Samsung ಆಫರ್: ಪ್ರತಿ ತಿಂಗಳು ₹6,583 ಪಾವತಿಸಿ Galaxy S26 Ultra ಖರೀದಿಸಿ!
ಟೆಕ್ ದೈತ್ಯ ಕಂಪೆನಿ Samsung ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಯನ್ನು ಸುಲಭಗೊಳಿಸಲು Galaxy Forever ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ. ಹೆಚ್ಚುತ್ತಿರುವ ಫ್ಲ್ಯಾಗ್‌ಶಿಪ್ ಫೋನ್ ಬೆಲೆಗಳ ನಡುವೆ, ಗ್ರಾಹಕರು ಒಂದು ಸಲ ದೊಡ್ಡ ಮೊತ್ತ ಪಾವತಿಸುವ ಬದಲು, ಕಡಿಮೆ ಮಾಸಿಕ EMI ಮೂಲಕ ಫೋನ್ ಬಳಸಲು ಅವಕಾಶ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ Samsung Galaxy S26 Ultra ಮತ್ತು Samsung Galaxy S26+ ಮಾದರಿಗಳು ಲಭ್ಯವಿವೆ. ಈ Galaxy Forever ಯೋಜನೆಯಿಂದ ಆರಂಭದಲ್ಲೇ ಕೇವಲ ಅರ್ಧ ಬೆಲೆ ಪಾವತಿಸಿ Samsung Galaxy S26 Ultra ಅಥವಾ Samsung Galaxy S26+ ಫೋನ್‌ಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು.! ಹಾಗಾದರೆ, ಏನಿದು ಹೊಸ ಯೋಜನೆ ಎಂಬುದನ್ನು ನೋಡೋಣ ಬನ್ನಿ.
ಏನಿದು Galaxy Forever ಯೋಜನೆ?
Samsung ಪರಿಚಯಿಸಿರುವ Galaxy Forever ಯೋಜನೆಯು ಸರಳ ಮತ್ತು ಫ್ಲೆಕ್ಸಿಬಲ್ ಪಾವತಿ ಆಗಿದೆ. ಈ ಯೋಜನೆಯಲ್ಲಿ Samsung Galaxy S26 Ultra ಅಥವಾ Samsung Galaxy S26+ ಫೋನ್ ಬೆಲೆಯ 50% ಮೊತ್ತವನ್ನು 12 ತಿಂಗಳ ನೋ-ಕಾಸ್ಟ್ EMIಗಳಲ್ಲಿ ಪಾವತಿಸಬಹುದು. ಒಂದು ವರ್ಷದ ನಂತರ, ಬಳಕೆದಾರರಿಗೆ ಮೂರು ಆಯ್ಕೆಗಳಿವೆ, ಫೋನ್ ಹಿಂತಿರುಗಿಸುವುದು, ಉಳಿದ ಮೊತ್ತ ಪಾವತಿಸಿ ಫೋನ್ ಇಟ್ಟುಕೊಳ್ಳುವುದು, ಅಥವಾ ಹೊಸ ಗ್ಯಾಲಕ್ಸಿ ಫ್ಲ್ಯಾಗ್‌ಶಿಪ್‌ಗೆ ಅಪ್‌ಗ್ರೇಡ್ ಮಾಡುವುದು. ಈ ಪ್ರಕ್ರಿಯೆಯಲ್ಲಿ ಯಾವುದೇ ಕಠಿಣ ನಿಯಮಗಳಿಲ್ಲ, ಏಕೆಂದರೆ Samsung Care+ ಮೂಲಕ 'no-questions-asked' ರಿಟರ್ನ್ ಸೌಲಭ್ಯ ನೀಡಲಾಗಿದೆ. ಇದನ್ನು ಸಮತ್ತಷ್ಟು ಸುಲಭವಾಗಿ ಈ ಕೆಳಗಿನಂತೆ ನೋಡಬಹುದು.
12 ತಿಂಗಳ ನಂತರದ ಆಯ್ಕೆಗಳು
ಗ್ರಾಹಕರು ಫೋನ್ ಬೆಲೆಯ 50% ಮೊತ್ತವನ್ನು 12 ತಿಂಗಳ ನೋ-ಕಾಸ್ಟ್ EMIಗಳಲ್ಲಿ ಪಾವತಿಸಿ ಫೋನ್ ಖರೀದಿಸುತ್ತಾರೆ. 12 ತಿಂಗಳ ಅವಧಿ ಮುಗಿದ ನಂತರ, ಕ್ರೆಡಿಟ್ ಕಾರ್ಡ್ ಬಳಕೆದಾರರು ಫೋನ್ ಹಿಂತಿರುಗಿಸಿ 50% assured buyback ಪಡೆಯಬಹುದು ಅಥವಾ ಉಳಿದ ಮೊತ್ತವನ್ನು ಮತ್ತೆ 12 EMIಗಳಲ್ಲಿ ಪಾವತಿಸಿ ಫೋನ್ ಇಟ್ಟುಕೊಳ್ಳಬಹುದು. Samsung Finance+ ಬಳಕೆದಾರರು 13ನೇ ತಿಂಗಳಲ್ಲಿ ಉಳಿದ ಮೊತ್ತ ಪಾವತಿಸಿ ಫೋನ್ ಉಳಿಸಿಕೊಳ್ಳಬಹುದು ಅಥವಾ ನೇರವಾಗಿ ಹೊಸ ಫ್ಲ್ಯಾಗ್‌ಶಿಪ್‌ಗೆ ಅಪ್‌ಗ್ರೇಡ್ ಮಾಡಬಹುದು.

EMI ವಿವರಗಳು ಮತ್ತು ಪ್ರೋಗ್ರಾಂ ಶುಲ್ಕ
ಈ ಯೋಜನೆಯ EMI ವಿವರಗಳು ಗಮನಾರ್ಹವಾಗಿವೆ. Samsung Galaxy S26 Ultraಗೆ ಪ್ರತಿ ತಿಂಗಳು ₹5,833.29 EMI ಜೊತೆಗೆ ₹749.92 ಪ್ರೋಗ್ರಾಂ ಶುಲ್ಕ ಸೇರಿ ಒಟ್ಟು ₹6,583.21 ಪಾವತಿಸಬೇಕು. Samsung Galaxy S26+ಗೆ ಪ್ರತಿ ತಿಂಗಳು ₹4,999.96 EMI ಮತ್ತು ಅದೇ ₹749.92 ಶುಲ್ಕ ಸೇರಿ ₹5,749.88 ಆಗುತ್ತದೆ.ಈ ಪ್ರೋಗ್ರಾಂ ಶುಲ್ಕದಲ್ಲಿ 13 ತಿಂಗಳ Samsung Care+ ರಕ್ಷಣೆ ಸೇರಿದ್ದು, ಅಪಘಾತ ಹಾಗೂ ನೀರಿನ ಹಾನಿಗೂ zero deductible ಕವರ್ ಸಿಗುತ್ತದೆ. ಇದರ ಮೌಲ್ಯ ಸುಮಾರು ₹13,999 ಎಂದು ಹೇಳಲಾಗಿದೆ.
ಪಾವತಿ ಆಯ್ಕೆಗಳು ಮತ್ತು ಲಭ್ಯತೆ
ಪಾವತಿ ಆಯ್ಕೆಗಳ ವಿಚಾರದಲ್ಲಿ, ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ನೋ-ಕಾಸ್ಟ್ EMI, Samsung.com ಮತ್ತು Samsung Experience Stores ಮೂಲಕ ಖರೀದಿ ಮಾಡುವ ಅವಕಾಶವಿದೆ. ಜೊತೆಗೆ Samsung Finance+ ಆಯ್ಕೆಯೂ ಲಭ್ಯವಿದೆ. ದೇಶದಾದ್ಯಂತ 1,500 ಕ್ಕೂ ಹೆಚ್ಚು ಸ್ಟೋರ್‌ಗಳಲ್ಲಿ ಈ ಯೋಜನೆ ಲಭ್ಯವಿದ್ದು, Corporate+ ಮತ್ತು Student+ ಪೋರ್ಟಲ್‌ಗಳ ಮೂಲಕ ಆಯ್ದ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿಸ್ತರಿಸಲಾಗಿದೆ.
ಸ್ಯಾಮ್‌ಸಂಗ್ ಈ ಯೋಜನೆ ಯಾಕೆ ಆರಂಭಿಸಿದೆ?
2026ರಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವುದು ಈ ಯೋಜನೆಯ ಹಿನ್ನೆಲೆಯ ಪ್ರಮುಖ ಕಾರಣವಾಗಿದೆ. DRAM ಮತ್ತು NAND ಮೆಮೊರಿಗಳ ಬೆಲೆ ಏರಿಕೆಯಿಂದ ಫೋನ್ ಬೆಲೆಗಳು ಹೆಚ್ಚಾಗಿವೆ. AI ಕ್ಷೇತ್ರದ ಕಂಪನಿಗಳಿಂದ ಮೆಮೊರಿಗಳಿಗೆ ಹೆಚ್ಚಿದ ಬೇಡಿಕೆ ಇದಕ್ಕೆ ಕಾರಣವಾಗಿದ್ದು, ಕಂಪನಿಗಳು ಬೆಲೆ ಕಡಿಮೆ ಮಾಡುವ ಬದಲು ಹೊಸ ಮಾರ್ಗಗಳನ್ನು ಹುಡುಕುತ್ತಿವೆ. ಈ ಹಿನ್ನೆಲೆಯಲ್ಲೇ ಸ್ಯಾಮ್‌ಸಂಗ್ Galaxy Forever ಮೂಲಕ ಖರೀದಿ ಅನುಭವವನ್ನು ಸುಲಭಗೊಳಿಸಲು ಪ್ರಯತ್ನಿಸಿದೆ.
ಬಳಕೆದಾರರಿಗೆ ಏನು ಲಾಭ?
ಬಳಕೆದಾರರ ದೃಷ್ಟಿಯಿಂದ ನೋಡಿದರೆ, ತಿಂಗಳಿಗೆ ಸುಮಾರು ₹6,500 ಪಾವತಿಸಿ ಪ್ರೀಮಿಯಂ ಫೋನ್ ಬಳಸುವುದು ಹೆಚ್ಚು ಸುಲಭವಾಗಿದೆ. ಜೊತೆಗೆ Samsung Care+ ರಕ್ಷಣೆ ಇದ್ದುದರಿಂದ ಹೆಚ್ಚುವರಿ ಭದ್ರತೆ ಸಿಗುತ್ತದೆ. ಪ್ರತಿವರ್ಷ ಫೋನ್ ಅಪ್‌ಗ್ರೇಡ್ ಮಾಡುವವರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ, ಏಕೆಂದರೆ ಹಳೆಯ ಫೋನ್ ಮಾರಾಟ ಮಾಡುವ ಅಗತ್ಯವಿಲ್ಲ. Galaxy S26 Ultra ದಂತಹ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಬಳಕೆದಾರರು ಪ್ರತಿ ವರ್ಷವೂ ಅಪ್‌ಡೇಟ್ ಬಯಸುವುದರಿಂದ ಇದು ಹೇಳಿ ಮಾಡಿಸಿದ ಯೋಜನೆ ಎನ್ನಬಹುದು
ಗಮನಿಸಬೇಕಾದ ಪ್ರಮುಖ ಅಂಶ
ಆದರೆ, ಬಳಕೆದಾರರಯ ಒಂದು ವರ್ಷದ ಅವಧಿಯಲ್ಲಿ ಸುಮಾರು ₹9,000 ಪ್ರೋಗ್ರಾಂ ಶುಲ್ಕ ಹೆಚ್ಚುವರಿ ಖರ್ಚಾಗುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು. ನೀವು ಫೋನ್ ಅನ್ನು ದೀರ್ಘಾವಧಿಗೆ ಬಳಸಲು ಯೋಜಿಸುತ್ತಿದ್ದರೆ, ಸಾಮಾನ್ಯ ನೋ-ಕಾಸ್ಟ್ EMI ಆಯ್ಕೆಗಳು ಹೆಚ್ಚು ಲಾಭದಾಯಕವಾಗಬಹುದು. ಒಟ್ಟಾರೆಯಾಗಿ, Galaxy Forever ಯೋಜನೆ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಯನ್ನು ಹೆಚ್ಚು ಲಭ್ಯವಾಗುವಂತೆ ಮಾಡುತ್ತದೆ. ಕಡಿಮೆ ಆರಂಭಿಕ ವೆಚ್ಚ, ಫ್ಲೆಕ್ಸಿಬಲ್ ಆಯ್ಕೆಗಳು ಮತ್ತು ರಕ್ಷಣೆ ಸೌಲಭ್ಯಗಳೊಂದಿಗೆ, ಹೊಸ ತಂತ್ರಜ್ಞಾನವನ್ನು ನಿರಂತರವಾಗಿ ಅನುಭವಿಸಲು ಬಯಸುವ ಬಳಕೆದಾರರಿಗೆ ಸೂಕ್ತವಾಗಿದೆ.


Click it and Unblock the Notifications








