ಸ್ಯಾಮ್ ಸಂಗ್ ಯಶಸ್ಸಿನ ಹೊಸ ಅಲೆ ಅಲೆಯೋ!

By Super
|
ಸ್ಯಾಮ್ ಸಂಗ್ ಯಶಸ್ಸಿನ ಹೊಸ ಅಲೆ ಅಲೆಯೋ!
ಬೆಂಗಳೂರು, ಜು. 25: ಆಂಡ್ರಾಯ್ಡ್ ಆಪರೆಟಿಂಗ್ ಸಿಸ್ಟಮ್ ಮೊಬೈಲ್ ಜಗತ್ತಿನಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿಕೊಟ್ಟಿದೆ. ಇದನ್ನು ಬಿಟ್ಟರೆ ಇರುವ ಬದಲಿ ಎಂದರೆ ವಿಂಡೋಸ್ ಹಾಗೂ ಸಿಂಬಿಯನ್ OS ಗಳು ಮಾತ್ರ.;

ಆಂಡ್ರಾಯ್ಡ್ ಆಧಾರಿತ ಸಾಕಷ್ಟು ಫೊನ್ ಗಳು ಈಗಾಗಲೇ ಇರುವುದರಿಂದ ಹಾಗೂ ಮೊಬೈಲ್ ತಂತ್ರಜ್ಞಾನ ದಿನೆ ದಿನೇ ಆಧುನಿಕರಣಗೊಳ್ಳುತ್ತಿರುವುದರಿಂದ ಇದರ ಬಳಕೆಯಲ್ಲಿಯೂ ಕೂಡ ಹೊಸ ಆವೃತ್ತಿ ಕಂಡುಕೊಳ್ಳುವುದು ಅನಿವಾರ್ಯವಾಗಿದೆ.

ಇದೀಗ ಸ್ಯಾಮ್ ಸಂಗ್ ಆಂಡ್ರಾಯ್ಡ್ ಜಿಂಜರ್ ಬ್ರೆಡ್ 2.3.3 ನಂತರದ 2.3.4 ರನ್ನು ಬಳಸಿ ಹೊಸ ಮೊಬೈಲ್ 'ಸ್ಯಾಮ್ ಸಂಗ್ ಗೆಲಾಕ್ಸಿ S I9000' ತರುತ್ತಿದೆ.
ಗ್ರಾಹಕರ ಡಾಟಾ ರಕ್ಷಣೆಯ ವಿಷಯದಲ್ಲಿ ಇದು ಮೊದಲಿನ ಆವೃತ್ತಿಗಿಂತ ಮುಂದಿರುವುದು ಇದರ ಪ್ಲಸ್ ಪಾಯಿಂಟ್. ಈ ಹೊಸ ಆವೃತ್ತಿಯನ್ನು ಮೊಟ್ಟಮೊದಲು ಬಳಕೆಗೆ ತರಲಿರುವ ಸ್ಯಾಮ್ ಸಂಗ್ ಜಾಕ್ ಪಟ್ ಹೊಡೆಯುವುದು ಗ್ಯಾರಂಟಿ!

;

ಇದರ ವಿಶೇಷತೆಗಳು ಈ ರೀತಿ ಇವೆ:
* 5 ಮೆಗಾ ಪಿಕ್ಸೆಲ್ ಕ್ಯಾಮೆರಾ/ ಲೆಡ್ ಫ್ಲಾಶ್, ಆಟೊಫೋಕಸ್
* 720 p ವಿಡಿಯೋ ರೆಕಾರ್ಡಿಂಗ್
* ಸುಪರ್ AMOLED ಡಿಸ್ ಪ್ಲೇ
* 3G
* EDGE, GPRS
* Wi-Fi
* EDR ಸಹಿತ ಬ್ಲೂ ಟೂಥ್
* FM ರೇಡಿಯೋ
* ಜಾವಾ
* GPS
* 800 MHz ಪ್ರೊಸೆಸರ್
* ವಿಸ್ತರಿಸಬಹುದಾದ 32 GB ಮೆಮೊರಿ

ಆಹಾ! ಎಷ್ಟೊಂದು ವಿಶೇಷತೆಗಳು ನೋಡಿ. ಖಂಡಿತ ಈ ಮೊಬೈಲ್ ಕೊಳ್ಳಲೇಬೇಕು ಅನ್ನಿಸುವಂತಿದೆ, ರೂಪ ಹಾಗೂ ವಿಶೇಷ. ಸರಿ, ಇನ್ನು ನಿಮ್ಮ ಹಣದಲ್ಲಿ ಇದನ್ನು ಕೊಳ್ಳಲು ಪಾಲು ತೆಗೆದಿಡಿ.

;
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X