Home
ಮೊಬೈಲ್

ಸ್ಮಾರ್ಟ್‌ಫೋನ್ ಮಾರುಕಟ್ಟೆ ತಲ್ಲಣ: ರೂ.2500ಕ್ಕೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌..?

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಅಧ್ಯಾಯವನ್ನು ಆರಂಭಿಸಿದ ಸ್ಯಾಮ್‌ಸಂಗ್, ಇಂದಿನ ದಿನದಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗಳಿಗೆ ಮಾತ್ರವೇ ಸಿಮೀತ ಎನ್ನುವಂತಾಗಿದೆ. ಮಾರುಕಟ್ಟೆಯಲ್ಲಿ ಚೀನಾ ಮೂಲದ ಶಿಯೋಮಿ ಅಬ್ಬರವೂ ಜೋರಾಗಿದ್ದು, ಬಜೆಟ್ ಮತ್ತು ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಪಾಲನ್ನು ಆಕ್ರಮಿಸಿಕೊಂಡಿದೆ. ಅಲ್ಲದೇ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿರುವ ಶಿಯೋಮಿ, ಭಾರತದ ನಂಬರ್ ಒನ್ ಸ್ಮಾರ್ಟ್‌ಫೋನ್ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ.

ಸ್ಮಾರ್ಟ್‌ಫೋನ್ ಮಾರುಕಟ್ಟೆ ತಲ್ಲಣ: ರೂ.2500ಕ್ಕೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌.

ಈ ಹಿನ್ನಲೆಯಲ್ಲಿ ದಕ್ಷಿಣ ಕೋರಿಯಾ ಮೂಲದ ಟೆಕ್ ದೈತ್ಯ ಸ್ಯಾಮ್‌ಸಂಗ್, ಮತ್ತೇ ಭಾರತೀಯ ಮಾರುಕಟ್ಟೆಯಲ್ಲಿ ಹಿಡಿತವನ್ನು ಸಾಧಿಸಲು ಹೊಸದೊಂದು ಪ್ಲಾನ್ ಹಾಕಿಕೊಂಡಿದೆ. ಆಂಡ್ರಾಯ್ಡ್ ಒನ್ ಸೇವೆಯನ್ನು ಬಳಕೆ ಮಾಡಿಕೊಂಡು ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದ್ದು, ಬಜೆಟ್ ಬೆಲೆಯಲ್ಲಿ ದೊರೆಯುವ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸಲಿದೆ ಎನ್ನಲಾಗಿದೆ.

ಮೊದಲ ಆಂಡ್ರಾಯ್ಡ್ ಒರಿಯೋ( ಗೋ ಆವೃತ್ತಿ) ಸ್ಮಾರ್ಟ್‌ಫೋನ್:

ಮೊದಲ ಆಂಡ್ರಾಯ್ಡ್ ಒರಿಯೋ( ಗೋ ಆವೃತ್ತಿ) ಸ್ಮಾರ್ಟ್‌ಫೋನ್:

ಮಾರುಕಟ್ಟೆಯಲ್ಲಿ ಕಳೆದುಕೊಂಡಿರವ ಪಾಲನ್ನು ಮತ್ತೇ ಪಡೆದುಕೊಳ್ಳುಲು ಮುಂದಾಗಿರುವ ಸ್ಯಾಮ್‌ಸಂಗ್, ಈ ಬಾರಿ ಆಂಡ್ರಾಯ್ಡ್ ಒರಿಯೋ( ಗೋ ಆವೃತ್ತಿ) ಸ್ಮಾರ್ಟ್‌ಫೋನ್ ವಿನ್ಯಾಸ ಮಾಡಿದ್ದು, ಶೀಘ್ರವೇ ಲಾಂಚ್ ಮಾಡಲಿದೆ ಎನ್ನಲಾಗಿದೆ.

ರೂ.2500ಕ್ಕೆ ಸ್ಮಾರ್ಟ್‌ಫೋನ್:

ರೂ.2500ಕ್ಕೆ ಸ್ಮಾರ್ಟ್‌ಫೋನ್:

ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಚೀನಾ ಸ್ಮಾರ್ಟ್‌ಫೋನ್‌ಗಳನ್ನು ಒಂದೇ ಏಟಿಗೆ ಹೊಡೆದು ಹಾಕುವ ಪ್ಲಾನ್ ಮಾಡಿರುವ ಸ್ಯಾಮ್ ಸಂಗ್, ಆಂಡ್ರಾಯ್ಡ್ ಒರಿಯೋ( ಗೋ ಆವೃತ್ತಿ) ಸ್ಮಾರ್ಟ್‌ಫೋನ್ ಅನ್ನು ಅತೀ ಕಡಿಮೆ ಬೆಲೆ ಎಂದರೆ ರೂ.2500ಕ್ಕೆ ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೂ ಸುಳಿದಾಡುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ J2 ಕೋರ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ J2 ಕೋರ್:

ಆಂಡ್ರಾಯ್ಡ್ ಒರಿಯೋ( ಗೋ ಆವೃತ್ತಿ) ಸ್ಮಾರ್ಟ್‌ಫೋನ್ ಗೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ J2 ಕೋರ್ ಎಂದು ನಾಮಕರಣವನ್ನು ಮಾಡುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಲಿದೆ.

ಹೊಸ ಪ್ರಯತ್ನ:

ಹೊಸ ಪ್ರಯತ್ನ:

ಈಗಾಗಲೇ ಮಾರುಕಟ್ಟೆ ಆಂಡ್ರಾಯ್ಡ್ ಒರಿಯೋ( ಗೋ ಆವೃತ್ತಿ) ಸ್ಮಾರ್ಟ್‌ಫೋನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಆದರೆ ಅವುಗಳು ಬಳೆಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಈ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಹೊಸ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿದೆ.

ವಿಶೇಷತೆ:

ವಿಶೇಷತೆ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ J2 ಕೋರ್ ಸ್ಮಾರ್ಟ್‌ಫೋನಿನಲ್ಲಿ 1GB RAM ಅಳವಡಿಸಲಾಗಿದ್ದು, ಇದರೊಂದಿಗೆ ಆಂಡ್ರಾಯ್ಡ್ ಒರಿಯೋ ಕಾಣಿಸಿಕೊಳ್ಳಲಿದೆ. ಗೂಗಲ್ ಗೋ ಆವೃತ್ತಿಯ ಆಪ್‌ ಗಳು ಹೆಚ್ಚಿನ ಪ್ರಮಾಣದಲ್ಲಿ ಈ ಸ್ಮಾರ್ಟ್‌ಫೋನಿನಲ್ಲಿ ಇರಲಿದೆ.

ನೋಕಿಯಾಗೆ ಸೆಡ್ಡು:

ನೋಕಿಯಾಗೆ ಸೆಡ್ಡು:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ J2 ಕೋರ್ ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ನೋಕಿಯಾ 1 ಆಂಡ್ರಾಯ್ಡ್ ಒರಿಯೋ( ಗೋ ಆವೃತ್ತಿ) ಸ್ಮಾರ್ಟ್‌ಫೋನ್ ಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ನೋಕಿಯಾ ಬಳಕೆದಾರರನ್ನು ಸೆಳೆಯಲು ವಿಫಲವಾಗಿದ್ದು, ಇದಕ್ಕಾಗಿ ಬೆಲೆಯಲ್ಲಿ ಸ್ಯಾಮ್‌ಸಂಗ್ ಭಾರೀ ಕಡಿಮೆಮಾಡಲಿದೆ.

ಶಿಯೋಮಿ ಟಾರ್ಗೆಟ್:

ಶಿಯೋಮಿ ಟಾರ್ಗೆಟ್:

ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೆಡ್ಡು ಹೊಡೆಯುತ್ತಿರುವುದು ಚೀನಾ ಮೂಲದ ಶಿಯೋಮಿ, ಅದರಲ್ಲೂ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಶಿಯೋಮಿಯದ್ದೇ ಮಾರಾಟವಾಗುತ್ತಿದೆ. ಇದನ್ನು ತಡೆಯಲು ಸ್ಯಾಮ್‌ಸಂಗ್, ಗ್ಯಾಲೆಕ್ಸಿ J2 ಕೋರ್ ಸ್ಮಾರ್ಟ್‌ಫೋನ್ ಬಳಕೆ ಮಾಡಿಕೊಳ್ಳಲಿದೆ.

ಆನ್‌ಲೈನಿನಲ್ಲಿ:

ಆನ್‌ಲೈನಿನಲ್ಲಿ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ J2 ಕೋರ್ ಸ್ಮಾರ್ಟ್‌ಫೋನ್ ಅನ್ನು ಆನ್‌ಲೈನಿನಲ್ಲಿ ಮಾತ್ರವೇ ಮಾರಾಟ ಮಾಡಲಿದೆ ಎನ್ನಲಾಗಿದೆ. ಫ್ಲಾಷ್ ಸೇಲ್ ಮಾದರಿಯಲ್ಲಿ ಮಾರಾಟ ಮಾಡಿ ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಯೋಜನೆಯನ್ನು ರೂಪಿಸಿದೆ.

Best Mobiles in India

English summary
Samsung’s First Android Go Smartphone Visits Geekbench. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+