ಸ್ಯಾಮ್ ಸಂಗ್ ನಿಂದ ಇಲ್ಯೂಶನ್ ಮತ್ತು ರೆಪ್ ಮೊಬೈಲ್

By Super
|

ಸ್ಯಾಮ್ ಸಂಗ್ ನಿಂದ ಇಲ್ಯೂಶನ್ ಮತ್ತು ರೆಪ್ ಮೊಬೈಲ್

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಬೆಂಬಲಿತ ಫೋನ್ ಗಳು ಹೆಚ್ಚು ಮಾರಾಟವಾಗುವ ಹಿನ್ನೆಲೆಯನ್ನು ಅರಿತಿರುವ ಸ್ಯಾಮ್ ಸಂಗ್ ಕಂಪನಿ ಇದೀಗ ಎರಡು ಹ್ಯಾಂಡ್ ಸೆಟ್ ಗಳನ್ನು ಬಿಡುಗಡೆಗೊಳಿಸಿದೆ.

ಸ್ಯಾಮ್ ಸಂಗ್ I110 ಇಲ್ಯೂಶನ್ ಮತ್ತು ಸ್ಯಾಮ್ ಸಂಗ್ R680 ರೆಪ್ ಎಂಬ ಹೊಸ ಮೊಬೈಲ್ ಗಳು ತೆರೆಕಾಣಲು ಸಿದ್ಧಗೊಂಡಿವೆ. ರೆಪ್ ಮತ್ತು ಇಲ್ಯೂಶನ್ ಎರಡೂ ಮೊಬೈಲ್ ಗಳು CDMA ಬೆಂಬಲಿತ ಹ್ಯಾಂಡ್ ಸೆಟ್ ಗಳಾಗಿದ್ದು, 2ಜಿ ಮತ್ತು 3ಜಿ ನೆಟ್ ವರ್ಕ್ ಗಳನ್ನು ಬೆಂಬಲಿಸಲಿವೆ.

ಸ್ಯಾಮ್ ಸಂಗ್ ಇಲ್ಯೂಶನ್ ಮತ್ತು ರೆಪ್ ಮೊಬೈಲ್ ಗಳು CDMA 1x EV-DO 3ಜಿ ಮತ್ತು CDMA 800/1900 2ಜಿ ನೆಟ್ ವರ್ಕ್ ಗಳನ್ನು ಬೆಂಬಲಿಸುತ್ತದೆ. ಸ್ಯಾಮ್ ಸಂಗ್ ರೆಪ್ ಮೊಬೈಲ್ ಟಚ್ ಸ್ಕ್ರೀನ್ ನೊಂದಿಗೆ 3 ಬಟನ್ ಗಳನ್ನು ಪಡೆದುಕೊಂಡಿದೆ. ಸ್ಯಾಮ್ ಸಂಗ್ ಇಲ್ಯೂಶನ್ ಮೊಬೈಲ್ ಕೂಡ ಟಚ್ ಸ್ಕ್ರೀನ್ ನೊಂದಿಗೆ 4 ಬಟನ್ ಗಳನ್ನು ಪಡೆದುಕೊಂಡಿದೆ.

ಇಲ್ಯೂಶನ್ ಮೊಬೈಲ್ 1 GHz ARM Cortex A8 ಪ್ರೊಸೆಸರ್ ಮತ್ತು ರೆಪ್ ಮೊಬೈಲ್ ಹ್ಯುಮಿಂಗ್ ಬರ್ಡ್ ಚಿಪ್ ಸೆಟ್ 800 MHz ಪ್ರೊಸೆಸರ್ ಪಡೆದುಕೊಂಡಿದೆ. ಎರಡೂ ಮೊಬೈಲ್ ಗಳೂ ಕೂಡ v2.3 ಜಿಂಜರ್ ಬ್ರೆಡ್ ಆಂಡ್ರಾಯ್ಡ್ ಆಯಾಮ ಪಡೆದುಕೊಂಡಿದೆ.

ಸ್ಯಾಮ್ ಸಂಗ್ R680 ರೆಪ್ ವಿಶೇಷತೆ:

* 110 x 57 x 12.2 ಎಂಎಂ ಸುತ್ತಳತೆ

* 105 ಗ್ರಾಂ ತೂಕ

* TFT ಟಚ್ ಸ್ಕ್ರೀನ್

* 3.2 ಇಂಚಿನ ಡಿಸ್ಪ್ಲೇ, 320 x 480 ಪಿಕ್ಸಲ್ ರೆಸೊಲ್ಯೂಷನ್

* 3 ಮೆಗಾ ಪಿಕ್ಸಲ್ ಕ್ಯಾಮೆರಾ, 2048 x 1536 ಪಿಕ್ಸಲ್ ರೆಸೊಲ್ಯೂಷನ್

* 2ಜಿಬಿ ಆಂತರಿಕ ಮೆಮೊರಿ ಮತ್ತು 512ಎಂಬಿ RAM

ಸ್ಯಾಮ್ ಸಂಗ್ I110 ಇಲ್ಯೂಶನ್ ಮೊಬೈಲ್:

* 120 ಗ್ರಾಂ ತೂಕ

* TFT ಟಚ್ ಸ್ಕ್ರೀನ್

* 3.5 ಇಂಚಿನ ಡಿಸ್ಪ್ಲೇ, 320 x 480 ಪಿಕ್ಸಲ್ ರೆಸೊಲ್ಯೂಷನ್

* 3 ಮೆಗಾ ಪಿಕ್ಸಲ್ ಕ್ಯಾಮೆರಾ, 2048 x 1536 ಪಿಕ್ಸಲ್ ರೆಸೊಲ್ಯೂಷನ್

* ಸೆಕೆಂಡರಿ ಕ್ಯಾಮೆರಾ

* 2ಜಿಬಿ ಆಂತರಿಕ ಮೆಮೊರಿ ಮತ್ತು 512ಎಂಬಿ RAM

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

ಎರಡೂ ಮೊಬೈಲ್ ಗಳಲ್ಲಿ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೊಮೀಟರನ್ನು ಅಳವಡಿಸಲಾಗಿದೆ. ಇಲ್ಯೂಶನ್ ಮೊಬೈಲಿನಲ್ಲಿ ಮಲ್ಟಿ ಟಚ್ ಇನ್ ಪುಟ್ ಇದ್ದರೆ, ರೆಪ್ ನಲ್ಲಿ ಈ ಸೌಲಭ್ಯವಿಲ್ಲ. ಸ್ಯಾಮ್ ಸಂಗ್ ನ ಈ ಎರಡೂ ಮೊಬೈಲ್ ಗಳಲ್ಲಿ 2.4 Mbps 3ಜಿ, 802.11 b/g/n ವೈ-ಫೈ ಮತ್ತು ವೈ-ಫೈ ಹಾಟ್ ಸ್ಪಾಟ್ ಒಳಗೊಂಡಿದೆ. A2DP v3.0 ಬ್ಲೂಟೂಥ್ ಮತ್ತು 2.0 ಆಯಾಮದ ಮೈಕ್ರೊ USB ಪೋರ್ಟ್ ಇದೆ.

ರೆಪ್ ಮತ್ತು ಇಲ್ಯೂಶನ್ Li 1500 mAh ಬ್ಯಾಟರಿ ಹೊಂದಿದ್ದು, ಈ ಮೊಬೈಲ್ ಗಳ ಬೆಲೆಯನ್ನು ಕಂಪನಿ ಇನ್ನೂ ನಿಖರವಾಗಿ ತಿಳಿಸಿಲ್ಲ.

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more