Samsung: ಭಾರತದಲ್ಲಿ ಗ್ಯಾಲಕ್ಸಿ F55 ಲಾಂಚ್; ಬೆಲೆ ಎಷ್ಟು ? ಫೀಚರ್ಸ್ ಏನಿವೆ ?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಮೊಬೈಲ್‌ಗಳು ತನ್ನದೇ ಆದ ವಿಶೇಷ ಫೀಚರ್ಸ್‌ಗಳ ಜೊತೆಗೆ ಗ್ರಾಹಕರ ಬಳಗವನ್ನು ಹೊಂದಿವೆ, ಕೆಲವರು ಸ್ಯಾಮ್‌ಸಂಗ್ ನೂತನ ಸರಣಿಯ ಮೊಬೈಲ್‌ಗಳಿಗಾಗಿ ಕಾದು ಕುಳಿತಿರುತ್ತಾರೆ, ಇದೀಗ ಸ್ಯಾಮ್‌ಸಂಗ್ ಸಂಸ್ಥೆ ಬಹು ನಿರೀಕ್ಷಿತ ಗ್ಯಾಲಕ್ಸಿ F55 ಮೊಬೈಲ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.
ಸ್ಯಾಮ್‌ಸಂಗ್ (Samsung) ಸಂಸ್ಥೆ ಕೊನೆಗೂ ಭಾರತದಲ್ಲಿ ಗ್ಯಾಲಕ್ಸಿ F55 (Galaxy F55) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಮದ್ಯಮ ಬೆಲೆಯ ಸ್ಮಾರ್ಟ್‌ಫೋನ್ ಖರೀದಿದಾರರನ್ನು ಗುರಿಯಾಗಿರಿಸಿಕೊಂಡು ಈ ಮೊಬೈಲ್ ಅನ್ನು ಬಿಡುಗಡೆ ಮಾಡಿರುವುದು ಎದ್ದು ಕಾಣಿಸುತ್ತಿದೆ. ಇದೀಗ ಬಿಡುಗಡೆಯಾಗಿರುವ ಮೊಬೈಲ್‌ನ ಫೀಚರ್ಸ್ ಹಾಗೂ ಬೆಲೆಯ ಕುರಿತಾದ ಮಾಹಿತಿಗಾಗಿ ಈ ಲೇಖನ ಓದಿ.

ಡಿಸ್‌ಪ್ಲೇ, ವಿನ್ಯಾಸ ಮತ್ತು ಕಾರ್ಯಕ್ಷಮತೆ:
ಗ್ಯಾಲಕ್ಸಿ F55 ಮೊಬೈಲ್ 6.7 ಇಂಚಿನ ದೊಡ್ಡದಾದ ಫುಲ್ HD+ ಅಮೋಲ್ಡ್ ಡಿಸ್‌ಪ್ಲೇ ಜೊತೆಗೆ ಸಾಮಾನ್ಯವಾದ 120Hz ರಿಫ್ರೆಶ್ ದರ ಮತ್ತು 1000 nits ಗರಿಷ್ಠ ಬ್ರೈಟ್‌ನೆಸ್ ಸಾಮರ್ಥ್ಯ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ (Qualcomm Snapdragon) 7 Gen 1 ಪ್ರೊಸೆಸರ್‌ನಿಂದ ಪ್ಯಾಕ್ ಮಾಡಲಾಗಿದೆ. ದೈನಂದಿನ ಕಾರ್ಯಗಳಿಗೆ ಮತ್ತು ಕೆಲವು ಸರಳ ಗೇಮ್‌ಗಳಿಗಾಗಿ ಸಮರ್ಥವಾದ ಚಿಪ್ ಅನ್ನು ಅಳವಡಿಸಲಾಗಿದೆ.
ವಿನ್ಯಾಸಕ್ಕೆ ಸಂಬಂಧಿಸಿದಂತೆ F55 ವೇಗನ್ ಲೆದರ್ ಫಿನಿಶ್‌ನಲ್ಲಿ ಕಂಡು ಬಂದಿದೆ. ಅದು ಈ ಹಿಂದಿನ ಮದ್ಯಮ ಶ್ರೇಣಿಯ ಮೊಬೈಲ್‌ಗೆ ಹೋಲಿಸಿದರೆ ಉತ್ತಮವಾದ ಔಟ್‌ಲುಕ್ ನೀಡಿದೆ. ಈ ಫೋನ್ ಏಪ್ರಿಕಾಟ್ ಕ್ರಷ್ (Apricot Crush) ಮತ್ತು ರೈಸಿನ್ ಬ್ಲಾಕ್ (Raisin Black) ಈ ಎರಡು ಬಣ್ಣಗಳಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.
ಸಾಫ್ಟ್‌ವೇರ್ ಮತ್ತು ಭದ್ರತೆಗಾಗಿ ಆಂಡ್ರಾಯ್ಡ್ 14 ಅನ್ನು ಮೊದಲೇ ಇರಿಸಲಾಗಿದೆ ಮತ್ತು ಸ್ಯಾಮ್‌ಸಂಗ್ 4 ವರ್ಷಗಳ ಆಂಡ್ರಾಯ್ಡ್ ಆವೃತ್ತಿ ನವೀಕರಣಗಳು ಮತ್ತು 5 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಭರವಸೆ ನೀಡಿದೆ.
ಕ್ಯಾಮೆರಾಗಳು: ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು ತೀಕ್ಷ್ಣವಾದ ಫೋಟೋಗಳಿಗಾಗಿ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಜೊತೆಗೆ 50MP ಸೆನ್ಸಾರ್ ಕ್ಯಾಮೆರಾ, 8MP ಅಲ್ಟ್ರಾವೈಡ್ ಸೆನ್ಸಾರ್ ಮತ್ತು ಕ್ಲೋಸ್ ಅಪ್ ಶಾಟ್‌ಗಳಿಗಾಗಿ 2MP ಮ್ಯಾಕ್ರೋ ಸೆನ್ಸಾರ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಇದರ ಫ್ರಂಟ್ ಕ್ಯಾಮೆರಾ ಸ್ಪಷ್ಟವಾದ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ 50MP ಸೆನ್ಸಾರ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್:
ಗ್ಯಾಲಕ್ಸಿ F55 ಉತ್ತಮವಾದ 5000mAh ಬ್ಯಾಟರಿ ಹೊಂದಿದ್ದು, ಇದು ಹೆಚ್ಚಿನ ಬಳಕೆದಾರರಿಗೆ ಉತ್ತಮ ಬ್ಯಾಟರಿ ಸಮಯವನ್ನು ನೀಡಲಿದೆ. ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಆದರೆ ಮೊಬೈಲ್ ಬಾಕ್ಸ್ ಪೀಸ್ ಜೊತೆಗೆ ಚಾರ್ಜರ್ ಸಿಗುವುದಿಲ್ಲ.
ಇತರೆ ಫೀಚರ್ಸ್: ಮೊಬೈಲ್ ಹಲವು ಬಗೆಯ ಕನೆಕ್ಟಿಂಗ್ ಸಾಧನಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ 6 ವೈ-ಫೈ, 5.2 ಬ್ಲೂಟೂತ್, ಎನ್‌ಎಫ್‌ಸಿ ಮತ್ತು ಯುಎಸ್‌ಬಿ 2.0 ಪೋರ್ಟ್‌ನಂತಹ ವಿವಿಧ ಸಂಪರ್ಕ ಆಯ್ಕೆಗಳನ್ನು ಒಳಗೊಂಡಿದೆ. ಇದು ಉತ್ತಮ ಆಡಿಯೋಗಾಗಿ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.
ಸುರಕ್ಷಿತ ಅನ್‌ಲಾಕಿಂಗ್‌ಗಾಗಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಹೆಚ್ಚುವರಿ ರಕ್ಷಣೆಗಾಗಿ ನಾಕ್ಸ್ ಭದ್ರತೆ ಮತ್ತು ಧೂಳು ಹಾಗೂ ನೀರಿನಿಂದ ರಕ್ಷಣೆ ಪಡೆಯಲು IP67 ತಂತ್ರಜ್ಞಾನ ಹೊಂದಿದೆ. ಫೋನ್ 180 ಗ್ರಾಂ ತೂಕವಿದ್ದು, 7.8 ಮಿಮೀ ದಪ್ಪವಿದೆ.
ಬೆಲೆ, ಆಫರ್‌ಗಳು ಮತ್ತು ಲಭ್ಯತೆ: ಈ ಮೊಬೈಲ್ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 26,999ರೂ. ಆಗಲಿದ್ದು, ಇದರ ಜೊತೆಗೆ ಕೆಲವು ವಿಶೇಷ ಆಫರ್‌ಗಳನ್ನು ಸಂಸ್ಥೆ ನೀಡಲಿದೆ. 499 ರೂ. ಗಳಿಗೆ ಸ್ಯಾಮ್‌ಸಂಗ್ 45W ಅಡಾಪ್ಟರ್ ಅಥವಾ ₹1,999ಕ್ಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫಿಟ್ 3 ಸ್ಮಾರ್ಟ್ ಬ್ಯಾಂಡ್ ಅನ್ನು ನೀಡುತ್ತಿದೆ. ಈ ವಿಶೇಷ ಆಫರ್‌ಗಳು ಇಂದಿನಿಂದ ಮೇ 31 ರವರೆಗೆ ಜಾರಿಯಲ್ಲಿರಲಿವೆ.


Click it and Unblock the Notifications








