ಕಪ್ಪು ಬಣ್ಣದಲ್ಲಿ ಬರಲಿದೆ ಗ್ಯಾಲಕ್ಸಿ ನೋಟ್ II

Posted By: Staff

ಈಗಾಗ್ಲೇ ಮಾರುಕಟ್ಟೆಯಲ್ಲಿ ಹಾಟ್ ಕೇಕ್‌ನಂತೆ ಸೇಲ್‌ ಆಗುತ್ತಿರುವ ಗ್ಯಾಲಕ್ಸಿ ನೋಟ್ II ಸ್ಮಾರ್ಟ್ ಫೋನ್ ಮುಂದೆ ಕಂಪು ಬಣ್ಣದಲ್ಲಿಬರಲಿದೆ. ಈ ಸ್ಯಾಮ್‌ಸಾಂಗ್‌ ಕಂಪೆನಿಯ ಬಣ್ಣ ಬದಲಾವಣೆಯ ವಿಷಯವನ್ನು ಸ್ವೀಡನ್‌ನ ಬ್ಲಾಗ್‌ AndroidSlash ಹೊರಹಾಕಿದೆ. ಈ ಮಾಹಿತಿ ಪ್ರಕಾರ ಸದ್ಯದಲ್ಲೇ ಕಪ್ಪು ಬಣ್ಣದಲ್ಲಿ ಗ್ಯಾಲಕ್ಸಿ ನೋಟ್ ಹೊರಬರಲಿದೆ.

 

ಈ ವಿಚಾರವಾಗಿ ಯಾವುದೇ ಅಧಿಕೃತ ಮಾಹಿತಿಯನ್ನು ಸ್ಯಾಮ್‌ಸಾಂಗ್ ಕಂಪೆನಿ ಬಿಡುಗಡೆ ಮಾಡಿಲ್ಲ. ಆದರೆ ಸ್ಯಾಮ್‌ಸಾಂಗ್‌ ಗ್ಯಾಲಕ್ಸಿ ನೋಟ್ II ಈಗಾಗ್ಲೇ ಬಿಳಿ ಮತ್ತು ಬೂದು (ಗ್ರೇ) ಬಣ್ಣದಲ್ಲಿ ಬಿಡುಗಡೆ ಮಾಡಿದ್ದು ಮಾರುಕಟ್ಟೆಯಲ್ಲಿ ಲಭ್ಯವಿದೆ.

ನಿಮ್ಮ ಮಾಹಿತಿಗಾಗಿ ಗ್ಯಾಲಕ್ಸಿ ನೋಟ್ II ಸ್ಮಾರ್ಟ್ ಫೋನ್ ಕ್ವಾಡ್-ಕೋರ್ ಪ್ರೊಸೆಸರ್, 5.5-ಇಂಚಿನ ಎಚ್ಡಿ ದರ್ಶಕ, 2GB RAM ಮತ್ತು ಜೆಲ್ಲಿ ಬೀನ್ ಆಪರೆಟಿಂಗ್ ಸಿಸ್ಟಮ್ ಒಳಗೊಂಡಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot