Subscribe to Gizbot

ಸ್ಯಾಮ್ ಸಂಗ್ ತಂದಿದೆ ಹೊಸ ಓಮ್ನಿಯಾ ಮೊಬೈಲ್

Posted By: Staff
ಸ್ಯಾಮ್ ಸಂಗ್ ತಂದಿದೆ ಹೊಸ ಓಮ್ನಿಯಾ ಮೊಬೈಲ್
ಸ್ಯಾಮ್ ಸಂಗ್ ಮೊಬೈಲ್ ಗಳು ಗುಣಮಟ್ಟಕ್ಕೆ ಹೆಸರು ವಾಸಿ. ಸ್ಯಾಮ್ ಸಂಗ್ ಹೊರತಂದಿರುವ ಸ್ಯಾಮ್ ಸಂಗ್ ಓಮ್ನಿಯಾ W ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ W ಎರಡೂ ಕೂಡ ಅತ್ಯುನ್ನತ ಸ್ಮಾರ್ಟ್ ಫೋನ್ ಗಳು.

ಎರಡರಲ್ಲು ಗ್ರಾಹಕರಿಗೆಂದೇ ಅತಿ ವಿಶೇಷವಾದ ಆಯ್ಕೆಗಳನ್ನು ನೀಡಲಾಗಿದೆ. ಗ್ರಾಹಕರ ಹಣಕ್ಕೆ ತಕ್ಕ ಎಲ್ಲಾ ಆಯ್ಕೆಗಳೂ ಇದರಲ್ಲಿರುವುದಾಗಿ ಕಂಪನಿ ತಿಳಿಸಿದೆ.

ಈ ಮೊಬೈಲ್ ಗಳು ಕ್ವಾಲ್ಕಂ 8255 ಸ್ನಾಪ್ ಡ್ರಾಗನ್ ಪ್ರೊಸೆಸರ್ ಪಡೆದುಕೊಂಡಿದೆ. ಗ್ಯಾಲಕ್ಸಿ W ಮೊಬೈಲ್ ಆಂಡ್ರಾಯ್ಡ್ 2.3.5 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದರೆ, ಓಮ್ನಿಯಾ W ಮೊಬೈಲ್ ಮೈಕ್ರೊಸಾಫ್ಟ್ ವಿಂಡೋಸ್ ಫೋನ್ 7.5 ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ.

ಸ್ಯಾಮ್ ಸಂಗ್ ಓಮ್ನಿಯಾ W ಮೊಬೈಲ್ ವಿಶೇಷತೆ:

* 115.6 ಎಂಎಂ x 58.8 ಎಂಎಂ x 10.9 ಎಂಎಂ ಸುತ್ತಳತೆ

* 115.3 ಗ್ರಾಂ ತೂಕ

* 3.7 ಇಂಚಿನ TFT ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್

* ಆಟೊ ಫೋಕಸ್, LED ಫ್ಲಾಶ್

* 8ಜಿಬಿವರೆಗೂ ಆಂತರಿಕ ಮೆಮೊರಿ, 512 ಎಂಬಿ RAM

ಸ್ಯಾಮ್ ಸಂಗ್ ಗ್ಯಾಲಕ್ಸಿ W ಮೊಬೈಲ್ ವಿಶೇಷತೆ:

* 115.5 ಎಂಎಂ x 59.8 ಎಂಎಂ x 11.5 ಎಂಎಂ

* 114.7 ಗ್ರಾಂ ತೂಕ

* 3.7 ಇಂಚಿನ ಅಮೊಲೆಡ್ ಟಚ್ ಸ್ಕ್ರೀನ್ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್

* ಆಟೊ ಫೋಕಸ್, LED ಫ್ಲಾಶ್

* 1.7 ಜಿಬಿ ಆಂತರಿಕ ಮೆಮೊರಿ, 512 ಎಂಬಿ RAM

* ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್

ಎರಡೂ ಮೊಬೈಲ್ ಗಳ ಸ್ಕ್ರಿನ್ ಗಳೂ 16 ಮಿಲಿಯನ್ ವಿವಿಧ ಬಣ್ಣಗಳನ್ನು ಬೆಂಬಲಿಸುತ್ತದೆ. ಎರಡೂ ಮೊಬೈಲ್ ಗಳಲ್ಲೂ ಡ್ಯೂಯಲ್ ಕ್ಯಾಮೆರಾ ಇದ್ದು. ಸೆಕೆಂಡರಿ ಕ್ಯಾಮೆರಾ VGA ಆಗಿದೆ. ವಿಡಿಯೋ ಕಾಲಿಂಗ್ ಗೆ ಇದು ಹೆಚ್ಚು ಉಪಯುಕ್ತವಾಗಲಿದೆ.

ಸ್ಯಾಮ್ ಸಂಗ್ ಓಮ್ನಿಯಾ W ಮೊಬೈಲ್ 18,500 ರೂಪಾಯಿ ಎಂದು ತಿಳಿದುಬಂದಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ W ಮೊಬೈಲ್ ಕೂಡ ಇದೇ ಬೆಲೆಯಲ್ಲಿ ಲಭ್ಯವಾಗುವ ಅಂದಾಜಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot