Home
ಮೊಬೈಲ್

ಮೊಬೈಲ್ ಫ್ಲಿಪ್ ಮಾಡಿ ಖುಷಿ ಪಡಿ

By Super
ಮೊಬೈಲ್ ಫ್ಲಿಪ್ ಮಾಡಿ ಖುಷಿ ಪಡಿ


ಮೊಬೈಲ್ ಗಳಲ್ಲಿ ಅನೇಕ ವಿನ್ಯಾಸಗಳಿವೆ. ಕ್ಯಾಂಡಿ ಬಾರ್, ಸ್ಲೈಡ್ ಮತ್ತು ಬಾರ್ ಫೋನ್ ಮುಂತಾದ ವಿನ್ಯಾಸಗಳಲ್ಲಿ ಮೊಬೈಲ್ ಗಳು ಬರುತ್ತಿವೆ. ಪ್ರತಿಯೊಂದು ವಿನ್ಯಾಸವೂ ತನ್ನದೇ ಆದ ಆಕರ್ಷಣೆ ಪಡೆದುಕೊಂಡಿದೆ. ಅದೇ ರೀತಿ ವಿಶಿಷ್ಟವಾದ ಫ್ಲಿಪ್ ಮೊಬೈಲನ್ನು ಸ್ಯಾಮ್ ಸಂಗ್ ಕಂಪನಿ ಇತ್ತೀಚೆಗಷ್ಟೆ ಪರಿಚಯಿಸಿದೆ.

ಸ್ಯಾಮ್ ಸಂಗ್ SCHW999 ಎಂಬ ಈ ಮೊಬೈಲ್ ಸಿಂಪಲ್ ಆಗಿದ್ದರೂ ನೋಡಲು ಸ್ಟೈಲಿಶ್ ಲುಕ್ ನೀಡುತ್ತೆ. ಮೊನೊಟೊನಿಕ್ ಬಣ್ಣದಲ್ಲಿ ಮೂಡಿ ಬಂದಿರುವ ಈ ಮೊಬೈಲ್ ಫುಲ್ ಟಚ್ ಸ್ಕ್ರೀನ್ ಎನಿಸಿದರೂ ಫ್ಲಿಪ್ ಮಾಡುತ್ತಿದ್ದಂತೆ ನಂಬರ್ ಕೀ ಪ್ಯಾಡ್ ಕಾಣುತ್ತದೆ.

ಮೊಬೈಲಿನಲ್ಲಿ ಎರಡು ಸ್ಕ್ರೀನ್ ಗಳಿರುವುದು ವಿಶೇಷವೆನಿಸಿದೆ. ಎರಡೂ ಡಿಸ್ಪ್ಲೇ ಗಳೂ 480 x 800 ಪಿಕ್ಸಲ್ ರೆಸೊಲ್ಯೂಷನ್ ಹೊಂದಿದೆ. ಅಮೊಲೆಡ್ ಡಿಸ್ಪ್ಲೇ ಇರುವುದರಿಂದ ಉತ್ತಮ ಕಾರ್ಯಕ್ಷಮತೆಯನ್ನು ನಿರೀಕ್ಷಿಸಬಹುದು. ಇದರಲ್ಲಿ ಡ್ಯೂಯಲ್ ಸಿಮ್ ಆಯ್ಕೆಯೂ ಇದೆ. ಇದರಿಂದ GSM ಮತ್ತು CDMA 2000 ಎರಡೂ ನೆಟ್ ವರ್ಕ್ ಗಳನ್ನು ಮೊಬೈಲ್ ಬೆಂಬಲಿಸಲಿದೆ.

1.2 GHz ವೇಗದ ಡ್ಯೂಯಲ್ ಕೋರ್ ಕ್ವಾಲ್ಕಂ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 2.3ಜಿಂಜರ್ ಬ್ರೆಡ್ ಆಯಾಮವನ್ನು ಮೊಬೈಲ್ ಹೊಂದಿದೆ. ಈ ಸ್ಯಾಮ್ ಸಂಗ್ SCHW 999 ಮೊಬೈಲ್ ನಲ್ಲಿ ಟಚ್ ವಿಝ್ ಯೂಸರ್ ಇಂಟರ್ ಫೇಸನ್ನೂ ನೀಡಿರುವುದು ವಿಶೇಷವೆನಿಸಿದೆ.

ಸ್ಯಾಮ್ ಸಂಗ್ SCHW999 ಮೊಬೈಲ್ ವಿಶೇಷತೆ:

* ಡ್ಯೂಯಲ್ ಸ್ಕ್ರೀನ್

* ಡ್ಯೂಯಲ್ ಸಿಮ್

* 3.5 ಇಂಚಿನ ಡಿಸ್ಪ್ಲೇ

* ಅಮೊಲೆಡ್ ಟಚ್ ಸ್ಕ್ರೀನ್ ಡಿಸ್ಪ್ಲೇ

* 1.2GHz ಡ್ಯೂಯಲ್ ಕೋರ್ ಪ್ರೊಸೆಸರ್

* 5 ಮೆಗಾ ಪಿಕ್ಸಲ್ ಕ್ಯಾಮೆರಾ

* ಬ್ಲೂಟೂಥ್, ವೈ-ಫೈ ಸಂಪರ್ಕ, WAPI

* ಆಡಿಯೋ-ವಿಡಿಯೋ ಪ್ಲೇಯರ್

ಈ ಸ್ಯಾಮ್ ಸಂಗ್ SCHW 999 ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಆದರೆ ಇದು ಕೈಗೆಟುಕುವ ದರದಲ್ಲಿ ದೊರೆಯುವುದೆಂದು ಅಂದಾಜಿಸಲಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+