ಸಿದ್ಧವಿದೆ ಹೊಸ ಸ್ಯಾಮ್ ಸಂಗ್ ಸ್ಲೈಡ್ ಮೊಬೈಲ್

Posted By: Staff
ಸಿದ್ಧವಿದೆ ಹೊಸ ಸ್ಯಾಮ್ ಸಂಗ್ ಸ್ಲೈಡ್ ಮೊಬೈಲ್

 

ಸ್ಯಾಮ್ ಸಂಗ್ ಕಂಪನಿ ಮೊಬೈಲ್ ಮಾರುಕಟ್ಟೆಗೆ ಅತ್ಯಾಕರ್ಷಕ ವಿನ್ಯಾಸ ಹೊಂದಿರುವ ಹಲವು ಮೊಬೈಲ್ ಗಳನ್ನು ತಂದಿದೆ. ಸ್ಯಾಮ್ ಸಂಗ್ ಕಾರ್ಬಿ ಪ್ಲಸ್ ಎಂಬ ಮೊಬೈಲಂತೂ ಗ್ರಾಹಕರಿಂದ ಹೆಚ್ಚು ಮೆಚ್ಚುಗೆ ಗಳಿಸಿದೆ. ಅದಕ್ಕೆಂದೇ ಇದೇ ಮಾದರಿಯಲ್ಲಿರುವ ಇನ್ನೂ ಅನೇಕ ಫೋನ್ ಗಳನ್ನು ಕಂಪನಿ ತರುತ್ತಿದೆ. ಹೆಚ್ಚು ಪ್ರಚಲಿತದಲ್ಲಿರುವ ಸ್ಲೈಡರ್ ಫೋನ್ ಮಾದರಿಯನ್ನು ಅನುಸರಿಸಿ ಅನೇಕ ಹ್ಯಾಂಡ್ ಸೆಟ್ ಗಳು ಬರುತ್ತಿವೆ.

ಇದೀಗ ಸ್ಯಾಮ್ ಸಂಗ್ ನೂತನ ಸ್ಲೈಡರ್ ಫೋನೊಂದನ್ನು ಹೊರತರಲಿದೆ. ಸ್ಯಾಮ್ ಸಂಗ್ U380 ಎಂಬ ಫೋನ್ ಸ್ಯಾಮ್ ಸಂಗ್ ಡ್ರಾಯ್ಡ್ ಮೊಬೈಲ್ ಫೋನ್ ನ ಅನೇಕ ಹೋಲಿಕೆ ಪಡೆದುಕೊಂಡಿದೆ. ಆದರೆ ಇದು ಸ್ಮಾರ್ಟ್ ಫೋನ್ ಗೆ ಅವಶ್ಯಕವಿದ್ದಷ್ಟು ಆಯ್ಕೆಯನ್ನು ಹೊಂದಿಲ್ಲದಿರುವುದರಿಂದ ಇದು ಸ್ಮಾರ್ಟ್ ಪೋನ್ ಅಲ್ಲ ಎಂಬುದು ಧೃಡಪಟ್ಟಿದೆ. ಈ CDMA ಫೋನ್ CDMA EV-DO 850/1900 MHz ಫ್ರಿಕ್ವೆನ್ಸಿಯನ್ನು ಬೆಂಬಲಿಸುತ್ತದೆ. ಈ ಪೋನ್ ವೇರಿಝಾನ್ ನೆಟ್ ವರ್ಕ್ ಬೆಂಬಲದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿದುಬಂದಿದೆ.

ಸ್ಲೈಡರ್ ಫೋನ್ ವಿನ್ಯಾದಲ್ಲಿ ಮೂಡಿಬಂದಿರುವ ಈ ಫೋನ್ ಕ್ವೆರ್ಟಿ ಕೀ ಪ್ಯಾಡ್ ಹೊಂದಿರುವುದು ವಿಶೇಷವಾಗಿದೆ. ಟಚ್ ಸ್ಕ್ರೀನ್ ಹೊಂದಿರುವ ಈ ಮೊಬೈಲ್ ನಲ್ಇ ಸಂಗೀತಕ್ಕೆಂದು 3.5 ಎಂಎಂ ಆಡಿಯೋ ಜ್ಯಾಕ್ ನೀಡಲಾಗಿದೆ.

ಈ ಮೊಬೈಲ್ ನಲ್ಲಿ ಕ್ಯಾಮೆರಾ ಆಯ್ಕೆ ಇರುವುದು ಚಿತ್ರಣದಿಂದ ತಿಳಿದುಬಂದಿದ್ದರೂ, ಎಷ್ಟು ಮೆಗಾ ಪಿಕ್ಸಲ್ ಹೊಂದಿದೆ ಎಂಬುದರ ಬಗ್ಗೆ ಮತ್ತು ಇನ್ನಿತರ ಆಯ್ಕೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಬಂದಿಲ್ಲ. ಮೆಮೊರಿ ವಿಸ್ತರಣೆಗೆಂದೂ ಮೆಮೊರಿ ಕಾರ್ಡ್ ಸ್ಲಾಟ್ ಮೊಬೈಲ್ ನಲ್ಲಿದೆ. ಬಳಕೆದಾರರ ಅವಶ್ಯಕತೆಗೆ ತಕ್ಕಂತೆ ಮೆಮೊರಿ ವಿಸ್ತರಣೆಗೆ ಆಯ್ಕೆ ನೀಡಲಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಈ ಸ್ಯಾಮ್ ಸಂಗ್ U380 ಮೊಬೈಲ್ ದೊರೆಯುವ ಮಾಹಿತಿ ಇದ್ದು, ಮೊಬೈಲ್ ಬೆಲೆಯನ್ನು ಕಂಪನಿ ಘೋಷಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot