Home
ಮೊಬೈಲ್

Samsung: ದೈತ್ಯ ಫೋನ್ ಲಾಂಚ್; 200MP ಕ್ಯಾಮೆರಾ, 512GB ಸ್ಟೋರೇಜ್‌.. ದುಬಾರಿ ಬೆಲೆ!

ಸ್ಯಾಮ್‌ಸಂಗ್‌ನ (Samsung) ಹೊಸ ಫೋಲ್ಡಬಲ್ ಫೋನ್ ಸದ್ದಿಲ್ಲದೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹೌದು, ಕಂಪನಿಯು ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಬೋಲ್ಟ್ 6 ಫೋನಿನ (Samsung Galaxy Z Fold 6 Special Edition) ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಮುಂದಿನ ವಾರದಿಂದ ಆಯ್ದ ಕೆಲವು ಮಾರುಕಟ್ಟೆಗಳಲ್ಲಿ ಈ ಮೊಬೈಲ್ ಖರೀದಿಗೆ ಲಭ್ಯವಿರುತ್ತದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ. ಈ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ವರ್ಷದ ಆರಂಭದಲ್ಲಿ ರಿಲೀಸ್ ಆದ ಸ್ಟ್ಯಾಂಡರ್ಡ್ ಗ್ಯಾಲಕ್ಸಿ Z ಬೋಲ್ಟ್ 6 ಫೋನಿಗಿಂತ ತೆಳುವಾದ ಮತ್ತು ಹಗುರವಾಗಿದೆ.

ಸ್ಯಾಮ್‌ಸಂಗ್‌ ನೂತನ ಫೋಲ್ಡಬಲ್ ಫೋನಿನ ಕ್ಯಾಮೆರಾ ಮತ್ತು ಡಿಸ್ಪ್ಲೇನಲ್ಲಿ ಪ್ರಮುಖ ಸುಧಾರಣೆಗಳನ್ನು ತಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಹೊಂದಿದೆ. ಈ ಫೋನ್ 8 ಇಂಚಿನ ಆಂತರಿಕ ಡಿಸ್ಪ್ಲೇ ಮತ್ತು 6.5 ಇಂಚಿನ ಬಾಹ್ಯ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ, 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 4400mAh ಬ್ಯಾಟರಿ ಮತ್ತು 4.5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

Samsung: ದೈತ್ಯ ಫೋನ್ ಲಾಂಚ್! 200MP ಕ್ಯಾಮೆರಾ, 512GB ಸ್ಟೋರೇಜ್‌; ಬೆಲೆ ನೋಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಬೋಲ್ಟ್ 6 ವಿಶೇಷ ಆವೃತ್ತಿಯ ಬೆಲೆ

ದಕ್ಷಿಣ ಕೊರಿಯಾದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಬೋಲ್ಟ್ 6 ವಿಶೇಷ ಆವೃತ್ತಿಯನ್ನು ಸುಮಾರು 1,70,000 ರೂ.ಗೆ ಬಿಡುಗಡೆ ಮಾಡಲಾಗಿದೆ. ಇದು 16GB RAM + 512GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ ಆಗಿದೆ. ಈ ಮೊಬೈಲ್ ಕಪ್ಪು ನೆರಳು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ದಕ್ಷಿಣ ಕೊರಿಯಾದಲ್ಲಿ ಅಕ್ಟೋಬರ್ 25 ರಿಂದ ಸ್ಯಾಮ್‌ಸಂಗ್‌ನ ವೆಬ್‌ಸೈಟ್ ಮತ್ತು ಟಿ ಡೈರೆಕ್ಟ್ ಶಾಪ್, ಕೆಡಿ ಮತ್ತು ಇಯು ಪ್ಲಸ್‌ನಂತಹ ಇತರೆ ಆನ್‌ಲೈನ್ ಚಾನೆಲ್‌ಗಳ ಮೂಲಕ ಮಾರಾಟವಾಗಲಿದೆ.

ಈ ಫೋನ್ ಖರೀದಿ ಮೇಲೆ ಭರಪೂರ ಆಫರ್‌ಗಳು!

ಸ್ಯಾಮ್‌ಸಂಗ್‌ನ ಈ ವಿಶೇಷ ಆವೃತ್ತಿಯನ್ನು ಖರೀದಿಸುವ ಗ್ರಾಹಕರು, ಗ್ಯಾಲಕ್ಸಿ ರಿಂಗ್ (Galaxy Ring), ಗ್ಯಾಲಕ್ಸಿ ವಾಚ್ ಅಲ್ಟ್ರಾ (Galaxy Watch Ultra), ಗ್ಯಾಲಕ್ಸಿ ಬಡ್ಸ್‌ 3 ಪ್ರೊ (Galaxy Buds 3 Pro) ಮತ್ತು ಗ್ಯಾಲಕ್ಸಿ ಟ್ಯಾಬ್ S10 ಅಲ್ಟ್ರಾ (Galaxy Tab S10 Ultra) ಇನ್ನಿತರ ಸ್ಯಾಮ್‌ಸಂಗ್ ಉತ್ಪನ್ನಗಳ ಮೇಲೆ ರಿಯಾಯಿತಿ ಕೂಪನ್‌ ಪಡೆಯಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಬೋಲ್ಟ್ 6 ವಿಶೇಷ ಆವೃತ್ತಿಯ ವೈಶಿಷ್ಟ್ಯಗಳು

ಇದು ಪ್ರಮಾಣಿತ ಆವೃತ್ತಿಗಿಂತ ಸ್ವಲ್ಪ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಅಂದರೆ ಆಂತರಿಕ (ಒಳ) ಮತ್ತು ಬಾಹ್ಯ (ಹೊರ) ಎರಡೂ ಡಿಸ್ಪ್ಲೇಗಳು ದೊಡ್ಡದಾಗಿವೆ. ಬನ್ನಿ, ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಬೋಲ್ಟ್ 6 ವಿಶೇಷ ಆವೃತ್ತಿ ಮತ್ತು ಸ್ಟ್ಯಾಂಡರ್ಡ್ ಆವೃತ್ತಿಯ ನಡುವಿನ ವ್ಯತ್ಯಾಸವೇನು? ತಿಳಿಯೋಣ.

ಡಿಸ್ಪ್ಲೇ ವಿವರ

ನೂತನ ಸ್ಮಾರ್ಟ್‌ಫೋನ್ 8 ಇಂಚಿನ ಆಂತರಿಕ ಡಿಸ್ಪ್ಲೇ ಮತ್ತು 6.5 ಇಂಚಿನ ಬಾಹ್ಯ ಡಿಸ್ಪ್ಲೇಯನ್ನು ಹೊಂದಿದೆ. ಸ್ಟ್ಯಾಂಡರ್ಡ್ ಆವೃತ್ತಿಯು 7.60 ಇಂಚಿನ ಆಂತರಿಕ ಮತ್ತು 6.3 ಇಂಚಿನ ಬಾಹ್ಯ ಡಿಸ್ಪ್ಲೇಯನ್ನು ಹೊಂದಿದೆ. ಮತ್ತು ವಿಶೇಷ ಆವೃತ್ತಿಯು ಸ್ಟ್ಯಾಂಡರ್ಡ್ ಆವೃತ್ತಿಗಿಂತ 1.5 ಎಂಎಂ ತೆಳುವಾದ ಮತ್ತು 3 ಗ್ರಾಂ ಹಗುರವಾಗಿದೆ.

ಪ್ರೊಸೆಸರ್‌ ಸಾಮರ್ಥ್ಯ

ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಅನ್ನು ಹೊಂದಿದೆ. ಇದು 16GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು ಗ್ಯಾಲಕ್ಸಿ ಎಐ (Galaxy AI) ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್‌ಗಳು ಮತ್ತು ಇತರೆ ಸಾಧನಗಳಿಗೆ ವಿಶೇಷವಾದ ಕೃತಕ ಬುದ್ಧಿಮತ್ತೆ (ಎಐ) ವೈಶಿಷ್ಟ್ಯಗಳ ಸೂಟ್ ಆಗಿದೆ.

Samsung: ದೈತ್ಯ ಫೋನ್ ಲಾಂಚ್! 200MP ಕ್ಯಾಮೆರಾ, 512GB ಸ್ಟೋರೇಜ್‌; ಬೆಲೆ ನೋಡಿ

ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್‌ನ ನೂತನ ವಿಶೇಷ ಆವೃತ್ತಿಯು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು 200 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ (ವೈಡ್ ಆಂಗಲ್ ಶೂಟರ್) ಹೊಂದಿದೆ. ಉಳಿದ ಲೆನ್ಸ್‌ಗಳಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಸ್ಟ್ಯಾಂಡರ್ಡ್ ಆವೃತ್ತಿಯು 50 ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ ಹೊಂದಿದೆ. ಇದಕ್ಕೆ ಹೋಲಿಸಿದರೆ ಹೊಸ ಆವೃತ್ತಿಯಲ್ಲಿ ದೊಡ್ಡ ಅಪ್‌ಗ್ರೇಡ್ ಕಾಣಬಹುದು.

ಎರಡು ಬದಲಾವಣೆಗಳನ್ನು ಹೊರತುಪಡಿಸಿ ಸ್ಟ್ಯಾಂಡರ್ಡ್ ಆವೃತ್ತಿ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಬೋಲ್ಟ್ 6 ವಿಶೇಷ ಆವೃತ್ತಿಯ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ಅಂದರೆ, ಗ್ಯಾಲಕ್ಸಿ Z ಬೋಲ್ಟ್ 6 ವಿಶೇಷ ಆವೃತ್ತಿಯು 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಇದೆ. ಸೆಲ್ಫಿಗಾಗಿ, ಕವರ್ ಡಿಸ್ಪ್ಲೇನಲ್ಲಿ 10 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಆಂತರಿಕ ಡಿಸ್ಪ್ಲೇನಲ್ಲಿ 4 ಮೆಗಾಪಿಕ್ಸೆಲ್ ಅಂಡರ್ ಡಿಸ್ಪ್ಲೇ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಬೋಲ್ಟ್ 6 ವಿಶೇಷ ಆವೃತ್ತಿಯು 4400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 25W ವೈರ್ಡ್, 15W ವೈರ್‌ಲೆಸ್ ಮತ್ತು 4.5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

Best Mobiles in India

English summary
Samsung Galaxy Z Fold 6 Special Edition With 200 MP Camera Launched: Price, Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+