Subscribe to Gizbot

ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ Duos ಬಿಡುಗಡೆ

Posted By: Varun
ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ Duos ಬಿಡುಗಡೆ

ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳಲ್ಲಿ ಹೆಸರು ಮಾಡುತ್ತಿರುವ ಸ್ಯಾಮ್ಸಂಗ್ ಕಂಪನಿ ಈಗಾಗಲೇ ವಿದೇಶದಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ Duos ಅನ್ನು ಭಾರತೀಯ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ.

ಈಗಾಗಲೇ ಸಾಕಷ್ಟು ಖ್ಯಾತಿ ಪಡೆದಿರುವ ಗ್ಯಾಲಕ್ಸಿ ಏಸ್ ನ ಮುಂದುವರಿದ ಆವೃತ್ತಿಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ ಡುಒಸ್ 15,090 ರೂಪಾಯಿಗೆ ಸಿಗಲಿದೆ.

ಈ ಸ್ಮಾರ್ಟ್ ಫೋನಿನ ಫೀಚರುಗಳು ಈ ರೀತಿ ಇವೆ:

 • 8.9 ಸೆಂ HVGA ಸ್ಕ್ರೀನ್

 • TouchWiz UX ಇಂಟರ್ಫೇಸ್

 • ಆಂಡ್ರಾಯ್ಡ್2.3 ಜಿಂಜರ್ ಬ್ರೆಡ್ ತಂತ್ರಾಂಶ

 • ದ್ವಿಸಿಮ್(ಸ್ವಾಪ್ ಆಪ್ಶನ್ ನೊಂದಿಗೆ)

 • 832 ಮೆಗಾಹರ್ಟ್ಝ್ ಪ್ರೋಸೆಸರ್

 • 5 ಮೆಗಾಪಿಕ್ಸೆಲ್ ಕ್ಯಾಮೆರಾ

 • ವೈಫೈ,2G ಹಾಗು 3G

 • 3 GB ಆಂತರಿಕ ಮೆಮೊರಿ

 • 1,300 mAh ಬ್ಯಾಟರಿ

 • 2G ಜಾಲಬಂಧದಲ್ಲಿ 16 ಗಂಟೆಗಳ ಟಾಕ್ ಟೈಮ್

 • 3G ಜಾಲಬಂಧದಲ್ಲಿ 6.5 ಗಂಟೆಗಳ ಟಾಕ್ ಟೈಮ್
 

ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಿರುವ ದ್ವಿಸಿಮ್ ಸ್ಮಾರ್ಟ್ ಫೋನುಗಳಲ್ಲಿ ಇದು ಅತ್ಯುತ್ತಮವಾಗಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot