ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಹಿಂದೆಂದೂ ಕಂಡಿರದ ದರ ಕಡಿತ.!!
ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್ ಮೇಲೆ ತಾನೇ ಆಫರ್ ಘೋಷಣೆ ಮಾಡಿದ್ದು, 'ಸ್ಯಾಮ್‌ಸಂಗ್ ಶಾಪ್ ಅನಿರ್ವಸರಿ ಸೇಲ್' ಆರಂಭಿಸಿದೆ.
ಸದ್ಯ ಮುಕ್ತಾಯಗೊಂಡಿರುವ ಎಲ್ಲಾ ಸೇಲ್‌ಗಳಲ್ಲೂ ಆಪಲ್ ಸೇರಿದಂತೆ ಎಲ್ಲಾ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ದರ ಕಡಿತವನ್ನು ಘೋಷಣೆ ಮಾಡಲಾಗಿತ್ತು. ಸೇಲ್ ಗಳು ಮುಗಿದ ಮೇಲೆ ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್ ಮೇಲೆ ತಾನೇ ಆಫರ್ ಘೋಷಣೆ ಮಾಡಿದ್ದು, 'ಸ್ಯಾಮ್‌ಸಂಗ್ ಶಾಪ್ ಅನಿರ್ವಸರಿ ಸೇಲ್' ಆರಂಭಿಸಿದೆ.

ಸೆಪ್ಟೆಂಬರ್ 25 - 30 ರ ವರೆಗೆ ನಡೆಯಲಿರುವ ಸೇಲ್‌ನಲ್ಲಿ ಸ್ಯಾಮ್ ಸಂಗ್ ಉತ್ಪನ್ನಗಳ ಮೇಲೆ ಭರ್ಜರಿ ಆಫರ್ ಪಡೆಯಬಹುದಾಗಿದೆ. ಟಾಪ್ ಎಂಡ್ ಮೊಬೈಲ್‌ನಿಂದ ಹಿಡಿದು ಬೇರೆ ಗ್ಯಾಜೆಟ್ ಗಳ ಮೇಲೆಯೂ ಆಫರ್ ನೀಡಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಮತ್ತು S8+:
ಸದ್ಯ ಸ್ಯಾಮ್‌ಸಂಗ್ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳೆಂದು ಗುರುತಿಸಿಕೊಂಡಿರುವ ಗ್ಯಾಲೆಕ್ಸಿ S8 ಮತ್ತು S8+ ಫೋನಿನ ಮೇಲೆಯೂ ಕಡಿತವನ್ನು ಕಾಣಬಹುದಾಗಿದೆ. ಗ್ಯಾಲೆಕ್ಸಿ S8+ ಸ್ಮಾರ್ಟ್‌ಫೋನ್ (4GB RAM ಆವೃತ್ತಿ) ರೂ. 60,900ಕ್ಕೆ ದೊರೆಯುತ್ತಿದ್ದು, ಗ್ಯಾಲೆಕ್ಸಿ S8 ರೂ. 53,900ಕ್ಕೆ ದೊರೆಯಲಿದೆ.

ರೂ. 4000ದ ವರೆಗೂ ಕಡಿತ:
ಇದಲ್ಲದೇ HDFC ಕ್ರೆಡಿಟ್ ಕಾರ್ಡ್ ಮೇಲೆ ರೂ. 4000 ವರೆಗೂ ಕಡಿತವನ್ನು ನೀಡಲಾಗುತ್ತಿದೆ. HDFC ಕ್ರೆಡಿಟ್ ಕಾರ್ಡ್ ಬಳಸಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಮತ್ತು S8 ಕೊಂಡವರು ರೂ.4500 ಕಡಿತವನ್ನು ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್ ಸಂಗ್ ಆನ್ ಮ್ಯಾಕ್ಸ್:
ಇದಲ್ಲದೇ ಸ್ಯಾಮ್ ಸಂಗ್ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನು ರೂ. 15,900ಕ್ಕೆ ದೊರೆಯುತ್ತಿದ್ದು, ಸಾವಿರ ರೂ. ಡಿಸ್ಕೌಂಟ್ ಕಾಣಬಹುದಾಗಿದೆ. ಅಲ್ಲದೇ ಗ್ಯಾಲೆಕ್ಸಿ ಆನ್ ನೆಕ್ಸಟ್ ಮೇಲೆ ರೂ.2000 ಕಡಿತ ಮಾಡಲಾಗಿದ್ದು, ರೂ.13,900ಕ್ಕೆ ದೊರೆಯುತ್ತಿದೆ.

ಗ್ಯಾಲೆಕ್ಸಿ ಆನ್ 7ಪ್ರೋ, ಗ್ಯಾಲೆಕ್ಸಿ ಜೆ3 ಪ್ರೋ:
ಇದಲ್ಲದೇ ಆನ್ 7ಪ್ರೋ, ಗ್ಯಾಲೆಕ್ಸಿ ಜೆ3 ಪ್ರೋ ಮೇಲೆಯೂ ಆಫರ್ ಘೋಷಣೆಯಾಗಿದ್ದು, ಆನ್ 7 ಪ್ರೋ ರೂ.7,590ಕ್ಕೆ ಹಾಗೂ ಗ್ಯಾಲೆಕ್ಸಿ ಜೆ3 ಪ್ರೋ ರೂ.7090ಕ್ಕೆ ದೊರೆಯುತ್ತಿದೆ.


Click it and Unblock the Notifications








