ಮೋಟೋ ಇ ಗೆ ಪೈಪೋಟಿ ನೀಡಲು ಸ್ಯಾಮ್‌ಸಂಗ್ ಕಸರತ್ತು

Written By:

ಪೈಪೋಟಿ ಯಾವ ಕ್ಷೇತ್ರದಲ್ಲಿ ಈಗ ಇಲ್ಲ ಹೇಳಿ? ಪ್ರತಿಯೊಂದು ಕ್ಷೇತ್ರ ಕೂಡ ಪೈಪೋಟಿಯಿಂದ ಮುಂದೆ ಬರುತ್ತದೆ. ಸೋಲು ಗೆಲುವಿಗೆ, ಸ್ಪರ್ಧಾತ್ಮಕವಾಗಿ ಮುಂದೆ ಬರಲು ಪೈಪೋಟಿ ಎಲ್ಲಾ ಕ್ಷೇತ್ರದಲ್ಲೂ ಇರಲೇಬೇಕು.

ಇನ್ನು ತಾಂತ್ರಿಕ ವಿಭಾಗಕ್ಕೆ ಬಂದಾಗ ಈ ಸ್ಪರ್ಧೆ ಅತೀ ಅಗತ್ಯವಾಗಿರುತ್ತದೆ. ಗ್ರಾಹಕರ ಮನಮೆಚ್ಚುವಂತೆ ವಿವಿಧ ವಿನ್ಯಾಸಗಳಲ್ಲಿ, ಕೈಗೆಟಕುವಂತೆ ಕಂಪೆನಿ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಅದು ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹೀಗೆ ಪ್ರತಿಯೊಂದೂ ಕೂಡ ಬಳಕೆದಾರರಿಗೆ ಬೇಕಾಗಿರುವಂತೆ ಉತ್ಪನ್ನವನ್ನು ತಯಾರಿಸುವವರು ಉತ್ಪಾದಿಸುತ್ತಾರೆ.

ಮೋಟೋ ಇ ಗೆ ಪೈಪೋಟಿ ನೀಡಲು ಸ್ಯಾಮ್‌ಸಂಗ್ ಕಸರತ್ತು

ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವಂತಹ ಮೋಟೋ ಇ ಗೂ ಒಂದು ಉತ್ತಮ ಪೈಪೋಟಿಯನ್ನು ನೀಡಲು ಸ್ಯಾಮ್‌ಸಂಗ್ ನಿರ್ಧರಿಸಿದೆ. ಡ್ಯುಯೆಲ್ ಕೋರ್‌ನ ಕಿಟ್‌ಕ್ಯಾಟ್ ಓಎಸ್ ಉಳ್ಳ ಸ್ಮಾರ್ಟ್‌ಫೋನ್‌ ಅನ್ನು ರೂ 7,000 ಕ್ಕೆ ಸಂಸ್ಥೆ ಲಾಂಚ್ ಮಾಡುವ ನಿಟ್ಟಿನಲ್ಲಿದೆ.

ಸ್ಮಾಮ್‌ಸಂಗ್ ಈ ಸ್ಮಾರ್ಟ್‌ಫೋನ್‌ಗೆ SM- G350E ಎಂದು ಹೆಸರನ್ನಿತ್ತಿದ್ದು ಇದು ಡ್ಯುಯೆಲ್ ಸಿಮ್ ಅವತರಣಿಕೆಯಲ್ಲಿದೆ. 1 ಜಿಬಿ ರ್‌ಯಾಮ್, 4.3 ಇಂಚು ಡಿಸ್‌ಪ್ಲೇ, ಡ್ಯುಯೆಲ್ ಕೋರ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಡಿವೈಸ್‌ನಲ್ಲಿದೆ.

ಸ್ಯಾಮ್‌ಸಂಗ್ ಈ ಫೋನ್‌ನಲ್ಲಿ 8 ಜಿಬಿ ಆಂತರಿಕ ಮೆಮೊರಿಯನ್ನು ಲೋಡ್ ಮಾಡುವ ನಿರೀಕ್ಷೆಯಲ್ಲಿದೆ ಇದು 5ಎಂಪಿ ಆಟೋಫೋಕಸ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಉತ್ತಮ ಇಮೇಜಿಂಗ್ ಹಾರ್ಡ್‌ವೇರ್ ಅನ್ನು ಹೊಂದಿದೆ. ಇನ್ನು ಸ್ಯಾಮ್‌ಸಂಗ್ ಆಂಂಡ್ರಾಯ್ಡ್ ನಿರ್ಮಾಣದಲ್ಲಿ ಹೊಸ ಹವಾವನ್ನೇ ಸೃಷ್ಟಿಸಲಿದ್ದು ಮೋಟೋರೋಲಾಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot