Home
ಮೊಬೈಲ್

Samsung: ಗ್ಯಾಲಕ್ಸಿ Z ಫೋಲ್ಡ್ 6 ಅಲ್ಟ್ರಾ ಮೊಬೈಲ್ ಬ್ಯಾಟರಿಗಳಿಗೆ BIS ಪ್ರಮಾಣೀಕರಣ !: ಗೀಕ್‌ಬೆಂಚ್ ವರದಿಯಲ್ಲೇನಿದೆ ?

ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ (Samsung) ಕಂಪನಿಯ ಮೊಬೈಲ್‌ಗಳಿಗೆ ಬಹು ದೊಡ್ಡ ಮಾರುಕಟ್ಟೆ ಇದೆ, ಕೆಲವರಂತು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು (Samsung SmartPhones) ಲಾಂಚ್ ಆಗುವುದನ್ನೇ ಕಾದು ಕುಳಿತು ಮೊಬೈಲ್‌ ಖರೀದಿ ಮಾಡುತ್ತಾರೆ. ಸಂಸ್ಥೆ ಕೂಡ ತನ್ನ ವಿಭಿನ್ನ ಫೀಚರ್ಸ್‌ ಮೂಲಕ ಗ್ರಾಹಕರ ನಿರೀಕ್ಷೆಯನ್ನು ದಿನೇ ದಿನೇ ಹೆಚ್ಚಿಸುತ್ತಲೇ ಬಂದಿದ್ದು ನಿರೀಕ್ಷೆಗೆ ತಕ್ಕಂತಹ ಪ್ರಾಡೆಕ್ಟ್ ಹಾಗೂ ಫೀಚರ್ಸ್‌ ಒದಗಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಬಹು ನಿರೀಕ್ಷಿತ ಗ್ಯಾಲಕ್ಸಿ Z ಫೋಲ್ಡ್ ಹಾಗೂ Z ಫ್ಲಿಪ್ ಮೊಬೈಲ್‌ಗಳನ್ನು ಲಾಂಚ್ ಮಾಡಲು ಸಂಸ್ಥೆ ಸಿದ್ದತೆ ಆರಂಭಿಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 (Samsung Galaxy Z Fold 6) ಬಹು ನಿರೀಕ್ಷಿತ ಈ ಸ್ಮಾರ್ಟ್‌ಫೋನ್‌ ಅನ್ನು ಸಂಸ್ಥೆ ಜುಲೈ ತಿಂಗಳಿನಲ್ಲಿ ಗ್ಯಾಲಕ್ಸಿ Z Flip 6 (Galaxy Z Flip 6) ಜೊತೆಗೆ ಲಾಂಚ್ ಮಾಡುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಸ್ಯಾಮ್‌ಸಂಗ್ ಅಲ್ಟ್ರಾ (Ultra) ಫೋಲ್ಡಬಲ್ ಮಾಡೆಲ್ ಅನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ.

ಗ್ಯಾಲಕ್ಸಿ Z ಫೋಲ್ಡ್ 6 ಅಲ್ಟ್ರಾ ಮೊಬೈಲ್ ಬ್ಯಾಟರಿಗಳಿಗೆ BIS ಪ್ರಮಾಣೀಕರಣ !

ಈ ಹಿಂದೆ ಸೋರಿಕೆಯಾಗಿರುವ ಮಾಹಿತಿಯಂತೆ ಗ್ಯಾಲಕ್ಸಿ Z ಫೋಲ್ಡ್ 6 ಮಾದರಿಯ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ ಜೊತೆಗೆ ಬಿಡುಗಡೆಯಾಗಲಿವೆ ಎಂದು ಗೀಕ್‌ಬೆಂಚ್ ತನ್ನ ಪಟ್ಟಿಯಲ್ಲಿ ಸೂಚಿಸಿದೆ ಎಂದು ವದಂತಿಯಾಗಿದೆ. ಈ ವದಂತಿಯ ಪ್ರಕಾರ ಗ್ಯಾಲಕ್ಸಿ Z ಫೋಲ್ಡ್ 6 ಅಲ್ಟ್ರಾದ ಬ್ಯಾಟರಿ ಘಟಕಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿಂದ ಪ್ರಮಾಣೀಕರಣವನ್ನು ಪಡೆದಿವೆ ಎಂದು ವರದಿಯಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 (Samsung Galaxy Z Fold 6) ಅನ್ನು ಗುರುತಿಸಿದ ಗೀಕ್‌ಬೆಂಚ್:

ಮೇ 29 ರಂದು ಗೀಕ್‌ಬೆಂಚ್ ವೆಬ್‌ಸೈಟ್‌ನಲ್ಲಿ SM-F956B ಮಾದರಿಯ ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಇದು ಗ್ಯಾಲಕ್ಸಿ Z ಫೋಲ್ಡ್ 6 ನ ಭಾರತೀಯ ವೇರಿಯಂಟ್ ಎಂದು ಗೀಕ್‌ಬೆಂಚ್ ಊಹಿಸಿದೆ. ಪಟ್ಟಿಯು ಹ್ಯಾಂಡ್‌ಸೆಟ್ ಮಲ್ಟಿ ಕೋರ್ ಪರೀಕ್ಷೆಯಲ್ಲಿ 3,582 ಅಂಕಗಳು ಮತ್ತು ಒನ್ ಕೋರ್ ಪರೀಕ್ಷೆಯಲ್ಲಿ 1,476 ಅಂಕಗಳನ್ನು ಗಳಿಸಿದೆ ಎಂದು ಬಹಿರಂಗಪಡಿಸಿದೆ. ಬೆಂಚ್‌ಮಾರ್ಕ್ ಈ ತಿಂಗಳ ಆರಂಭದಲ್ಲಿ ಮಾದರಿ ಸಂಖ್ಯೆ SM-F956U ಜೊತೆಗೆ ಮಡಿಚಬಹುದಾದ ಪುಸ್ತಕ ಶೈಲಿಯ US ರೂಪಾಂತರದ ಕುರಿತು ಮಾಹಿತಿ ನೀಡಿತ್ತು.

ಗೀಕ್‌ಬೆಂಚ್‌ ಗ್ಯಾಲಕ್ಸಿ Z ಫೋಲ್ಡ್ 6 ಪಟ್ಟಿಯು 'ಪೈನಾಪಲ್' ಎಂಬ ಆಕ್ಟಾ-ಕೋರ್ ಸಿಪಿಯು ಸಂಕೇತವನ್ನು ಮತ್ತು 'ವಾಲ್ಟ್' ಹೆಸರಿನ ಗವರ್ನರ್ ಅನ್ನು ಹೊಂದಿದೆ ಎಂದು ತಿಳಿಸಿದೆ. ಇದರ ಪ್ರಕಾರ 2.27 GHz ನ ಆರಂಭಿಕ ಆವರ್ತನ ಮತ್ತು 3.40GHz ನ ಗರಿಷ್ಠ ಆವರ್ತನವನ್ನು ಹೊಂದಿದೆ ಎಂದು ತಿಳಿಸಿದೆ. ಈ CPU ಆವರ್ತನಗಳು ಮತ್ತು ಸಂಕೇತಗಳು ಗ್ಯಾಲಕ್ಸಿಗಾಗಿ ಸ್ನಾಪ್‌ಡ್ರಾಗನ್ 8 Gen 3 ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಇರುವುದನ್ನು ಸೂಚಿಸುತ್ತದೆ. ಈ ಕಸ್ಟಮ್ ಚಿಪ್‌ಸೆಟ್ ಸ್ನಾಪ್‌ಡ್ರಾಗನ್ 8 Gen 3 SoC ಯ ಓವರ್‌ಲಾಕ್ ಮಾಡಿದ ಆವೃತ್ತಿಯಾಗಿದೆ. ಇದಲ್ಲದೆ, ಪಟ್ಟಿಯು 12GB RAM ಮತ್ತು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಹೊಂದಿರುವುದಾಗಿ ತೋರಿಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಅಲ್ಟ್ರಾ ಬ್ಯಾಟರಿಗಳಿಗೆ BIS ಪ್ರಮಾಣೀಕರಣ:

ಈ ನಡುವೆ, ಎರಡು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬ್ಯಾಟರಿಗಳಾದ EB-BF959ABE ಮತ್ತು EB-BF959ABY ಗಳಿಗೆ ಇತ್ತೀಚೆಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿಂದ ಪ್ರಮಾಣೀಕರಣ ಪಡೆದಿವೆ ಎಂದು ಮೈ ಸ್ಮಾರ್ಟ್ ಪ್ರೈಸ್ (MySmartPrice) ವರದಿ ಮಾಡಿದೆ. ಈ ಬ್ಯಾಟರಿ ಘಟಕಗಳು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 6 ಅಲ್ಟ್ರಾ (Samsung Galaxy Z Fold 6 Ultra) ಗೆ ಸೇರಿವೆ ಎಂದು ಹೇಳಲಾಗುತ್ತಿದೆ.

ಸ್ಯಾಮ್‌ಸಂಗ್ ಮುಂಬರುವ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳಿಗೆ ಕೆಲವು ಪ್ರದೇಶಗಳಲ್ಲಿ ಇನ್-ಹೌಸ್ ಎಕ್ಸಿನೋಸ್ (Exynos) ಚಿಪ್‌ಸೆಟ್ ಅನ್ನು ಬಳಸಲಿದೆ ಎಂದು ವದಂತಿಗಳಿವೆ. ಈ ವದಂತಿಗಳ ಆಧಾರದಲ್ಲಿ ಬೆಂಚ್‌ ಮಾರ್ಕ್ ವರದಿ ಮಾಡಿದೆ. ಇತ್ತೀಚಿನ ವರದಿಯ ಪ್ರಕಾರ ಜುಲೈ 10ರಂದು ಪ್ಯಾರಿಸ್‌ನಲ್ಲಿ ನಡೆಯಬಹುದಾದ ಗ್ಯಾಲಕ್ಸಿ ಅನ್‌ಬಾಕ್ಸ್‌ ಈವೆಂಟ್‌ನಲ್ಲಿ ಇತ್ತೀಚಿನ ಮಡಿಚಬಹುದಾದ ಶ್ರೇಣಿಯ ಮೊಬೈಲ್‌ಗಳನ್ನು ಅನಾವರಣ ಮಾಡಬಹುದು ಎಂದು ಊಹಿಸಲಾಗಿದೆ.

Best Mobiles in India

English summary
On May 29, a smartphone with model number SM-F956B was spotted on the Geekbench website, which Geekbench speculates to be the Indian variant of the Samsung Galaxy Z Fold 6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+