Home
ಮೊಬೈಲ್

ವರ್ಷಾಂತ್ಯಕ್ಕೆ ಬರಲಿದೆ ಹೊಸ ಸ್ಯಾಮ್ ಸಂಗ್ ಮೊಬೈಲ್

By Super
ವರ್ಷಾಂತ್ಯಕ್ಕೆ ಬರಲಿದೆ ಹೊಸ ಸ್ಯಾಮ್ ಸಂಗ್ ಮೊಬೈಲ್


ಪ್ರತಿಷ್ಟಿತ ಸ್ಯಾಮ್ ಸಂಗ್ ಕಂಪನಿ ಈಗಾಗಲೇ ಗ್ರಾಹಕರ ಮನಮೆಚ್ಚಿಸುವ ಅನೇಕ ಮೊಬೈಲ್ ಮತ್ತು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ. ಇದೀಗ ಆ ಪಟ್ಟಿಯಲ್ಲಿ ಸ್ಯಾಮ್ ಸಂಗ್ GT-S7500 ಎಂಬ ನೂತನ ಮೊಬೈಲ್ ಇದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಮೊಬೈಲಿನ ಅನೇಕ ಹೋಲಿಕೆಯನ್ನು ಈ ಮೊಬೈಲ್ ಪಡೆದುಕೊಂಡಿದ್ದು, ಈ ವರ್ಷಾಂತ್ಯಕ್ಕೆ ಬಿಡುಗಡೆಗೊಳ್ಳುವ ಸುದ್ದಿಯಿದೆ.

ಈ ಮೊಬೈಲ್ ಅತ್ಯುನ್ನತ ಡಿಸ್ಪ್ಲೇ ಪಡೆದುಕೊಂಡಿದ್ದು, ಮೊಬೈಲಿನ ಸ್ಕ್ರೀನ್ ಶೈನಿ ಪ್ಲಾಸ್ಟಿಕ್ ಔಟ್ ಲೈನ್ ಹೊಂದಿರುವುದಾಗಿ ತಿಳಿದುಬಂದಿದೆ. ಟಚ್ ಸ್ಕ್ರೀನ್ ಸೌಲಭ್ಯದೊಂದಿಗೆ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಇರುವುದು ವಿಶೇಷವೆನಿಸಿದೆ. ಇದರಿಂದ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯವಿರುವ ಅನೇಕ ಅಪ್ಲಿಕೇಶನನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಾಗಲಿದೆ.

ಸ್ಯಾಮ್ ಸಂಗ್ GT-S7500 ನಲ್ಲಿ ಸಂಪರ್ಕಕ್ಕೆಂದು ವೈ-ಫೈ, USB, ಬ್ಲೂಟೂಥ್ ಮತ್ತು GPS ಸೌಲಭ್ಯ ಒದಗಿಸಲಾಗಿದೆ. ಈ ಸಾಧನ 3.5 ಎಂಎಂ ಆಡಿಯೋ ಜ್ಯಾಕ್ ಕೂಡ ಪಡೆದುಕೊಂಡಿದ್ದು, ಇದರಲ್ಲಿನ HDMI ಔಟ್ ಪುಟ್ ಗುಣಮಟ್ಟದ ವಿಡಿಯೋ ಒದಗಿಸಲಿದೆ. ಮೊಬೈಲಿನಲ್ಲಿ 32ಜಿಬಿ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್ ಸ್ಲಾಟ್ ಇದೆ.

5 ಮೆಗಾ ಪಿಕ್ಸಲ್ ಕ್ಯಾಮೆರಾ ಇರುವ ಮೊಬೈಲಿನಲ್ಲಿ LED ಫ್ಲಾಶ್ ಜೊತೆಗಿದೆ. ಆದರೆ ಮೊಬೈಲ್ ಬಗೆಗಿನ ಪೂರ್ಣ ನಿಖರ ಮಾಹಿತಿ ತಿಳಿದುಬರಬೇಕಷ್ಟೆ. ಆಡಿಯೋ, ವಿಡಿಯೋ ಪ್ಲೇಯರ್ ಜೊತೆ MP3, MPEG4 ಮತ್ತು AAC+ ಫೈಲ್ ಫಾರ್ಮೆಟ್ ಗಳನ್ನು ಮೊಬೈಲ್ ಬೆಂಬಲಿಸಲಿದೆ.

2011ರ ಕೊನೆಯಲ್ಲಿ ಈ ಮೊಬೈಲ್ ಅಧೀಕೃತವಾಗಿ ಬಿಡುಗಡೆಯಾಗುವ ಸುದ್ದಿಯಿದ್ದು, ಮೊಬೈಲ್ ಬೆಲೆಯನ್ನೂ ಕಂಪನಿ ಆ ಸಂದರ್ಭದಲ್ಲಿ ಘೋಷಿಸಲಿದೆ. ಆದರೆ ಮೂಲಗಳ ಪ್ರಕಾರ ಮೊಬೈಲ್ ಕೈಗೆಟುಕುವ ದರದಲ್ಲಿ ದೊರೆಯಲಿದೆ ಎನ್ನಲಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+