ಚೀನಾ ಮೊಬೈಲ್ ಕಂಪೆನಿಗಳಿಗೆ ನಡುಕ ಹುಟ್ಟಿಸಿದ ಸ್ಯಾಮ್‌ಸಂಗ್!
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಉತ್ಪಾದಿತ ಸ್ಮಾರ್ಟ್‌ಫೋನ್‌ಗಳ ಪ್ರಾಬಲ್ಯ ಹೆಚ್ಚುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸ್ಯಾಮ್‌ಸಂಗ್ ಇದೀಗ ಸೆಡ್ಡು ಹೊಡೆಯಲು ಮುಂದಾಗಿದೆ. ತನ್ನ ಕೆಲವೊಂದು ನೀತಿಗಳನ್ನು ಬದಲಾವಣೆ ಮಾಡಿಕೊಂಡು ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುವ ಗ್ಯಾಲೆಕ್ಸಿ ಎ7 ಅನ್ನು ಘೋಷಣೆ ಮಾಡಿದೆ.
30,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿರಲಿದೆ ಎಂದು ಸ್ಯಾಮ್‌ಸಂಗ್ ಕಂಪೆನಿ ಹೇಳಿರುವುದು ಚೀನಾ ಮೊಬೈಲ್ ಕಂಪೆನಿಗಳಿಗೆ ನಡುಕ ಹುಟ್ಟಿಸಿದೆ. ಸ್ಯಾಮ್‌ಸಂಗ್ ಕಂಪೆನಿಯ ಮೊದಲ ಮೂರು ಕ್ಯಾಮೆರಾ ಸ್ಮಾರ್ಟ್‌ಪೋನ್ 'ಗ್ಯಾಲಾಕ್ಸಿ ಎ7' ನೆನ್ನೆಯಷ್ಟೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

6 ಇಂಚುಗಳ ಸಂಪೂರ್ಣ HD+ (1080x2280) ಸೂಪರ್ AMOLED ಇನ್ಫಿನಿಟಿ ಡಿಸ್‌ಪ್ಲೇ, 24 MP ಸೆಲ್ಫಿ ಫಿಕ್ಸೆಡ್ ಫೋಕಸ್ ಸೆಲ್ಫಿ ಕ್ಯಾಮೆರಾಗಳಂತಹ ಅತ್ಯುತ್ತಮ ಫೀಚರ್ಸ್ ಹೊತ್ತು ಬಜೆಟ್ ಬೆಲೆಯಲ್ಲಿ 'ಗ್ಯಾಲಾಕ್ಸಿ ಎ7' ಮಾರುಕಟ್ಟೆಗೆ ಎಂಟ್ರಿ ನೀಡುತ್ತಿದ್ದು, ಹಾಗಾದರೆ, ಬಹು ನಿರೀಕ್ಷಿತ 'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನ್ ಹೊಂದಿರುವ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿರಿ.

ಗ್ಯಾಲಾಕ್ಸಿ ಎ7 ಡಿಸ್‌ಪ್ಲೇ ಹೇಗಿದೆ?
ಮೊದಲೇ ಹೇಳಿದಂತೆ 'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನ್ 18.5: 9 ರ ಆಕಾರ ಅನುಪಾತದೊಂದಿಗೆ 6 ಇಂಚುಗಳ ಸಂಪೂರ್ಣ HD+ (1080x2280) ಸೂಪರ್ AMOLED ಇನ್ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. 1080x2220 ಪಿಕ್ಸೆಲ್ ಸಾಮರ್ಥ್ಯದ ಈ ಡಿಸ್‌ಪ್ಲೇ ಮಲ್ಟಿಮೀಡಿಯಾ ಹಾಗೂ ಗೇಮಿಂಗ್ ಸ್ಮಾರ್ಟ್‌ಫೋನ್ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಇದೆ.

ಪ್ರೊಸೆಸರ್ ಮತ್ತು RAM!
'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನ್ ಒಕ್ಟಾ ಕೋರ್ SoC 2.2GHz ಸಾಮರ್ಥ್ಯದ ಪ್ರೊಸೆಸರ್ ಅನ್ನು ಹೊಂದಿದೆ. ಆದರೆ, ಪ್ರೊಸೆಸರ್ ಯಾವುದು ಎಂಬ ಮಾಹಿತಿಯನ್ನು ಮುಚ್ಚಿಟ್ಟಿರುವ ಸ್ಯಾಮ್‌ಸಂಗ್ 4GB / 6GB RAM ಮತ್ತು 64GB / 128GB ಅಂತರ್ಗತ ಶೇಖರಣಾ ಸಾಮರ್ಥ್ಯದ ಎರಡು ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ.

3 ರಿಯರ್ ಕ್ಯಾಮೆರಾಗಳು!
'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನಿನಲ್ಲಿ, 24 MP ಆಟೋಫೋಕಸ್ ಸೆನ್ಸಾರ್ (f/1.7 aperture), 8 MP ಅಲ್ಟ್ರಾ ವೈಡ್ ಸೆನ್ಸಾರ್ (f/2.4 aperture) ಹಾಗೂ 5MP ಡೆಪ್ತ್ ಸೆನ್ಸಾರ್ (f/2.2 aperture)ಸಾಮರ್ಥ್ಯದ ಮೂರು ರಿಯರ್ ಕ್ಯಾಮೆರಾಗಳ ಜೊತೆ 24 MP ಫೋಕಸ್ ಸೆನ್ಸಾರ್ (f/2.0 aperture) ಸೆಲ್ಫಿ ಕ್ಯಾಮೆರಾವನ್ನು ನೀಡಿ ಸ್ಯಾಮ್‌ಸಂಗ್ ಗಮನಸೆಳೆದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ?
ಬಹುತೇಕ ಎಲ್ಲಾ ಹೈ ಎಂಡ್ ಫೀಚರ್ಸ್ ಹೊಂದಿರುವ 'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನಿನಲ್ಲಿ 3300mAh ಬ್ಯಾಟರಿಯನ್ನು ನೀಡಲಾಗಿದೆ. ಸ್ಯಾಮ್ಸಂಗ್ ಪೇ, 4ಜಿ ವೋಲ್ಟ್, ಡ್ಯುಯಲ್ ಬ್ಯಾಂಡ್ ವೈ-ಫೈ 802.11ac, ಬ್ಲೂಟೂತ್ ವಿ5.0, 3.5 mm ಹೆಡ್‌ಫೋನ್ ಜ್ಯಾಕ್, RGB ಸೆನ್ಸರ್ ಹಾಗೂ ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕಗಳು ಫೋನಿನಲ್ಲಿ ಅಲಂಕೃತವಾಗಿವೆ.

ಬೆಲೆ ಮತ್ತು ಲಭ್ಯತೆ?
ಸ್ಯಾಮ್ಸಂಗ್ ಕಂಪೆನಿ ಗ್ಯಾಲಕ್ಸಿ ಎ7 2018) ಬೆಲೆಯನ್ನು 350 ಇಯುಆರ್‌ಗಳು ಎಂದು ಹೇಳಿಕೊಂಡಿದೆ, ಭಾರತದ ರೂಪಾಯಿಗಳ ಬೆಲೆಯಲ್ಲಿ ಅಂದಾಜು 30,000 ರುಪಾಯಿಗಳಲಾಗುತ್ತವೆ. ದಕ್ಷಿಣ ಕೋರಿಯಾದಲ್ಲಿ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್ ಅನ್ನು ಸದ್ಯದಲ್ಲೇ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸುವುದಾಗಿ ಸ್ಯಾಮ್ಸಂಗ್ ಹೇಳಿಕೊಂಡಿದೆ.


Click it and Unblock the Notifications








