Home
ಮೊಬೈಲ್

ಈ ಗ್ಯಾಲಕ್ಸಿ ಮೊಬೈಲ್ ಕೇವಲ ಅವಳಿಗಾಗಿ

By Super
ಈ ಗ್ಯಾಲಕ್ಸಿ ಮೊಬೈಲ್ ಕೇವಲ ಅವಳಿಗಾಗಿ


ಸ್ಮಾರ್ಟ್ ಫೋನ್ ಜಗತ್ತಿನ ಅಗ್ರಗಣ್ಯ ಸಂಸ್ಥೆ ಸ್ಯಾಮ್ ಸಂಗ್ ತನ್ನ ಜನಪ್ರಿಯ ಉತ್ಪನ್ನ ಗ್ಯಾಲಕ್ಸಿ S2 ಸ್ಮಾರ್ಟ್ ಫೋನ್ ನ ಉತ್ತರಾಧಿಕಾರಿ S3 ಮೊಬೈಲ್ ನ್ನು ಮೇ 2012ರಲ್ಲಿ ಪರಿಚಯಿಸಿತ್ತು. ಈಗ ಗ್ಯಾಲಕ್ಸಿ ನೋಟ್ 2 ನ ಬಿಡುಗಡೆಗೆ ಟೆಕ್ ಜಗತ್ತು ಕಾತುರದಿಂದ ಕಾದಿದೆ.

ಬರ್ಲಿನ್ ನಲ್ಲಿ ನಡೆಯುತ್ತಿರುವ ಐಎಫ್ ಎ ಕಾರ್ಯಕ್ರಮದಲ್ಲಿ ಗ್ಯಾಲಕ್ಸಿ ನೋಟ್ 2 ಬುಧವಾರ(ಆ.28) ಅನಾವರಣಗೊಳ್ಳಲಿದೆ.

ಈ ನಡುವೆ 2011ರಲ್ಲಿ ವರ್ಷದ ಸ್ಮಾರ್ಟ್ ಫೋನ್ ಎಂಬ ಹೆಗ್ಗಳಿಕೆ ಪಡೆದ ಗ್ಯಾಲಕ್ಸಿ S2ನ ಜನ ಮರೆಯುವ ಮುನ್ನ ಹೊಸ ಮಾದರಿಯಲ್ಲಿ ಜನರಿಗೆ ಮತ್ತೆ ಪರಿಚಯಿಸಲು ಕೊರ್ಯಾ ಮೂಲದ ಸಂಸ್ಥೆ ಸ್ಯಾಮ್ ಸಂಗ್ ಚಿಂತನೆ ನಡೆಸಿದೆ.

ವೃತ್ತಿಪರ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಸ್ಯಾಮ್ ಸಂಗ್ S2 ಕ್ರಿಸ್ಟಲ್ ಮಾದರಿಗಳನ್ನು ಹೊರತರಲು ಸಂಸ್ಥೆ ಯೋಜಿಸಿದೆ.

ಕ್ರಿಸ್ಟಲ್ ಆವೃತ್ತಿಯಲ್ಲಿ ಹಿಂಬದಿ ಹೊದಿಕೆಯಲ್ಲಿ 129 Swarovski ಹರಳುಗಳನ್ನು ಪೋಣಿಸಲಾಗಿದೆಯಂತೆ ಇದು ವೃತ್ತಿಪರ ಮಹಿಳೆಯರ ಹೆಮ್ಮೆಯ ಸ್ಮಾರ್ಟ್ ಫೋನ್ ಆಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸ್ಯಾಮ್ಸಂಗ್ ಕ್ರಿಸ್ಟಲ್ ಮಾದರಿ:

* ಚರ್ಮದ ಹೊದಿಕೆ, 4.3 ಇಂಚಿನ ಸೂಪರ್ AMOLED ಟಚ್ ಸ್ಕ್ರೀನ್ ದರ್ಶಕ, 480 x 800 ಪಿಕ್ಸಲ್ಸ್ ರೆಸ್ಯೂಲುಷನ್ ಸ್ಕ್ರೀನ್

* 1.2 GHz ಡುಯಲ್ ಕೋರ್ ಕೋರ್ಟೆಕ್ಸ್ A9 ಪ್ರೊಸೆಸರ್

* 1 ಜಿಬಿ RAM, 16GB/32GB ಅಂತರಿಕ ಮೆಮೋರಿ ಹಾಗೂ 32 ಜಿಬಿ micro SD ಸೌಲಭ್ಯವಿದೆ.

* 8 MP ಹಿಂಬರಿ ಕ್ಯಾಮರಾ, 2 MP ಮುಂಬದಿ ಕ್ಯಾಮರಾ,

* 1650 mAh Li-ion ಬ್ಯಾಟರಿ

* ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ OS

* ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಗೆ upgrade ಮಾಡಬಹುದು.

ಬೆಲೆ ಹಾಗೂ ಲಭ್ಯತೆ

* ಸ್ಯಾಮ್ ಸಂಗ್ ಕ್ರಿಸ್ಟಲ್ ಆವೃತ್ತಿಯ ವಿಶೇಷ ಗ್ಯಾಲಕ್ಸಿ S2 IFA 2012 ಬರ್ಲಿನ್ ನಲ್ಲಿ ಜಾಗತಿಕ ಮಾರುಕಟ್ಟೆಗೆ ಪರಿಚಿತವಾಗಲಿದೆ. ಮಾರುಕಟ್ಟೆಗೆ ಅಕ್ಟೋಬರ್ ವೇಳೆಗೆ ಬರುವ ಸಾಧ್ಯತೆಯಿದೆ. ಸದ್ಯಕ್ಕೆ ಲಭ್ಯ ಮಾಹಿತಿಯಂತೆ ಈ ಸ್ಮಾರ್ಟ್ ಫೋನ್ ಬೆಲೆ € 599 (ಅಂದಾಜು ರು. 42,000).

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+