Home
ಮೊಬೈಲ್

2,00,000 ಬಾರಿ ಸತತ ಮಡಚಿ ತೆರೆದಾಗ Galaxy Z Fold 7 ಪೋನ್ ಏನಾಯ್ತು ಗೊತ್ತಾ?

ಟೆಕ್ ದೈತ್ಯ Samsung ಕಂಪೆನಿಯು ತನ್ನ ಇತ್ತೀಚಿನ Galaxy Z Fold 7 ಫೋನ್ ಮೂಲಕ ಸುದ್ದು ಮಾಡುತ್ತಿದೆ. 2019 ರಲ್ಲಿ Samsung ಹೊಸದಾಗಿ Galaxy Z Fold 7 ಅನ್ನು ಬಿಡುಗಡೆ ಮಾಡಿದಾಗ ಮಡಚಬಹುದಾದ ಸ್ಮಾರ್ಟ್‌ಫೋನ್ ತಂತ್ರಜ್ಞಾನಕ್ಕೆ ಹೊಸ ಅಧ್ಯಾಯ ಬರೆಯಿತು. ಏಳು ವರ್ಷಗಳ ನಂತರ, ಕಂಪನಿಯು ತನ್ನ ಇತ್ತೀಚಿನ ಮಾದರಿ, Galaxy Z Fold 7ಅನ್ನು ಪರಿಚಯಿಸಿದೆ. ಇದು ಇಂದಿನವರೆಗಿನ ಅತ್ಯಂತ ತೆಳುವಾದ ಮತ್ತು ಹಗುರವಾದ ಮಡಚಬಹುದಾದ ಫೋನ್ ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್ ಪ್ರಿಯರು ಕೂಡ ಈ ಸಾಧನದತ್ತ ಹೆಚ್ಚು ಆಕರ್ಷಕರಾಗಿದ್ದಾರೆ.

Samsung ತ ಹೊಸನ್ನ Galaxy Z Fold 7 ಫೋನ್ ಅನ್ನು 5,00,000 ಬಾರಿ ಮಡಚಿ ತೆರೆದು ಪರೀಕ್ಷಿಸಲಾಗಿದೆ ಎಂದು ಹೇಳಿಕೊಂಡಿದೆ. ಇದು ಹಿಂದಿನ ಮಾದರಿ Galaxy Z Fold 6ಕ್ಕೆ ನೀಡಲಾಗಿದ್ದ 2,00,000 ಬಾರಿಗಿಂತ ಹೆಚ್ಚು. ಈ ಅಂಕಿ ಅಂಶಗಳನ್ನು ನಾವು ಒಮ್ಮೆ ವಿಶ್ಲೇಷಿಸಿದರೆ, Galaxy Z Fold 7 ಅನ್ನು ದಿನಕ್ಕೆ 100 ಬಾರಿ ಫೋನ್ ಮಡಚಿದರೂ ಸುಮಾರು 10 ವರ್ಷಗಳ ಕಾಲ ಬಾಳಿಕೆ ಬರಬೇಕು ಮತ್ತು ದಿನಕ್ಕೆ 200 ಬಾರಿ ಮಡಚಿದರೆ, ಅದು 6 ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯಬೇಕು ಎಂದು ಅಂದಾಜಿಸಬಹುದು. ಆದರೆ, ಈ ಕಂಪನಿಯ ಹೇಳಿಕೆಗಳು ನಿಜವಾಗಿಯೂ ಪ್ರಾಯೋಗಿಕವಾಗಿದೆಯೇ?

ಗ್ರಾಹಕರಿಗೆ ಮಡಚಬಹುದಾದ ಫೋನ್ ಬಗ್ಗೆ ಇನ್ನು ಭಯ ಹೋಗಿಲ್ಲವಾದ್ದರಿಂದ, ಇಂತಹದೊಂದು ಪ್ರಶ್ನೆ ಮೂಡುವುದು ಸಾಮಾನ್ಯ. Galaxy Z Fold 7 ಫೋನಿನ ವಿಶಿಷ್ಟ ವಿನ್ಯಾಸ ಮತ್ತು ಕಾರ್ಯಕ್ಷಮತೆಯ ಹೊರತಾಗಿ, ಈ ಸಾಧನದ ಬಾಳಿಕೆಯ ಬಗ್ಗೆ ಗ್ರಾಹಕರಲ್ಲಿ ಬಹಳಷ್ಟು ಪ್ರಶ್ನೆಗಳಿವೆ. ವಿಶೇಷವಾಗಿ, ಇದರ ಹಿಂಜ್ ಎಷ್ಟು ಬಾಳಿಕೆ ಬರುತ್ತದೆ ಎಂಬುದು ಮುಖ್ಯವಾದ ಕಳವಳವಾಗಿದೆ.ಇ ದಕ್ಕಾಗಿ, ಯೂಟ್ಯೂಬರ್ ಓರ್ವರು 2,00,000 ಬಾರಿ ಮಡಚಿ ತೆರೆದು Galaxy Z Fold 7 ಫೋನ್ ಅನ್ನು ಪರೀಕ್ಷಿಸಿದ್ದಾರೆ.! ಈ ಮೂಲಕ Galaxy Z Fold 7 ಪೋನ್ ಪ್ರಾಯೋಗಿಕವಾಗಿ ಹೇಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ.

'ಟೆಕ್ ಇಟ್' ಎಂಬ ಯೂಟ್ಯೂಬ್ ಚಾನೆಲ್‌ನ ಯೂಟ್ಯೂಬರ್ ಓರ್ವರು, Galaxy Z Fold 7 ಫೋನ್ ಅನ್ನು 2,00,000 ಬಾರಿ ಹಸ್ತಚಾಲಿತವಾಗಿ ಮಡಚಿ ಬಿಚ್ಚುವ ಮೂಲಕ ಪರೀಕ್ಷಿಸಿದರು. ಈ ಪರೀಕ್ಷೆಯು ಕೇವಲ ಐದು ದಿನಗಳಲ್ಲಿ ಪೂರ್ಣಗೊಂಡಿದೆ ಮತ್ತು ಫಲಿತಾಂಶಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿವೆ. ಆರಂಭದಲ್ಲಿ, 6,000-10,000 ಮಡುಚುವಿಕೆ ನಂತರ, ಫೋನ್‌ಗೆ "ರೀಬೂಟ್ ದೋಷ" ಕಾಣಿಸಿಕೊಂಡಿದೆ. ನಂತರ, ಈ ದೋಷವು ಪ್ರತಿ 10,000 ಮಡಿಕೆಗಳ ನಂತರ ಮತ್ತೆ ಕಾಣಿಸಿಕೊಳ್ಳುತ್ತಲೇ ಇತ್ತು. ಇದು ಸಾಧನದ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆಗಳಿರುವುದನ್ನು ಸೂಚಿಸಬಹುದು.!

ಈ ಪರೀಕ್ಷೆಯು ಮುಂದುವರೆದಂತೆ, 46,000 ಮಡುಚುವಿಕೆ ನಂತರ ಹಿಂಜ್‌ನಿಂದ ಸಣ್ಣ ಕ್ರೀಕಿಂಗ್ ಶಬ್ದಗಳು ಬರಲು ಪ್ರಾರಂಭಿಸಿದವು. ಫೋನ್‌ನ ಕಾರ್ಯಕ್ಷಮತೆ ಸರಿಯಾಗಿದ್ದರೂ, ಇದು ಹಿಂಜ್‌ನಲ್ಲಿ ಒತ್ತಡ ಹೆಚ್ಚಾಗುತ್ತಿರುವುದರ ಸೂಚನೆಯಾಗಿತ್ತು. ಆಘಾತಕಾರಿಯಾಗಿ, 75,000 ಮಡುಚುವಿಕೆ ಬಳಿಕ, ಹಿಂಜ್‌ನಿಂದ ಒಂದು ಅಜ್ಞಾತ "ಕಪ್ಪು ದ್ರವ" ಸೋರಿಕೆಯಾಗಲು ಪ್ರಾರಂಭಿಸಿತು. ಈ ದ್ರವ ನಂತರ ಕಣ್ಮರೆಯಾದರೂ, 1,05,000 ಮಡುಚುವಿಕೆ ನಂತರ ಮತ್ತೆ ಕಾಣಿಸಿಕೊಂಡಿತು. ಈ ಪರೀಕ್ಷೆಯು 1,75,000 ಮಡುಚುವಿಕೆ ಹತ್ತಿರ ತಲುಪಿದಾಗ, ಇನ್ನಷ್ಟು ಗಂಭೀರ ಸಮಸ್ಯೆಗಳು ಕಾಣಿಸಿಕೊಂಡವು.

1,75,000 ಮಡುಚುವಿಕೆ ಹತ್ತಿರದಲ್ಲಿ ಫೋನ್‌ನ ಸ್ಪೀಕರ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದವು. ಯೂಟ್ಯೂಬರ್ ಗಮನಿಸಿದಂತೆ, ಈ ಹಂತದಲ್ಲಿ ಹಿಂಜ್ ಹೆಚ್ಚು ಸುಗಮವಾಗಿದ್ದು, ಅದರ ಸುಗಮ ಕಳೆದುಕೊಂಡಿತ್ತು. ಈ ಎಲ್ಲಾ ಸಮಸ್ಯೆಗಳ ಹೊರತಾಗಿಯೂ, Galaxy Z Fold 7 ಫೋನ್ ತನ್ನ 2,00,000 ಮಡಿಕೆಗಳ ಮೈಲಿಗಲ್ಲನ್ನು ತಲುಪುವಲ್ಲಿ ಯಶಸ್ವಿಯಾಯಿತು. ಪರೀಕ್ಷೆಯ ಕೊನೆಯಲ್ಲಿ, ಫೋನ್‌ನ ಆಂತರಿಕ ಪ್ರದರ್ಶನದಲ್ಲಿ ಯಾವುದೇ ಡೆಡ್ ಪಿಕ್ಸೆಲ್‌ಗಳು ಕಂಡುಬರಲಿಲ್ಲ ಮತ್ತು ಟಚ್ ರೆಸ್ಪಾನ್ಸ್ ನಿಖರವಾಗಿ ಕೆಲಸ ಮಾಡುತ್ತಿತ್ತು. ಆದರೆ, ಮಧ್ಯದಲ್ಲಿ ಕಾಣಿಸಿಕೊಂಡ ಕ್ರೀಸ್ ಹೆಚ್ಚು ಸ್ಪಷ್ಟವಾಗಿತ್ತು.

2,00,000 ಬಾರಿ ಸತತ ಮಡಚಿ ತೆರೆದಾಗ Galaxy Z Fold 7 ಪೋನ್ ಏನಾಯ್ತು ಗೊತ್ತಾ?

ಈ ಪರೀಕ್ಷೆಯ ಫಲಿತಾಂಶಗಳು ಸ್ಯಾಮ್‌ಸಂಗ್‌ ಕಂಪೆನಿಯ ಅಧಿಕೃತ ಹೇಳಿಕೆಗಳಿಗಿಂತ ಭಿನ್ನವಾಗಿದ್ದರೂ, ಒಂದು ವಿಷಯ ಸ್ಪಷ್ಟವಾಗುತ್ತದೆ. ಮಡಚಬಹುದಾದ ಸ್ಮಾರ್ಟ್‌ಫೋನ್ ತಂತ್ರಜ್ಞಾನವು ಇನ್ನೂ ಪರಿಪೂರ್ಣವಾಗಬೇಕಾಗಿದೆ. ಸಾಮಾನ್ಯ ಬಳಕೆದಾರರಿಗೆ ಇಂತಹ ತೀವ್ರ ಪರೀಕ್ಷೆಯ ಫಲಿತಾಂಶಗಳು ನೇರವಾಗಿ ( ನಿರಂತರ ಪರೀಕ್ಷೆಯ ಒತ್ತಡವು ಕಾರಣವಾಗಿರುವ ಸಾಧ್ಯತೆ ಕೂಡ ಇದೆ) ಅನ್ವಯಿಸದಿರಬಹುದು, ಆದರೆ ಇದು ಈ ತಂತ್ರಜ್ಞಾನದ ಮಿತಿಗಳನ್ನು ತೋರಿಸುತ್ತದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
A YouTuber has tested the Galaxy Z Fold 7 by folding it 200,000 times, providing insights into the device's durability.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+