Home
ಮೊಬೈಲ್

ಬ್ರೇಕಿಂಗ್ ನ್ಯೂಸ್!..ವಿಶ್ವದ ಮೊದಲ ಮಡಚುವ ಫೋನ್ 'ಗ್ಯಾಲಾಕ್ಸಿ ಪೋಲ್ಡ್' ರಿಲೀಸ್!

ಭವಿಷ್ಯದ ಸ್ಮಾರ್ಟ್‌ಫೋನ್ ಎಂದೇ ಗುರುತಿಸಿಕೊಂಡಿರುವ ಮಡಚುವ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ತರುವಲ್ಲಿ ತಂತ್ರಜ್ಞಾನ ದಿಗ್ಗಜ ಸ್ಯಾಮ್‌ಸಂಗ್ ಮೊದಲ ಹೆಜ್ಜೆ ಇಟ್ಟಿದೆ. ಮೊಬೈಲ್ ಮಾರುಕಟ್ಟೆಯ ನಿರಿಕ್ಷೆಯಂತೆಯೇ ವಿಶ್ವದ ಮೊಟ್ಟ ಮೊದಲ 7.3 ಇಂಚಿನ ಟ್ಯಾಬ್ಲೆಟ್ ರೀತಿಯ ಮೊದಲ ಮಡಚುವ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ನಡೆದ ದೊಡ್ಡ ಸಮಾರಂಭ ಒಂದರಲ್ಲಿ ಸ್ಯಾಮ್‌ಸಂಗ್ ವಿಶ್ವದ ಮೊಟ್ಟ ಮೊದಲ ಮಡಚುವ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹೌದು, ಪ್ರಪಂಚದ ಮೊದಲ 7.3 ಇಂಚಿನ ಮಡಚಬಹುದಾದ ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇಯೊಂದಿಗೆ 'ಗ್ಯಾಲಾಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಆರು ಕ್ಯಾಮೆರಾಗಳು, 12 ಜಿಬಿ ರಾಮ್ ಮತ್ತು 512 ಜಿಬಿ ಆಂತರಿಕ ಶೇಖರಣಾ ಬೆಂಬಲದೊಂದಿಗೆ 7nm 64-ಬಿಟ್ ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ವಿಶ್ವ ಮೊಬೈಲ್ ಮಾರುಕಟ್ಟೆಯನ್ನು ಮಂತ್ರಮುಗ್ದಗೊಳಿಸಿದ್ದು, ಫೀಚರ್ಸ್‌ಗೆ ತಕ್ಕಂತೆ 1980 ಡಾಲರ್‌ಗಳಷ್ಟು ಭಾರೀ ಬೆಲೆಯನ್ನು ಹೊಂದುವ ಮೂಲಕ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಬ್ರೇಕಿಂಗ್ ನ್ಯೂಸ್!..ವಿಶ್ವದ ಮೊದಲ ಮಡಚುವ ಫೋನ್ 'ಗ್ಯಾಲಾಕ್ಸಿ ಪೋಲ್ಡ್' ರಿಲೀಸ್!

ವಿಶ್ವದಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್ ಆಗುವ ನಿರೀಕ್ಷೆಯಲ್ಲಿ ಬಿಡುಗಡೆಯಾದ 'ಗ್ಯಾಲಾಕ್ಸಿ ಪೋಲ್ಡ್' ಮೊಬೈಲ್ ರಸಿಕರನ್ನು ದಂಗುಬಡಿಸುವಂತಹ ವಿಶೇಷ ತಂತ್ರಜ್ಞಾನಗಳನ್ನು ಹೊತ್ತು ಬಂದಿದೆ. ಹಾಗಾದರೆ, ಸ್ಪೇಸ್ ಸಿಲ್ವರ್, ಕಾಸ್ಮೊಸ್ ಬ್ಲಾಕ್, ಮಾರ್ಸ್ ಗ್ರೀನ್ ಮತ್ತು ಆಸ್ಟ್ರೋ ಬ್ಲೂ ಬಣ್ಣಗಳಲ್ಲಿ ವಿಶ್ವ ಮೊಬೈಲ್ ರಸಿಕರನ್ನು ಮನಸೆಳೆಯಲು ಬಂದಿರುವ 'ಗ್ಯಾಲಾಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಹೇಗಿದೆ?, ಮೊಬೈಲ್ ಜಗತ್ತು ಕಣ್ಣರಳಿಸಿ ನೋಡುವಂತಹ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗ್ಯಾಲಾಕ್ಸಿ ಫೋಲ್ಡ್ ವಿನ್ಯಾಸ ಹೇಗಿದೆ?

ಗ್ಯಾಲಾಕ್ಸಿ ಫೋಲ್ಡ್ ವಿನ್ಯಾಸ ಹೇಗಿದೆ?

ಭವಿಷ್ಯದಲ್ಲಿ ಇಂತಹದೊಂದು ಮೊಬೈಲ್ ಮಾರುಕಟ್ಟೆಗೆ ಬರಲಿದೆ ಎಂಬ ಊಹೆಯನ್ನು ಮಾಡಿಕೊಳ್ಳದಂತೆ ಗ್ಯಾಲಾಕ್ಸಿ ಫೋಲ್ಡ್ ಸ್ಮಾರ್ಟ್‌ಫೋನ್ ವಿನ್ಯಾಸಗೊಂಡಿದೆ. ಮಡುಚಿದಾಗ ಕೇವಲ 4.6 ಇಂಚಿನ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು ಪೂರ್ತಿ ತೆರೆದಾಗ 7.3 ಇಂಚಿನ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಮುಂಬಾಗದ ಬಲಾಭಾಗದಲ್ಲಿ ಮೂರು ಸೆಲ್ಫೀ ಕ್ಯಾಮೆರಾಕ್ಕೆ ಸಪೋರ್ಟ್ ಮಾಡುವಂತಹ ನೋಚ್ ಹಾಗೂ ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ವಿನ್ಯಾಸಕ್ಕೆ ಸರಿಸಾಟಿಯಾದ ಸ್ಮಾರ್ಟ್‌ಫೋನ್ ಮತ್ತೊಂದಿಲ್ಲ.

ಗ್ಯಾಲಾಕ್ಸಿ ಫೋಲ್ಡ್ ಡಿಸ್‌ಪ್ಲೇ ಹೇಗಿದೆ?

ಗ್ಯಾಲಾಕ್ಸಿ ಫೋಲ್ಡ್ ಡಿಸ್‌ಪ್ಲೇ ಹೇಗಿದೆ?

ಇದೊಂದು ಮಡಚುವ ಸ್ಮಾರ್ಟ್‌ಫೋನ್ ಆಗಿರುವುದರಿಂದ ಎರಡು ಡಿಸ್‌ಪ್ಲೇ ಸ್ರೀನ್‌ಗಳನ್ನು ಹೊಂದಿರುವುದನ್ನು ನೀವು ಸುಲಭವಾಗಿ ತಿಳಿಯಬಹುದಾಗಿದೆ. 4.6 ಇಂಚಿನ ಹಾಗೂ 7.3 ಇಂಚಿನ ಸ್ಕ್ರೀನ್ ಎರಡು ಸ್ಕ್ರೀನ್‌ಗಳು ಗ್ಯಾಲಾಕ್ಸಿ ಫೋಲ್ಡ್ ಫೋನಿನ ಪ್ರಮುಖ ವಿಶೇಷತೆಯಾಗಿದೆ. ಸ್ಯಾಮ್ಸಂಗ್ ಹೇಳುವ ಪ್ರಕಾರ, ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಅತ್ಯಂತ ವಿಶೇಷವಾಗಿದ್ದು, ಸ್ಮಾರ್ಟ್‌ಫೋನ್ ಅನ್ನು ಮನಬಂದಂತೆ ಪದರ ಮಾಡಲು ಅನುಮತಿಸುತ್ತದೆ ಎಂದು ತಿಳಿಸಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಮೊದಲೇ ಹೇಳಿದಂತೆ ಸ್ಯಾಮ್ಸಂಗ್ ಗ್ಯಾಲಾಕ್ಸಿ ಪದರ 7nm ಆಕ್ಟಾ-ಕೋರ್ ಪ್ರೊಸೆಸರ್ನಿಂದ ಶಕ್ತಿಯನ್ನು ಹೊಂದಿದೆ ಮತ್ತು ಡ್ಯುಯಲ್ ಬ್ಯಾಟರಿ ಸಿಸ್ಟಮ್ ಅನ್ನು ಪ್ಯಾಕ್ ಮಾಡುತ್ತದೆ. ಇದು ವೈರ್ಲೆಸ್ ಪವರ್ ಶೇರ್ ಸಿಸ್ಟಮ್ ಅನ್ನು ಬೆಂಬಲಿಸುತ್ತದೆ, ಇದು ಗ್ಯಾlAಕ್ಸಿ ಪದರವನ್ನು ಸ್ವತಃ ಚಾರ್ಜ್ ಮಾಡಲು ಮತ್ತು ಎರಡನೆಯ ಸಾಧನವನ್ನು ಏಕಕಾಲದಲ್ಲಿ ಅನುಮತಿಸುತ್ತದೆ. ಇನ್ನು ಫೋನ್ 12 ಜಿಬಿ ರಾಮ್ ಮತ್ತು 512 ಜಿಬಿ ಆಂತರಿಕ ಶೇಖರಣಾ ಬೆಂಬಲವನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.

ಒಟ್ಟು ಆರು ಕ್ಯಾಮೆರಾಗಳು!

ಒಟ್ಟು ಆರು ಕ್ಯಾಮೆರಾಗಳು!

'ಗ್ಯಾಲಾಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಒಟ್ಟು ಆರು ಕ್ಯಾಮೆರಾಗಳನ್ನು ಪ್ಯಾಕ್ ಮಾಡುವ ಮೊದಲ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮಡುಚಿದಾದ 10MP+f/2.2 ಸಾಮರ್ಥ್ಯದ ಒಂದು ಸೆಲ್ಫೀ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ 16MP ಅಲ್ಟ್ರಾ ವಿಶಾಲ ಕೋನ ಮಸೂರ ಮತ್ತು ಎರಡು 12MP ವಿಶಾಲ ಕೋನ ಮತ್ತು ಟೆಲಿಫೋಟೋ ಮಸೂರಗಳ ಟ್ರಿಪಲ್ ರಿಯರ್ ಕ್ಯಾಮೆರಾಗನ್ನು ಹೊಂದಿದೆ. ಇನ್ನು ಟ್ಯಾಬ್ಲೆಟ್ ಮೋಡ್‌ನಲ್ಲಿ 10MP + 8MP ಡೆಪ್ತ್ ಸಂವೇದಕದಲ್ಲಿ ಸೆಲ್ಫೀ ಕ್ಯಾಮೆರಾಗಳನ್ನು ಕಾಣಬಹುದಾಗಿದೆ.

4380mAh ಬ್ಯಾಟರಿ ಸಾಮರ್ಥ್ಯ!

4380mAh ಬ್ಯಾಟರಿ ಸಾಮರ್ಥ್ಯ!

ಭಾರೀ ಫೀಚರ್ಸ್ ಹೊಂದಿರುವ 'ಗ್ಯಾಲಾಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಶಕ್ತಿಕೇಂದ್ರಕ್ಕೆ ಬಲವನ್ನು ಒದಗಿಸುವಲ್ಲಿ ಸ್ಯಾಮ್‌ಸಂಗ್ ಯಶಸ್ವಿಯಾಗಿದೆ. 4380mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ ಸ್ಮಾರ್ಟ್‌ಪೋನ್ ತ್ವರಿತವಾಗಿ ಚಾರ್ಜ್ ಆಗುವಂತಹ ಇತ್ತೀಚಿನ QC2.0 ವೇಗದ ತಂತ್ರಜ್ಞಾನವನ್ನು ಹೊತ್ತು 'ಗ್ಯಾಲಾಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. QC2.0 ಮತ್ತು AFC ಯೊಂದಿಗೆ ಹೊಂದಾಣಿಕೆಯ ಚಾರ್ಜಿಂಗ್ WPC ಮತ್ತು PMA ನೊಂದಿಗೆ ಹೊಂದಾಣಿಕೆಯ ವೈರ್ಲೆಸ್ ಚಾರ್ಜಿಂಗ್ ಆಗಿದೆ.

ನೂತನ ಆಂಡ್ರಾಯ್ಡ್ 9 ಪ್ಯಾಕ್!

ನೂತನ ಆಂಡ್ರಾಯ್ಡ್ 9 ಪ್ಯಾಕ್!

'ಗ್ಯಾಲಾಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 9 ಮೂಲಕ ರನ್ ಆಗಲಿದೆ ಮತ್ತು ಅಪ್ಲಿಕೇಶನ್ ಮುಂದುವರಿದಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ ಮತ್ತು ಅದು ಮುಖಪುಟದಲ್ಲಿ ಚಾಲನೆಯಲ್ಲಿರುವ ಒಳಭಾಗದಲ್ಲಿ ಅದೇ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ನಿಮಗೆ ಅನುಮತಿಸುತ್ತದೆ. ಸ್ಯಾಮ್ಸಂಗ್ ಗೂಗಲ್ ಮತ್ತು ಆಂಡ್ರಾಯ್ಡ್ ಡೆವಲಪರ್ ಸಮುದಾಯದೊಂದಿಗೆ ಕೆಲಸ ಮಾಡಿರುವುದರಿಮದ ಈ ಸ್ಮಾರ್ಟ್‌ಫೋನಿನಲ್ಲಿ ವಿಶಿಷ್ಟ ಅನುಭವಕ್ಕಾಗಿ ವಿಶೇಷ ಅಪ್ಲಿಕೇಶನ್‌ಗಳು ಮತ್ತು ಸೇವೆಗಳು ಲಭ್ಯವಿವೆ ಎಂದು ತಿಳಿದುಬಂದಿದೆ.

Best Mobiles in India

English summary
Samsung becomes the first manufacturer to bring a practical foldable smartphone. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+