ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2 ಆಗಸ್ಟ್ 29 ಕ್ಕೆ

Posted By: Varun
ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2 ಆಗಸ್ಟ್ 29 ಕ್ಕೆ

ಆಪಲ್ ಐಫೋನ್ 5 ಸೆಪ್ಟಂಬರ್ 12 ಕ್ಕೆ ಬರುತ್ತೆ ಅಂತಾ ಗುಲ್ಲು ಎದ್ದಿರೋ ಹಿನ್ನೆಲೆಯಲ್ಲಿ ಸ್ಯಾಮ್ಸಂಗ್ ನ ಮಿನಿ ಟ್ಯಾಬ್ಲೆಟ್ ಎಂದೇ ಫೇಮಸ್ ಆಗಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ ನ ಎರಡನೆ ಆವೃತ್ತಿ ಬಿಡುಗಡೆಯಾಗುವ ಸುದ್ದಿ, ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ನಿಂದ ಬಂದಿದೆ.

ಆಪಲ್ ಐಫೋನ್ 5 ಬರುವ ಎರಡು ವಾರಕ್ಕೆ ಮುನ್ನವೆ ಇದನ್ನು ಬಿಡುಗಡೆ ಮಾಡಲು ಯೋಚಿಸಿರುವ ಸ್ಯಾಮ್ಸಂಗ್ ತನ್ನ ಎದುರಾಳಿಯನ್ನು ಸಮರ್ಥವಾಗಿ ಎದುರಿಸಲು ಸಜ್ಜಗಿರುವಂತಿದೆ.

ವರದಿಯ ಪ್ರಕಾರ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2 ಗ್ಯಾಲಕ್ಸಿ ನೋಟ್ 2, 5.5 ಇಂಚ್ ಡಿಸ್ಪ್ಲೇ ಹೊಂದಲಿದ್ದು, 1680 x 1050 ಪಿಕ್ಸೆಲ್ ರೆಸಲ್ಯೂಶನ್ ಹೊಂದಲಿದ್ದು, ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ತಂತ್ರಾಂಶ, Exynos 5250 ಪ್ರೋಸೆಸರ್, 1.5 GB ರಾಮ್, 1.7 GHz ಪ್ರೋಸೆಸರ್, 13 ಮೆಗಾ ಪಿಕ್ಸೆಲ್ ಕ್ಯಾಮರಾ ಹಾಗು ಇಮೇಜಿಂಗ್ ಸೆನ್ಸರ್ ಕೂಡ ಇರಲಿದೆ.

ಮೇ ತಿಂಗಳಲ್ಲಿ ಬಿಡುಗಡೆ ಮಾಡಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಈಗಾಗಲೇ 11 ಲಕ್ಷಕ್ಕೂ ಹೆಚ್ಚು ಸೆಟ್ ಗಳು ಮಾರಾಟವಾಗಿದ್ದು, ಇದಕ್ಕೂ ಕೂಡ ಅಷ್ಟೇ ಉತ್ತಮವಾದ ಪ್ರತಿಕ್ರಿಯೆ ಬರಲಿದೆ ಎಂಬುದು ಸ್ಯಾಮ್ಸಂಗ್ ನ ಅಂದಾಜು.

 

 

 

Please Wait while comments are loading...
Opinion Poll

Social Counting