Subscribe to Gizbot

30ಸಾವ್ರಕ್ಕೆ 50ಇಂಚ್ ಸ್ಯಾಮ್ಸಂಗ್ ಪ್ರೊಜೆಕ್ಟರ್ ಫೋನ್

Posted By: Varun
30ಸಾವ್ರಕ್ಕೆ 50ಇಂಚ್ ಸ್ಯಾಮ್ಸಂಗ್ ಪ್ರೊಜೆಕ್ಟರ್ ಫೋನ್

ಸ್ಮಾರ್ಟ್ ಫೋನಿನಲ್ಲೇ ಫಿಲಂ ನೋಡುವುದು ಹಳೆಯದಾಯ್ತು. ಈಗ ಏನಿದ್ದರೂ ಫೋನಿನಲ್ಲಿನ ವೀಡಿಯೋಗಳನ್ನುಪ್ರೊಜೆಕ್ಟ್ ಮಾಡಿ ದೊಡ್ಡ ಪರದೆಯ ಮೇಲೆ ನೋಡುವ ತಂತ್ರಜ್ಞಾನ ಬಂದಾಯ್ತು. ಹಲವಾರು ಕಂಪನಿಗಳ ಪ್ರೊಜೆಕ್ಟರ್ ಗಳು ಮಾರುಕಟ್ಟೆಯಲ್ಲಿ ಇವೆಯಾದರೂ ಅಷ್ಟೊಂದು ಫೇಮಸ್ ಆಗಿಲ್ಲ. ಆದರೆ ಯಾವಾಗ ಸ್ಯಾಮ್ಸಂಗ್ ಇದನ್ನು ಫೆಬ್ ತಿಂಗಳಲ್ಲಿ ಘೋಷಣೆ ಮಾಡಿತೋ, ಆಗಲೇ ಇದರ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇದ್ದವು.

ಈಗ ಕಾಯುವ ಕಾಲ ಮುಗಿದಿದ್ದು ಫೋನ್ ಅನ್ನು ಖರೀದಿ ಮಾಡುವ ಸಮಯ ಬಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಬೀಮ್ ಪ್ರೊಜೆಕ್ಟರ್ ಫೋನ್ ಅನ್ನು ನೀವು ಸ್ಯಾಮ್ಸಂಗ್ ಆನ್ಲೈನ್ ಮಳಿಗೆಯಲ್ಲಿ ಪ್ರೀ ಆರ್ಡರ್ ಮಾಡಬಹುದಾಗಿದೆ, ಅದೂ 30 ಸಾವಿರ ರೂಪಾಯಿಗೆ.

ಬಳಕೆದಾರರು ಮಲ್ಟಿಮೀಡಿಯಾ ಸಂಬಂಧೀ ಮಾಹಿತಿಯನ್ನು ಪ್ರದರ್ಶಿಸಲು ಮತ್ತು ಹಂಚಿಕೊಳ್ಳಲು ಗೋಡೆ, ಸೀಲಿಂಗ್ ಇಲ್ಲವೆ ಯಾವುದೇ ನುಣುಪಾದ ಗೋಡೆಯ ಮೇಲೆ ಪ್ರದರ್ಶಿಸಬಹುದು. ಕ್ವಾಡ್-ಬ್ಯಾಂಡ್ ನಿಂದಾಗಿ GSM ಜಾಲದಲ್ಲೇ ಕೆಲಸಮಾಡುವ ಸಾಮರ್ಥ್ಯ ಹೊಂದಿದ್ದು, ವಿಡಿಯೋಗಳು, ನಕ್ಷೆಗಳು, ವ್ಯವಹಾರ ಮಾಹಿತಿಯನ್ನು ಕೂಡ ಪ್ರೊಜೆಕ್ಟ್ ಮಾಡಬಹುದು.

ವೀಡಿಯೋ, ಫೋಟೋ ಹಾಗು ಫಿಲ್ಮ ಅನ್ನು 50 ಇಂಚ್ ನಷ್ಟು ದೊಡ್ಡದಾದ ಪರದೆಯ ಮೇಲೆ ಪ್ರೊಜೆಕ್ಟ್ ಮಾಡುವ ಸಾಮರ್ಥ್ಯವಿರುವ ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಬೀಮ್, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶದಲ್ಲಿ ಕೆಲಸ ಮಾಡಲಿದ್ದು, ಈ ಸ್ಮಾರ್ಟ್ ಫೋನ್ ನಲ್ಲಿ ಏನೇನಿದೆ ನೋಡಿ:

 • 4.0-ಇಂಚಿನ (480×800) WVGA TFT ಡಿಸ್ಪ್ಲೇ

 • 1GHz ಡ್ಯುಯಲ್ ಕೋರ್ ಪ್ರೊಸೆಸರ್

 • 5 ಮೆಗಾಪಿಕ್ಸೆಲ್ ಆಟೋಫೋಕಸ್ ಕ್ಯಾಮೆರಾ

 • HSPA 14.4 ನೆಟ್ವರ್ಕ್

 • 768 MB ರಾಮ್

 • 8GB ಆಂತರಿಕ ಮೆಮೊರಿ ಹೊಂದಿದ್ದು 32GB ವರೆಗೆ ವಿಸ್ತರಿಸಬಹುದು

 • ಮೈಕ್ರೊ ಕಾರ್ಡ ಸ್ಲಾಟ್

 • 802.11 b/g/n 2.4GHz ವೈಫೈ

 • 2.5mm ಅಳತೆಯ, 2000mAh ಬ್ಯಾಟರಿ

 • 1200 ನಿಮಿಷಗಳ ಟಾಕ್ ಟೈಮ್

 • 760 ಗಂಟೆಗಳ ಸ್ಟಾಂಡ್ ಬೈ ಟೈಮ್
 

ಸ್ಯಾಮ್ಸಂಗ್ ಆನ್ಲೈನ್ ಮಳಿಗೆಯಲ್ಲಿ ನೀವು ಇದನ್ನು ಪ್ರೀ ಆರ್ಡರ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot