ಸ್ಯಾಮ್ ಸಂಗ್ ನೀಡುತಿದೆ ಓಮ್ನಿಯಾ W ಮೊಬೈಲ್

Posted By: Staff
ಸ್ಯಾಮ್ ಸಂಗ್ ನೀಡುತಿದೆ ಓಮ್ನಿಯಾ W ಮೊಬೈಲ್

 

ವಿಂಡೋಸ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್ ಗಳು ಇದೀಗ ಹೆಚ್ಚು ಪ್ರಚಲಿತದಲ್ಲಿದೆ. ಅದಕ್ಕೆಂದೇ ಸ್ಯಾಮ್ ಸಂಗ್ ಕಂಪನಿ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತ ಸ್ಯಾಮ್ ಸಂಗ್ ಓಮ್ನಿಯಾ W ಎಂಬ ನೂತನ ಮೊಬೈಲ್ ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ.

ಈ ಸ್ಯಾಮ್ ಸಂಗ್ ಓಮ್ನಿಯಾ W ಮೊಬೈಲ್ 1.4 GHz ಸಿಂಗಲ್ ಕೋರ್ ಸ್ಕಾರ್ಪಿಯನ್ ಪ್ರೊಸೆಸರ್ ಮತ್ತು ಗ್ರಾಫಿಕ್ ಗೆಂದು ಅಡೆರ್ನೊ 205 ಪ್ರೊಸೆಸರ್ ಪಡೆದುಕೊಂಡಿದೆ. ನೇವಿಗೇಶನ್ ಗೆಂದು ಮೂರು ಕೀಗಳನ್ನು ನೀಡಲಾಗಿದೆ. ವಿಂಡೋಸ್ ಫೋನ್ 7.5 ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಫೋನ್ 3ಜಿ ಜೊತೆ 14.4 Mbps HSDPA ಕೂಡ ಹೊಂದಿದೆ. ಕಪ್ಪು ಬಣ್ಣದಲ್ಲಿ ಈ ಮೊಬೈಲ್ ಲಭ್ಯವಿದೆ.

ಸ್ಯಾಮ್ ಸಂಗ್ ಓಮ್ನಿಯಾ W ವಿಶೇಷತೆ:

* 115.6 x 58.8 x 10.9 ಎಂಎಂ ಸುತ್ತಳತೆ

* 115 ಗ್ರಾಂ ತೂಕ

* 3.7 ಇಂಚಿನ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್

* ಅಮೊಲೆಡ್ ಡಿಸ್ಪ್ಲೇ, 252 ppi ಪಿಕ್ಸಲ್ ಡೆನ್ಸಿಟಿ

* ಬ್ಲೂಟೂಥ್, 802.11 b/g/n ವೈ-ಫೈ, GPS

* 5 ಮೆಗಾ ಪಿಕ್ಸಲ್ ಕ್ಯಾಮೆರಾ, LED ಫ್ಲಾಶ್

* VGA ಸೆಕೆಂಡರಿ ಕ್ಯಾಮೆರಾ

* 512 ಎಂಬಿ RAM ಮತ್ತು 8 ಜಿಬಿ ಮೆಮೊರಿ ಸಾಮರ್ಥ್ಯ

* GPRS, EDGE ಸಂಪರ್ಕ

* 3.5 ಎಂಎಂ ಆಡಿಯೋ ಜ್ಯಾಕ್

ಮನರಂಜನೆಗೆಂದು ಹಲವು ಆಯ್ಕೆಗಳು ಮೊಬೈಲ್ ನಲ್ಲಿದ್ದು, ಅವುಗಳಲ್ಲಿ ಸಾಮಾಜಿಕ ತಾಣದ ಆಯ್ಕೆಯೂ ಇದೆ.  ಇಂಟರ್ನೆಟ್ ವೇಗಕ್ಕೆಂದು ಎಕ್ಸ್ ಪ್ಲೋರರ್ 9 ಬ್ರೌಸರ್ ಒಳಗೊಂಡಿದೆ. ಮ್ಯೂಸಿಕ್ ಪ್ಲೇಯರ್, ಝ್ಯೂನ್ ಇಂಟರ್ ಫೇಸ್, ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಮತ್ತು ಗೈರೊ ಸೆನ್ಸಾರ್ ನೀಡಲಾಗಿದೆ.

1500 mAh Li ಬ್ಯಾಟರಿ ಹೊಂದಿರುವ ಈ ಮೊಬೈಲ್ 7 ಗಂಟೆ ಟಾಕ್ ಟೈಂ ಮತ್ತು 370 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಈ ಸ್ಯಾಮ್ ಸಂಗ್ ಓಮ್ನಿಯಾ W ಮೊಬೈಲ್ ಬೆಲೆ 20,000 ರೂ ಎಂದು ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot