Home
ಮೊಬೈಲ್

Samsung: ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾದ ಕ್ಯಾಮೆರಾಗೆ ಮತ್ತಷ್ಟು ಶಕ್ತಿ! ಅಪ್‌ಡೇಟ್‌ ಸೌಲಭ್ಯ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು (Samsung smartphones) ಭಿನ್ನ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡುತ್ತ ಬಂದಿದೆ. ಅದರಂತೆ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ಗೆ (Galaxy S24 Ultra smartphone) ನೂತನ ಅಪ್ಡೇಟ್ ಒಂದನ್ನು ಸೇರಿಸಲು ಸಂಸ್ಥೆ ಯೋಚಿಸಿದೆ ಎಂಬ ಇಂಟ್ರೆಸ್ಟಿಂಗ್ ಮಾಹಿತಿ ತಿಳಿದು ಬಂದಿದೆ.

ಸ್ಯಾಮ್‌ಸಂಗ್ ಸಂಸ್ಥೆ ತನ್ನ ಗ್ರಾಹಕರ ಅನುಕೂಲತೆಗಾಗಿ ಒಂದಿಲ್ಲ ಒಂದು ಅಪ್ಡೇಟ್‌ಗಳನ್ನು ಮಾಡುತ್ತಲೇ ಬಂದಿದೆ. ಇದೀಗ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಸ್ಮಾರ್ಟ್‌ಫೋನ್‌ಗೆ ಶೀಘ್ರದಲ್ಲೇ ಸಾಫ್ಟ್‌ವೇರ್ ಅಪ್ಡೇಟ್ ಮಾಡಲು ಸಂಸ್ಥೆ ಮುಂದಾಗಿದ್ದು, ಅದು ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗೆ ಗಮನಾರ್ಹ ಕ್ಯಾಮೆರಾ ಸುಧಾರಣೆಗಳನ್ನು ತರಲಿದೆ ಎಂದು ವರದಿಯೊಂದು ತಿಳಿಸಿದೆ.

ಗ್ಯಾಲಕ್ಸಿ S24 ಅಲ್ಟ್ರಾದ ಕ್ಯಾಮೆರಾಗೆ ಮತ್ತಷ್ಟು ಶಕ್ತಿ! ಅಪ್‌ಡೇಟ್‌ ಸೌಲಭ್ಯ

ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಗ್ಯಾಲಕ್ಸಿ S24 ಸರಣಿಯ ಪ್ರಮುಖ ಹ್ಯಾಂಡ್‌ಸೆಟ್‌ನ ಖರೀದಿದಾರರು ಶಟರ್ ಲ್ಯಾಗ್ ಮತ್ತು ಮೋಷನ್ ಬ್ಲರ್ ಸಮಸ್ಯೆಗಳ ಕುರಿತಾಗಿ ದೂರು ನೀಡಿದ್ದರು, ಗ್ಯಾಲಕ್ಸಿ S24 ಅಲ್ಟ್ರಾಗಾಗಿ ಹೊಸ ಸಾಫ್ಟ್‌ವೇರ್ ಅನ್ನು ಹೊರತರುವ ಮಾತುಗಳು ಸಂಸ್ಥೆಯಿಂದ ಬಂದಿಲ್ಲವಾದರೂ, ಕಂಪನಿಯ ಈ ಹಿಂದಿನ UI ಅಪ್‌ಡೇಟ್‌ಗಳ ಆಧಾರದಲ್ಲಿ ಬಳಕೆದಾರರ ಅನುಭವ ಮತ್ತು ಕ್ಯಾಮೆರಾ ಕಾರ್ಯಕ್ಷಮತೆ ಸುಧಾರಣೆಗೊಂಡಿರುವುದು ತಿಳಿದು ಬಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಒನ್ UI 6.1.1 ಅಪ್ಡೇಟ್ ಪರೀಕ್ಷೆ:

ಟಿಪ್‌ಸ್ಟರ್ ಐಸ್ ಯೂನಿವರ್ಸ್‌ನ ಎಕ್ಸ್ (X) ಪೋಸ್ಟ್‌ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಮೊಬೈಲ್‌ಗಾಗಿ One UI 6.1.1 ಅಪ್‌ಡೇಟ್ ಅನ್ನು ಕಂಪನಿಯು ಪರೀಕ್ಷಿಸುತ್ತಿದೆ. ಈ ಮೊಬೈಲ್ ಬಿಡುಗಡೆಯಾದಾಗಿನಿಂದ ಸಂಸ್ಥೆ ಮಾಡಿರುವ ಅತ್ಯಂತ ಉನ್ನತವಾದ ಅಪ್ಡೇಟ್ ಇದಾಗಿದೆ. ಈ ಅಪ್ಡೇಟ್‌ನಿಂದಾಗಿ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಕಾರ್ಯವೈಕರಿ ಮೇಲೆ ಹಲವು ಸುಧಾರಣೆಗಳಾಗುವ ನಿರೀಕ್ಷೆ ಇದೆ.

ಟಿಪ್‌ಸ್ಟರ್ ಹೇಳಿರುವಂತೆ ಗ್ಯಾಲಕ್ಸಿ S24 ಅಲ್ಟ್ರಾ One 6.1.1 ವರ್ಶನ್ ಆಗಿರಲಿದೆ, ಈ ಸಂಬಂಧ ಈಗಾಗಲೇ ಪರೀಕ್ಷೆ ಪ್ರಾರಂಭವಾಗಿದೆ. ಮೊಬೈಲ್ ಬಿಡುಗಡೆಯಾದ ಬಳಿಕ S24ನ ಅತೀ ದೊಡ್ಡ ಅಪ್ಡೇಟ್ ಇದಾಗಿದೆ, ಇದು ಸಾಕಷ್ಟು ಕ್ಯಾಮೆರಾ ನವೀಕರಣಗಳನ್ನು ಒಳಗೊಂಡಿರುತ್ತದೆ ಎಂದು ಟಿಪ್‌ಸ್ಟರ್ ತಿಳಿಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಬಿಡುಗಡೆಯಾದಾಗ ಗ್ರಾಹಕರು ಶಟರ್ ಲ್ಯಾಗ್ ಮತ್ತು ಜೂಮ್ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ದೂರು ನೀಡಿದ್ದರು. ವೇಗವಾಗಿ ಚಲಿಸುವ ವಸ್ತುಗಳನ್ನು ಸೆರೆಹಿಡಿಯುವಾಗ ಪಿಕ್ಚರ್‌ ಬ್ಲರ್ ಆಗಿರಲಿದೆ ಎಂದು ವರದಿಯಾಗಿತ್ತು. ಹಲವಾರು ಅಪ್ಡೇಟ್‌ಗಳನ್ನು ನೀಡಿದ್ದರೂ ಕೂಡ ಏಪ್ರಿಲ್‌ನಲ್ಲಿ ಗಂಭೀರವಾದ ಸಮಸ್ಯೆ ಕುರಿತು ವರದಿಯಾಗಿತ್ತು ಹಾಗಾಗಿ ಈ ಅಪ್ಡೇಟ್ ಕುರಿತು ಪರೀಕ್ಷೆ ನಡೆಸುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಒನ್ UI 6.1.1 ಬಿಡುಗಡೆಯ ಸಮಯ:

ಒನ್ UI 6.1.1 ಅಪ್‌ಡೇಟ್ ಇನ್ನೂ ಆರಂಭಿಕ ಹಂತದಲ್ಲಿದ್ದು, ಗ್ರಾಹಕರಿಗೆ ಬಿಡುಗಡೆ ಮಾಡುವ ಮೊದಲು ಸಾಕಷ್ಟು ಪರೀಕ್ಷೆಗಳ ನಡೆಯಲಿವೆ ಎಂದು ಟಿಪ್‌ಸ್ಟರ್ ತಿಳಿಸಿದೆ. ಸ್ಯಾಮ್‌ಸಂಗ್ ತನ್ನ ಪ್ರಮುಖ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ Z ಫೋಲ್ಡ್ 6 ಮತ್ತು ಫ್ಲಿಪ್ 6 ಗಳನ್ನು ಬಿಡುಗಡೆಗೊಳಿಸಿದ ಬಳಿಕ ಈ ಅಪ್ಡೇಟ್‌ಗಳು ಬರಬಹುದೆಂಬ ನಿರೀಕ್ಷೆ ಇದೆ. ಇನ್ನೂ ಈ ಅಪ್ಡೇಟ್ ಜುಲೈ 2024ರಲ್ಲಿ ಬಂದರೂ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಹಿಂದಿನ ಅಪ್ಡೇಟ್: ಕಳೆದ ಕೆಲವು ವಾರಗಳ ಹಿಂದೆ ಸ್ಯಾಮ್‌ಸಂಗ್ ತನ್ನ ಇತರ ಸ್ಮಾರ್ಟ್‌ಫೋನ್‌ಗಳಿಗು ಗ್ಯಾಲಕ್ಸಿ ಎಸ್24 ಸರಣಿಯೊಂದಿಗೆ ಪ್ರಾರಂಭವಾದ ಹಲವಾರು ಫೀಚರ್ಸ್‌ಗಳನ್ನು ಅಳವಡಿಸಿದೆ, ಅವುಗಳಲ್ಲಿ ಪ್ರಮುಖವಾಗಿ ಗ್ಯಾಲಕ್ಸಿ ಎಐ ಆಗಿದೆ. One UI 6.1 ಅಪ್‌ಡೇಟ್‌ನೊಂದಿಗೆ Galaxy S ಮತ್ತು Z ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ 10 AI ಚಾಲಿತ ಫೀಚರ್ಸ್‌ಗಳನ್ನು ಅಳವಡಿಸಲಿದೆ ಎಂದು ಹೇಳಲಾಗುತ್ತಿದೆ.

Best Mobiles in India

English summary
According to a post by tipster Ice Universe the company is testing One UI 6.1.1 update for Samsung Galaxy S24 Ultra Mobile.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+