ಸ್ಯಾಮ್ಸಂಗ್ Omnia M ವಿಂಡೋಸ್ ಫೋನ್ ಬಂತು

By Varun
|
ಸ್ಯಾಮ್ಸಂಗ್ Omnia M ವಿಂಡೋಸ್ ಫೋನ್ ಬಂತು

ಸ್ಯಾಮ್ಸಂಗ್ ಕಂಪನಿ ಈಗ ಭಾರತದ ನಂ.1 ಸ್ಮಾರ್ಟ್ ಫೋನ್ ಉತ್ಪಾದಕನಾಗಿದ್ದು, ಸಾಮಾನ್ಯವಾಗಿ ಅದು ಆಂಡ್ರಾಯ್ಡ್ ತಂತ್ರಾಂಶ ಆಧಾರಿತ ಸ್ಮಾರ್ಟ್ ಫೋನುಗಳನ್ನೇ ಉತ್ಪಾದನೆ ಮಾಡುತ್ತದೆ.

ಆದರೆ ಅಪರೂಪಕ್ಕೆ ಒಮ್ಮೆ ಅಂತ ಈಗ ವಿಂಡೋಸ್ ಆಧಾರಿತ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ. ಒಮ್ನಿಯ M ಹೆಸರಿನ ಈ ಫೋನ್ ವಿಂಡೋಸ್ 7.5 ಆಧಾರಿತ ತಂತ್ರಾಂಶ ಹೊಂದಿದ್ದು ಸ್ಯಾಮ್ಸಂಗ್ ಆನ್ಲೈನ್ ಮಳಿಗೆಯಲ್ಲಿ 16,400 ರೂಪಾಯಿಗೆ ಬರಲಿದೆ.

ಇದರ ಫೀಚರುಗಳು ಈ ರೀತಿ ಇವೆ:

 • 4 ಇಂಚು ಸೂಪರ್ AMOLED ಕೆಪಾಸಿಟಿವ್ ಟಚ್ ಸ್ಕ್ರೀನ್

 • 480x800 ಪಿಕ್ಸೆಲ್ ರೆಸಲ್ಯೂಶನ್

 • 1 GHz CPU

 • 384 MB ರಾಮ್

 • 4GB ಆಂತರಿಕ ಮೆಮೊರಿ

 • 5MP ಹಿಂಬದಿಯ ಕ್ಯಾಮೆರಾ, LED ಫ್ಲಾಶ್ ಹಾಗು ಜಿಯೋ ಟ್ಯಾಗಿಂಗ್ ಜೊತೆ

 • 0.3MP ಮುಂಬದಿಯ ಕ್ಯಾಮರಾ

 • ವೀಡಿಯೋ ರೆಕಾರ್ಡಿಂಗ್ ಸೌಲಭ್ಯ - 30fps ನಲ್ಲಿ

 • ಇಂಟರ್ನೆಟ್ ಬ್ರೌಸಿಂಗ್ ಗಾಗಿ HTML5

 • MP3 ಹಾಗು MP4 ಪ್ಲೇಯರ್

 • 3.5mm ಆಡಿಯೋ ಜ್ಯಾಕ್, RDS ಜೊತೆ ಎಫ್ಎಂ ರೇಡಿಯೋ

 • 3G HSDPA, Wi-Fi, ಬ್ಲೂಟೂತ್, GPS,USB 2.0

 • 1500 mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X