Subscribe to Gizbot

ಮೊಬೈಲ್ ಟಿವಿ ಜೊತೆ ಸ್ಯಾಮ್ ಸಂಗ್ I6172

Posted By: Super
ಮೊಬೈಲ್ ಟಿವಿ ಜೊತೆ ಸ್ಯಾಮ್ ಸಂಗ್ I6172
ಇದು ಟಚ್ ಫೋನ್ ಜಮಾನ. ಅದಕ್ಕೆಂದೇ ಸ್ಯಾಮ್ ಸಂಗ್ I6172 ಎಂಬ ಮೊಬೈಲೊಂದನ್ನು ಉತ್ತಮ ಆಯ್ಕೆಗಳೊಂದಿಗೆ ಪರಿಚಯಿಸಿದೆ. ಪೂರ್ಣ ಟಚ್ ಫೋನ್ ಆಗಿರುವ ಈ ಮೊಬೈಲ್ ನೊಂದಿಗೆ ಟಿವಿ ರಿಸೀವರ್ ಇರುವುದು ವಿಶೇಷ.

ಕ್ಯಾಂಡಿ ಬಾರ್ ವಿನ್ಯಾಸದಲ್ಲಿ ಮೂಡಿ ಬಂದಿರುವ ಈ ಮೊಬೈಲ್ 2, 62, 144 ಬಣ್ಣಗಳನ್ನು ಬೆಂಬಲಿಸುವುದರೊಂದಿಗೆ ಹಲವು ಆಯ್ಕೆಗಳನ್ನು ಪಡೆದುಕೊಂಡಿದೆ. ಅದ್ಯಾವುವೆಂದು ಇಲ್ಲಿ ತಿಳಿದುಕೊಳ್ಳಿ.

ಸ್ಯಾಮ್ ಸಂಗ್ I6172 ಮೊಬೈಲ್ ವಿಶೇಷತೆ:

* 109.5 ಎಂಎಂ x 56 ಎಂಎಂ x 12.2 ಎಂಎಂ ಸುತ್ತಳತೆ

* 100 ಗ್ರಾಂ ತೂಕ

* 3.2 ಇಂಚಿನ TFT ಟಚ್ ಸ್ಕ್ರೀನ್ ಡಿಸ್ಪ್ಲೇ

* ಪ್ರಾಕ್ಸಿಮಿಟಿ ಸೆನ್ಸಾರ್

* 20 ಎಂಬಿ ಆಂತರಿಕ ಮೆಮೊರಿ

* 16 ಜಿಬಿವರೆಗೂ ಮೆಮೊರಿ ವಿಸ್ತರಣಗೆ ಅವಕಾಶ

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ

* ಎಫ್ ಎಂ ರೇಡಿಯೋ, ಮೊಬೈಲ್ ಟಿವಿ

* ಇಂಟರ್ನೆಟ್ ಬ್ರೌಸರ್

* ಮಲ್ಟಿಪಲ್ ಸಿಮ್ ಸ್ಲಾಟ್

* ಬ್ಲೂಟೂಥ್ 3.0, ವೈ-ಫೈ, USB 2.0

1200mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 1090 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 13.33 ಗಂಟೆ ಟಾಕ್ ಟೈಂ ನೀಡುತ್ತದೆ.

ಈ ಸ್ಯಾಮ್ ಸಂಗ್ I6172 ಮೊಬೈಲ್ ಬೆಲೆ ಭಾರತದಲ್ಲಿ ಎಷ್ಟಿದೆ ಎಂದು ತಿಳಿದುಬಂದಿಲ್ಲ. ಆದರೆ ಇದು ಕೈಗೆಟುಕುವ ದರಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot