Home
ಮೊಬೈಲ್

ಸಂಗೀತ ಪ್ರಿಯರಿಗೆಂದೇ ಬರುತಿದೆ ಹೀರೊ ಮೊಬೈಲ್

By Super
ಸಂಗೀತ ಪ್ರಿಯರಿಗೆಂದೇ ಬರುತಿದೆ ಹೀರೊ ಮೊಬೈಲ್


ಸಾಮಾನ್ಯ ಮೊಬೈಲ್ ಗಳಿಂದಿಡಿದು ಅತ್ಯಾಧುನಿಕ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ತಯಾರಿಕೆಯಲ್ಲಿ ಮುಂದಿರುವ ಸ್ಯಾಮ್ ಸಂಗ್ ಕಂಪನಿ ಸಂಗೀತ ಪ್ರಿಯರಿಗೆಂದೇ ವಿನೂತನ ಶೈಲಿಯ ಮೊಬೈಲನ್ನು ಪರಿಚಯಿಸಿದೆ. ಸ್ಯಾಮ್ ಸಂಗ್ ಹೀರೊ ಮ್ಯುಸಿಕ್ E123B ಎಂಬ ಮೊಬೈಲ್ ಡ್ಯೂಯಲ್ ಸಿಮ್ ಮೊಬೈಲಾಗಿದ್ದು, ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ನಿಗದಿಪಡಿಸಿಲ್ಲ.

ಕಪ್ಪು ಮತ್ತು ಇನ್ನಿತರ ಬಣ್ಣಗಳಲ್ಲಿ ಈ ಮೊಬೈಲ್ ಲಭ್ಯವಿದೆ. ನೀವು ಸಂಗೀತ ಪ್ರಿಯರಾಗಿದ್ದರೆ ಈ ಹೀರೊ ಮೊಬೈಲ್ ನಿಮಗೆ ಖಂಡಿತ ಇಷ್ಟವಾಗುತ್ತೆ. ಏಕೆಂದರೆ ಇದರಲ್ಲಿನ ಸಂಗೀತದ ಸ್ಪಷ್ಟತೆ ಎಂತಹವರನ್ನೂ ಮೋಡಿಗೊಳಿಸುವಂತಿದೆ.

1.8 ಇಂಚಿನ ಸ್ಕ್ರೀನ್ ಹೊಂದಿರುವ ಈ ಮೊಬೈಲಿನಲ್ಲಿ ಡ್ಯೂಯಲ್ ಸಿಮ್ ಆಯ್ಕೆ ನೀಡಿರುವುದು ಗ್ರಾಹಕರ ಬಳಕೆಗೆ ಸಹಾಯಕವಾಗಲಿದೆ. 4 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶವನ್ನೂ ಫೋನಿನಲ್ಲಿ ನೀಡಲಾಗಿದೆ. ಉತ್ತಮ ಸಂಪರ್ಕಕ್ಕೆಂದು ಬ್ಲೂಟೂಥ್ ಒದಗಿಸಲಾಗಿದೆ.

ಮನರಂಜನೆಗೆಂದು ಎಫ್ ಎಂ, ಆಡಿಯೋ ವಿಡಿಯೋ ಪ್ಲೇಯರ್ ಕೂಡ ಇದೆ. ಆದರೆ ಈ ಮೊಬೈಲಿನಲ್ಲಿ ಕ್ಯಾಮೆರಾ ಇಲ್ಲದಿರುವುದು ಒಂದು ಹಿನ್ನಡೆಯಾದರೂ ಇನ್ನುಳಿದ ಅಂಶಗಳಲ್ಲಿ ಈ ಮೊಬೈಲ್ ಮುಂದಿರುವುದರಿಂದ ಕ್ಯಾಮೆರಾ ಇಲ್ಲದಿರುವುದು ಕೊರತೆ ಎನಿಸುವುದಿಲ್ಲ.

ಈ ಬಾರಿ ತಯಾರಕರು ಬ್ಯಾಟರಿ ಬಾಳಿಕೆಗೆ ವಿಶೇಷ ಗಮನ ನೀಡಿದ್ದಾರೆ. ಈ ಮೊಬೈಲಿನ ಬ್ಯಾಟರಿ ಬ್ಯಾಕಪ್ 11.1 ಗಂಟೆ ಟಾಕ್ ಟೈಂ ಮತ್ತು 580 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಮುಂದಿನ ತಿಂಗಳಿನ ಆರಂಭದಲ್ಲಿ ಈ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿರುವ ಸೂಚನೆಯಿದ್ದು, ಬೆಲೆಯನ್ನೂ ಆ ಸಂದರ್ಭದಲ್ಲಿಯೇ ಘೋಷಿಸಲಾಗುವುದು ಎಂದು ತಿಳಿದುಬಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+