Subscribe to Gizbot

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2 ಫ್ಯಾಬ್ಲೆಟ್ ಬರಲಿದೆ

Posted By: Varun
ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2 ಫ್ಯಾಬ್ಲೆಟ್ ಬರಲಿದೆ

ತಿಂಗಳುಗಳ ಹಿಂದೆ ಬಿಡುಗಡೆಯಾದ ಸ್ಯಾಮ್ಸಂಗ್ ನ ಗ್ಯಾಲಕ್ಸಿ S3 ಸೂಪರ್ ಹಿಟ್ ಆದ ಮೇಲೆ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ತುದಿಗಾಲಲ್ಲಿ ನಿಂತಿರುವ ಸ್ಯಾಮ್ಸಂಗ್, ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನ್ ಎರಡರ ಮಿಶ್ರ ತಳಿಯಂತಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2 ಅನ್ನು ಆಗಸ್ಟ್ ತಿಂಗಳ 30 ಕ್ಕೆ ಬಿಡಗಡೆ ಮಾಡಲಿದೆ ಎಂಬ ಸುದ್ದಿಯನ್ನು ಕೊರಿಯಾದ ಡಿಜಿಟಲ್ ಡೈಲಿ ಪತ್ರಿಕೆ ವರದಿ ಮಾಡಿದೆ.

ಹಿಂದಿನ ಗ್ಯಾಲಕ್ಸಿ ನೋಟ್ 5.3 ಇಂಚ್ HD ಸೂಪರ್ AMOLED ಡಿಸ್ಪ್ಲೇ ಹೊಂದಿದ್ದು, ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿತ್ತು. ಅದರ ಎರಡನೆ ಆವೃತ್ತಿಯಾಗಿರುವ ಗ್ಯಾಲಕ್ಸಿ ನೋಟ್ 2, 5.5 ಇಂಚ್ ಡಿಸ್ಪ್ಲೇ ಹೊಂದಲಿದ್ದು, 1680 x 1050 ಪಿಕ್ಸೆಲ್ ರೆಸಲ್ಯೂಶನ್ ಹೊಂದಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ತಂತ್ರಾಂಶ, Exynos 5250 ಪ್ರೋಸೆಸರ್, 1.5 GB ರಾಮ್, 1.7 GHz ಪ್ರೋಸೆಸರ್, 13 ಮೆಗಾ ಪಿಕ್ಸೆಲ್ ಕ್ಯಾಮರಾ ಹಾಗು ಇಮೇಜಿಂಗ್ ಸೆನ್ಸರ್ ಕೂಡ ಇರಲಿದೆ.

ಆಪಲ್ ಕಂಪನಿ ತನ್ನ ಬಹು ನಿರೀಕ್ಷಿತ ಐಫೋನ್ 5 ಅನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಂಭವವಿರುವುದರಿಂದ ಅದಕ್ಕೆ ತೀವ್ರ ಸ್ಪರ್ಧೆ ಒಡ್ಡಲಿದೆ ಈ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot