Home
ಮೊಬೈಲ್

Samsung: ಅತ್ಯಾಕರ್ಷಕ ಫೀಚರ್‌ಗಳ Samsung QLED 4K TV ಟಿವಿ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung) 2024 ಕ್ಯೂಎಲ್ಇಡಿ 4 ಕೆ ಟಿವಿ (QLED 4K TV) ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಪ್ರೀಮಿಯಂ ಫೀಚರ್‌ಗಳನ್ನು ಹೊಂದಿರುವ ಈ ನೂತನ ಟಿವಿ 65,990 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಈ ಟಿವಿಯು 55 ಇಂಚು, 65 ಇಂಚು ಮತ್ತು 75 ಇಂಚಿನ ಮೂರು ಮಾದರಿ ಗಾತ್ರಗಳಲ್ಲಿ ಸಿಗಲಿದೆ. ಗ್ರಾಹಕರು QLED 4K TV ಯನ್ನು Samsung.com ಮತ್ತು Amazon.in ಸೇರಿದಂತೆ ಇನ್ನಿತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸಬಹುದು.

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಗ್ರಾಹಕರ ವಿಶ್ವಾಸಾರ್ಹ ಉತ್ಪನ್ನವಾಗಿದೆ. ಇದು ಕ್ವಾಂಟಮ್ ಪ್ರೊಸೆಸರ್ ಲೈಟ್ 4ಕೆ ಎಂಬ ಪ್ರೊಸೆಸರ್ ನಿಂದ ಚಾಲಿತವಾಗಿದೆ. ಜೊತೆಗೆ, ಕ್ವಾಂಟಮ್ ಡಾಟ್ ಮತ್ತು ಕ್ವಾಂಟಮ್ ಎಚ್‌ಡಿಆರ್‌ ಫೀಚರ್ ಹೊಂದಿದೆ. 100% ಬಣ್ಣಗಳ ಶ್ರೀಮಂತಿಕೆಯ ಅನುಭವವನ್ನು ಒದಗಿಸುತ್ತದೆ. ಅಲ್ಲದೇ, ಈ ಸರಣಿಯು 4ಕೆ ಅಪ್‌ಸ್ಕೇಲಿಂಗ್‌ ತಂತ್ರಜ್ಞಾನ ಹೊಂದಿದೆ. ಈ ತಂತ್ರಜ್ಞಾನವು ಬಳಕೆದಾರರು ಹೈ ರೆಸಲ್ಯೂಶನ್ 4ಕೆ ಗುಣಮಟ್ಟದಲ್ಲಿ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಪ್ರಮುಖ ಅಂಶಗಳು

  • ಸ್ಯಾಮ್‌ಸಂಗ್ ತನ್ನ ಹೊಸ ಕ್ಯೂಎಲ್ಇಡಿ 4 ಕೆ ಟಿವಿಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
  • ಪ್ರೀಮಿಯಂ ಫೀಚರ್‌ಗಳನ್ನು ಹೊಂದಿರುವ ಈ ಟಿವಿ 65,990 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
  • ಇದು ಕ್ವಾಂಟಮ್ ಪ್ರೊಸೆಸರ್ ಲೈಟ್ 4ಕೆ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಜೊತೆಗೆ, ಕ್ವಾಂಟಮ್ ಡಾಟ್ ಮತ್ತು ಕ್ವಾಂಟಮ್ ಎಚ್‌ಡಿಆರ್‌ ಫೀಚರ್ ಹೊಂದಿದೆ.
Samsung: ಅತ್ಯಾಕರ್ಷಕ ಫೀಚರ್‌ಗಳ QLED 4K TV ಟಿವಿ ಬಿಡುಗಡೆ: ಬೆಲೆ ಎಷ್ಟು ಗೊತ್ತ

2024 ಕ್ಯೂಎಲ್ಇಡಿ 4ಕೆ ಟಿವಿ ವಿಶೇಷತೆಗಳು

ಈ 2024 ಕ್ಯೂಎಲ್ಇಡಿ 4ಕೆ ಟಿವಿ ಕ್ಯೂ-ಸಿಂಫನಿ ಸೌಂಡ್ ಟೆಕ್ನಾಲಜಿ, ಡ್ಯುಯಲ್ ಎಲ್‌ಇಡಿ, ಗೇಮಿಂಗ್‌ಗಾಗಿ ಮೋಷನ್ ಎಕ್ಸಲರೇಟರ್ ಮತ್ತು ಪ್ಯಾಂಟೋನ್ ಮೌಲ್ಯೀಕರಣ, ಅತ್ಯುತ್ತಮ ಬಣ್ಣದ ಸಂಯೋಜನೆ ಹೊಂದಿದೆ. ಈ ಹೊಸ ಟಿವಿ ಸರಣಿಯು 4ಕೆ ಅಪ್‌ಸ್ಕೇಲಿಂಗ್ ಫೀಚರ್ ಹೊಂದಿದ್ದು, ದೃಶ್ಯ ಗುಣಮಟ್ಟವನ್ನು ಒದಗಿಸುತ್ತದೆ. ಪರದೆಯ ಮೇಲೆ ಕಾಣಿಸುವ ದೃಶ್ಯಗಳನ್ನು 4ಕೆ ಗುಣಮಟ್ಟಕ್ಕೆ ಬದಲಿಸುತ್ತದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್‌ಪ್ಲೇ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮೋಹನ ದೀಪ್ ಸಿಂಗ್, ದೃಶ್ಯ ವೀಕ್ಷಣಾ ಕ್ರಮವು ಕಳೆದ ಎರಡು ವರ್ಷಗಳಲ್ಲಿ ಬಹಳ ವೇಗದ ಬದಲಾವಣೆ ಕಂಡಿದೆ. ಬಳಕೆದಾರರು ಹೆಚ್ಚು ತೀವ್ರ ಅನುಭವ ಒದಗಿಸುವ ಮತ್ತು ಪ್ರೀಮಿಯಂ ವೀಕ್ಷಣೆಯ ಅನುಭವವನ್ನು ಹೊಂದಲು ಬಯಸುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ನಾವು 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯನ್ನು ಪರಿಚಯಿಸಿದ್ದೇವೆ. ಈ ಮೂಲಕ ಪ್ರೀಮಿಯಂ ಮತ್ತು ಉನ್ನತ ಮಟ್ಟದ ವೀಕ್ಷಣೆಯ ಅನುಭವ ಒದಗಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ ಎಂದು ಹೇಳಿದ್ದಾರೆ.

ಕ್ವಾಂಟಮ್ ತಂತ್ರಜ್ಞಾನ, 4ಕೆ ಪ್ರೊಸೆಸರ್‌

ಈ ಸರಣಿಯು ಉದ್ಯಮದ ಮಾನದಂಡಗಳನ್ನು ಮೀರಿ ಕ್ವಾಂಟಮ್ ಪ್ರೊಸೆಸರ್ ಲೈಟ್ 4ಕೆ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ ಕ್ವಾಂಟಮ್ ಎಚ್‌ಡಿಆರ್‌ ಫೀಚರ್ ಇದ್ದು, ಸಿನಿಮೀಯ ಪ್ರಮಾಣದಲ್ಲಿ ವಿಸ್ತಾರ ವ್ಯಾಪ್ತಿಯ ಕಾಂಟ್ರಾಸ್ಟ್ ಒದಗಿಸುತ್ತದೆ. ಇದು ವೀಕ್ಷಣೆ ಮತ್ತು ಆಡಿಯೋ ಗುಣಮಟ್ಟವನ್ನು ಉತ್ತಮಗೊಳಿಸುವ ಶಕ್ತಿಶಾಲಿ ಪ್ರೊಸೆಸರ್ ಆಗಿದೆ. ಕ್ವಾಂಟಮ್ ಡಾಟ್ ತಂತ್ರಜ್ಞಾನವು ಜೀವನದ ಮಾದರಿಯ ದೃಶ್ಯಗಳನ್ನು ಒದಗಿಸುತ್ತದೆ. ಬಣ್ಣಗಳ ಒಂದು ಬಿಲಿಯನ್ ಶೇಡ್‌ಗಳನ್ನು ಗೋಚರಿಸುತ್ತದೆ. ವಿವಿಧ ಹಂತದ ಬ್ರೈಟ್‌ನೆಸ್‌ನಲ್ಲಿಯೂ ಬಣ್ಣಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ.

ಅತ್ಯುತ್ತಮ ಗೇಮಿಂಗ್ ಸೌಲಭ್ಯ

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಮೋಷನ್ ಎಕ್ಸಲರೇಟರ್ ಮತ್ತು ಆಟೋ ಲೋ ಲೋಟೆನ್ಸಿ ಮೋಡ್ (ಎಎಲ್ಎಲ್ಎಂ) ತಂತ್ಪಜ್ಞಾನ ಹೊಂದಿದೆ. ಅದರಿಂದಾಗಿ ಗೇಮರ್‌ಗಳು ಅತ್ಯುತ್ತಮ ಗೇಮ್ ಆಡಬಹುದಾಗಿದೆ. ಫ್ರೇಮ್‌ಗಳ ನಡುವಿನ ಚಲನೆಯನ್ನು ಮೊದಲೇ ಊಹಿಸಬಹುದಾಗಿದೆ. ಈ ಫೀಚರ್‌ಗಳು ಸ್ಕ್ರೀನ್ ಚಲನೆಯ ಮೃದುತ್ವವನ್ನು ಸುಧಾರಿಸುತ್ತದೆ ಮತ್ತು ಕಡಿಮೆ ಲೇಟೆನ್ಸಿ ಜತೆಗೆ ಫ್ರೇಮ್ ಬದಲಾವಣೆನ್ನು ವೇಗಗೊಳಿಸುತ್ತದೆ. ಗೇಮಿಂಗ್‌ಗಾಗಿ ಮೋಷನ್ ಆಕ್ಸಿಲರೇಟರ್ ಮತ್ತು ಪ್ಯಾಂಟೋನ್ ವ್ಯಾಲಿಡೇಶನ್ ಫೀಚರ್‌ಗಳನ್ನು ಗ್ರಾಹಕರಿಗೆ ನೀಡುತ್ತದೆ.

100+ ಉಚಿತ ಚಾನಲ್‌ಗಳನ್ನು ಒದಗಿಸುತ್ತದೆ

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಸ್ಯಾಮ್‌ಸಂಗ್‌ನ ಟಿವಿ ಪ್ಲಸ್ ಫೀಚರ್ ಹೊಂದಿದೆ. 100+ ಉಚಿತ ಚಾನಲ್‌ಗಳನ್ನು ಒದಗಿಸುತ್ತದೆ. ಇದಲ್ಲದೇ, ಸ್ಯಾಮ್ ಸಂಗ್​ನ ಟಿವಿ ಪ್ಲಸ್ ಚಂದಾದಾರಿಕೆಯನ್ನು ಒಳಗೊಂಡಿದೆ. ಅಂತರ್ನಿರ್ಮಿತ ಮಲ್ಟಿ ವಾಯ್ಸ್ ಅಸಿಸ್ಟೆಂಟ್ ಫೀಚರ್ ಗ್ರಾಹಕರಿಗೆ ಉತ್ತಮ ಕನೆಕ್ಟಿವಿಟಿ ಒದಗಿಸುತ್ತದೆ. ಜೊತೆಗೆ ಉನ್ನತ ಶ್ರೇಣಿಯ ಭದ್ರತಾ ಪರಿಹಾರವಾದ ಸ್ಯಾಮ್‌ಸಂಗ್ ನಾಕ್ಸ್ ಸುರಕ್ಷಿತ ಅನುಭವವನ್ನು ಒದಗಿಸುತ್ತದೆ.

Best Mobiles in India

English summary
Samsung launched the 2024 QLED 4K TV lineup in India. The new smart TVs start from Rs 65,990 and are available in 55-inch, 65-lunch and 75-inch screen sizes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+