ಟೋರೇಜ್‌ ಒಳಗೊಂಡಿದೆ. ಆದರೆ, ಗ್ಯಾಲಕ್ಸಿ s24 ಅಲ್ಟ್ರಾ ಮೊಬೈಲ್ 12GB RAM ಮತ್ತು 1TB ಸ್ಟೋರೇಜ್ ಒಳಗೊಂಡಿದೆ.

ಕ್ಯಾಮರಾ ಸೆಟಪ್

ಗ್ಯಾಲಕ್ಸಿ Z ಫೋಲ್ಡ್‌ 6 ವಿಶೇಷ ಆವೃತ್ತಿಯು 200 ಮೆಗಾಪಿಕ್ಸೆಲ್ ವೈಡ್ ಆಂಗಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇದು ಆಟೋಫೋಕಸ್‌ನೊಂದಿಗೆ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್‌ಗೆ ಬೆಂಬಲದೊಂದಿಗೆ 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಒಳಭಾಗದಲ್ಲಿ, 4 ಮೆಗಾಪಿಕ್ಸೆಲ್ ಅಂಡರ್ ಡಿಸ್ಪ್ಲೇ ಕ್ಯಾಮೆರಾ ಇದೆ. ಇದರ ಕವರ್ ಡಿಸ್ಪ್ಲೇಯಲ್ಲಿ 10 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಆಂತರಿಕ ಕ್ಯಾಮೆರಾವನ್ನು ಹೊರತುಪಡಿಸಿ, ಎಲ್ಲಾ ಕ್ಯಾಮೆರಾಗಳು 4K 60fps ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ. ಪ್ರಾಥಮಿಕ ಕ್ಯಾಮೆರಾವು 8K 30fps ವಿಡಿಯೋ ರೆಕಾರ್ಡಿಂಗ್ ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ s24 ಅಲ್ಟ್ರಾ ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದು 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾ, 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಇದೆ. ಇದು ಸೆಲ್ಫಿಗಾಗಿ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಗ್ಯಾಲಕ್ಸಿ Z ಫೋಲ್ಡ್‌ 6 ವಿಶೇಷ ಆವೃತ್ತಿಯು 4,400mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ. ಇದು 25W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ s24 ಅಲ್ಟ್ರಾ ಮೊಬೈಲ್ 5,000mAh ಸಾಮರ್ಥ್ಯ ಬ್ಯಾಟರಿ ಹೊಂದಿದೆ. ಇದು 45W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇದು ವೈರ್‌ಲೆಸ್ ಚಾರ್ಜಿಂಗ್ ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

Best Mobiles in India

English summary
Samsung Galaxy Z Fold 6 Special Edition vs Samsung Galaxy s24 Ultra: which phone is the perfect choice for you: see here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+