ಗ್ಯಾಲಕ್ಸಿ ಎಸ್ ಮೊಬೈಲ್ ಮತ್ತು ಟ್ಯಾಬ್ಲೆಟ್ ಗೆ ಪರಿಷ್ಕರಣೆ ರದ್ದು

Posted By: Staff
ಗ್ಯಾಲಕ್ಸಿ ಎಸ್ ಮೊಬೈಲ್ ಮತ್ತು ಟ್ಯಾಬ್ಲೆಟ್ ಗೆ ಪರಿಷ್ಕರಣೆ ರದ್ದು

ಸ್ಯಾಮ್ ಸಂಗ್ ಕಂಪನಿ ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳ ತಯಾರಿಕೆಯಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ. ಇದರ ಹಿಂದಿನ ರಹಸ್ಯವೆಂದರೆ ಸ್ಯಾಮ್ ಸಂಗ್ ನ ಗ್ಯಾಲಕ್ಸಿ ಸಿರೀಸ್ ಟ್ಯಾಬ್ಲೆಟ್ ಮತ್ತು ಮೊಬೈಲ್ ಗಳು.

ಗ್ಯಾಲಕ್ಸಿ ಸಿರೀಸ್ ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳು ಒಳ್ಳೆ ವಿನ್ಯಾಸದೊಂದಿಗೆ ಅನೇಕ ಗುಣ ಲಕ್ಷಣಗಳನ್ನು ಹೊತ್ತು ತಂದಿರುವುದು ವಿಶೇಷತೆಗಳಲ್ಲಿ ಒಂದು. ಈ ಸಾಧನಗಳ ಕಾರ್ಯ ಕ್ಷಮತೆ ಬಗ್ಗೆಯೂ ಮಾತನಾಡುವಂತಿಲ್ಲ.

ಸ್ಯಾಮ್ ಸಂಗ್  ಗ್ಯಾಲಕ್ಸಿ ಟ್ಯಾಬ್ಲೆಟ್ ಮತ್ತು ಮೊಬೈಲ್ ಗಳು ಹೆಚ್ಚಾಗಿ ಆಂಡ್ರಾಯ್ಡ್ v2.3 ಅಥವಾ ಜಿಂಜರ್ ಬ್ರೆಡ್ ಮತ್ತು v3.2 ಆಂಡ್ರಾಯ್ಡ್ ಹನಿ ಕಾಂಬ್ ಆಯಾಮದ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿವೆ. ಈ ಮೊಬೈಲ್ ಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಂಪನಿ ತನ್ನ ಮೊಬೈಲ್ ಗಳ ಆಪರೇಟಿಂಗ್ ಸಿಸ್ಟಮನ್ನು ಪರಿಷ್ಕ್ರತಗೊಳಿಸುವ ಕುರಿತು ಚಿಂತನೆ ನಡೆಸಿತ್ತು. ಅಂದರೆ ಆಂಡ್ರಾಯ್ಡ್ v4.0 ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಗೆ ಪರಿಷ್ಕರಣೆಗೊಳಿಸುವತ್ತ ಚಿಂತನೆ ನಡೆಸಿತ್ತು.

ಆದರೆ ಇದೀಗ ಸ್ಯಾಮ್ ಸಂಗ್ ನ ಕೆಲವೇ ಮೊಬೈಲ್ ಗಳು ಮಾತ್ರ ಈ ಪರಿಷ್ಕರಣೆಗೆ ಒಳಪಡುತ್ತಿರುವುದಾಗಿ ತಿಳಿದುಬಂದಿದೆ. ಅಂದರೆ ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಗೆ ಪರಿಷ್ಕ್ರತಗೊಳ್ಳುತ್ತಿರುವ ಮೊಬೈಲ್ ಗಳಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಮೊಬೈಲ್ ಮತ್ತು 7 ಇಂಚಿನ ಸ್ಯಾಮ್ ಸಂಗ್ ಗ್ಯಾಲಕ್ಸಿ ಟಾಬ್ ಗಳಿಗೆ ಈ ಪರಿಷ್ಕರಣೆ ಅನ್ವಯಿಸುತ್ತಿಲ್ಲ.

ಈ ಸುದ್ದಿ ಸ್ಯಾಮ್ ಸಂಗ್ 2010 ಗ್ಯಾಲಕ್ಸಿ ಎಸ್  ಮೊಬೈಲ್ ಫೋನ್ ಮತ್ತು ಗ್ಯಾಲಕ್ಸಿ 7 ಇಂಚಿನ ಟ್ಯಾಬ್ಲೆಟ್ ಬಳಕೆದಾರರಿಗೆ ಸ್ವಲ್ಪ ನಿರಾಶೆಯನ್ನು ಉಂಟುಮಾಡಿದೆ. ಈ ಪರಿಷ್ಕರಣೆ ನಡೆಯದಿರುವ ಕುರಿತು ಕಂಪನಿಗೆ ಪ್ರಶ್ನಿಸಿದಾಗ ಟ್ಯಾಬ್ಲೆಟ್ ಮತ್ತು ಗ್ಯಾಲಕ್ಸಿ ಎಸ್ ನಲ್ಲಿ ಟಚ್ ವಿಝ್ ಸ್ಕಿನ್, ವಿಡಿಯೋ ಕಾನ್ಫೆರೆನ್ಸಿಂಗ್ ಸಾಫ್ಟ್ ವೇರ್, ವಿಜೆಟ್, ಕರಿಯರ್ ಸಾಫ್ಟ್ ವೇರ್ ಮುಂತಾದ ಲಕ್ಷಣಗಳು ಪರಿಷ್ಕರಣೆಗೊಳ್ಳಲು ಸ್ವಲ್ಪ ತೊಂದರೆಯುಂಟಾಗುತ್ತದೆ ಎಂದಷ್ಟೇ ಉತ್ತರಿಸಿದೆ.

ಸ್ಯಾಮ್ ಸಂಗ್ ನ ಹಲವು ಮೊಬೈಲ್ ಗಳಲ್ಲಿ RAM ಮತ್ತು ROM ಮೆಮೊರಿಗೆ ಸಂಬಂಧಿಸಿದಂತೆ ಕೆಲವು ಗೊಂದಲವಿರುವ ಕಾರಣ ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಗೆ ಪರಿಷ್ಕರಣೆಗೊಳ್ಳುತ್ತಿದೆ ಎನ್ನಲಾಗಿದೆ.

ಗ್ಯಾಲಕ್ಸಿ ಎಸ್ ಬಳಕೆದಾರರು ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಪರಿಷ್ಕರಣೆ ಕುರಿತು XDA ಇಂದ ಸಹಾಯ ತೆಗೆದುಕೊಳ್ಳಬಹುದು. ಆದರೆ ಪರಿಷ್ಕರಣೆ ನಂತರ ಸಾಧನದಿಂದ ಅತಿ ಹೆಚ್ಚು ಕಾರ್ಯ ಕ್ಷಮತೆ ಕುರಿತು ಗ್ಯಾರಂಟಿ ಇಲ್ಲ ಎನ್ನಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot