ಬಜೆಟ್‌ ಸ್ಮಾರ್ಟ್‌ಫೋನ್‌ ಗ್ಯಾಲಾಕ್ಸಿ ಮ್ಯೂಸಿಕ್‌ ಬರಲಿದೆ

Posted By: Staff
ಬಜೆಟ್‌ ಸ್ಮಾರ್ಟ್‌ಫೋನ್‌ ಗ್ಯಾಲಾಕ್ಸಿ ಮ್ಯೂಸಿಕ್‌ ಬರಲಿದೆ

ದಕ್ಷಿಣ ಕೊರಿಯಾ ಮೂಲದ ತಾಂತ್ರಿಕ ಉಪಕರಣಗಳ ತಯಾರಿಕಾ ಸಂಸ್ಥೆಯಾದಂತಹ ಸ್ಯಾಮ್ಸಂಗ್‌ ಮಾರುಕಟ್ಟೆಗೆ ಸಾಲು ಸಾಲು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಇದೆ. ಅಂದಹಾಗೆ ನಿನ್ನೆಯಷ್ಟೇ ಸ್ಯಾಮ್ಸಂಗ್‌ ಸಂಸ್ಥೆಯು ತನ್ನಯ ನೂತನ ಗ್ಯಾಲಾಕ್ಸಿ ಮ್ಯೂಸಿಕ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು ಉತ್ತಮ ಸೌಂಡ್‌ ಹಾಗೂ ಮ್ಯೂಸಿಕ್‌ ಪ್ಲೇಯರ್‌ ಫೀಚರ್ಸ್‌ ಹೊಂದಿರುವುದಾಗಿ ತಿಳಿಸಿದೆ.

ಇದಲ್ಲದೆ ಡ್ಯುಯೆಲ್‌ ಸಿಮ್‌ ಹೊಂದಿರುವುದರಿಂದ ಗ್ಯಾಲಾಕ್ಸಿ ಮ್ಯೂಸಿಕ್‌ ಡ್ಯುಯೋಸ್‌ ಎಂದು ಹೆಸರಿಡಲಾಗಿದೆ. ಹಿಂದಿನ ವರದಿಗಳ ಪ್ರಕಾರ ಸ್ಯಾಮ್ಸಂಗ್‌ ಅಕ್ಟೋಬರ್‌ 11ರಂದು ಗ್ಯಾಲಾಕ್ಸಿ ಎಸ್‌3 ಮಿನಿ ಯ ಅನಾವರಣ ಸಮಾರಂಭದಂದು ನೂತನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಅಂದಹಾಗೆ ನೂತನ ಗ್ಯಾಲಾಕ್ಸಿ ಮ್ಯೂಸಿಕ್‌ ಬಜೆಟ್‌ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ನಿಂದ ಕೂಡಿದೆ ಎಂದು ತಿಳಿದುಕೊಳ್ಳೋಣ.

ವಿಶೇಷತೆ

ಸುತ್ತಳತೆ ಹಾಗೂ ಗಾತ್ರ: ನೂತನ ಗ್ಯಾಲಾಕ್ಸಿ ಮ್ಯೂಸಿಕ್‌ 110.1 x 59.0 x 12.25 mm ಸುತ್ತಳತೆಯೊಂದಿಗೆ 106.9 ಗ್ರಾಂ ತೂಕವಿದೆ.

ದರ್ಶಕ: ಗ್ಯಾಲಾಕ್ಸಿ ಮ್ಯೂಸಿಕ್‌ನಲ್ಲಿ 3 ಇಂಚಿನ QVGA ಟಚ್‌ ಸ್ಕ್ರೀನ್‌ ದರ್ಶಕ ಹಾಗೂ 320 x 240 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: ಸ್ಯಾಮ್ಸಂಗ್‌ ಸಂಸ್ಥೆ ತಿಳಿಸಿರುವಂತೆ ನೂತನ ಸ್ಮಾರ್ಟ್‌ಫೋನ್‌ನಲ್ಲಿ ಸ್ಮೂತ್ ಪ್ರೊಸೆಸರ್‌ ಹೊಂದಿದೆ, ಅಂದಹಾಗೆ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ.

ಆಪರೇಟಿಂಗ್‌ ಸಿಸ್ಟಂ: ಆಂಡ್ರಾಯ್ಡ್‌ 4.0ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ OS ಹೊಂದಿದೆ.

ಕ್ಯಾಮೆರಾ: ಹಿಂಬದಿಯ 3MP ಕ್ಯಾಮೆರಾ ದೊಂದಿಗೆ ಆಟೋ ಫ್ಲಾಷ್‌ ಹೊಂದಿದೆ..

ಸ್ಟೋರೇಜ್: 4GB ಆಂತರಿಕ ಮೆಮೊರಿ, 512MB RAM ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗು ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ..

ಕನೆಕ್ಟಿವಿಟಿ: ಗ್ಯಾಲಾಕ್ಸಿ ಮ್ಯೂಸಿಕ್‌ನಲ್ಲಿ ಬ್ಲೂಟೂತ್‌ v3.0, USB 2.0, Wi-Fi b/g/n, Wi-Fi ಡೈರೆಕ್ಟ್‌ ಹಾಗೂ GPS ಹೊಂದಿದೆ.

ಬ್ಯಾಟರಿ: 1,300 mAh Li-ion ಬ್ಯಾಟರಿ ಹೊಂದಿದೆ.

ಇತರೆ ಫೀಚರ್ಸ್‌ಗಳು

ಗ್ಯಾಲಾಕ್ಸಿ ಮ್ಯೂಸಿಕ್‌ನಲ್ಲಿ ಬಿಲ್ಟ್‌-ಇನ್‌ 9-ಲುಮೆನ್‌ WVGA ಪ್ರೊಜೆಕ್ಟರ್‌, ಮುಂಬದಿಯ ಸ್ಪೀಕರ್ಸ್‌ ಹಾಗೂ FM ರೇಡಿಯೋ ಹೊಂದಿದೆ. ಇದಲ್ಲದೆ ಸೌಂಡ್‌ ಅಲೈವ್‌ ಹಾಗೂ SRS ತಂತ್ರಜ್ಞಾನ ಹೊಂದಿದೆ.

ಬೆಲೆ ಹಾಗೂ ಲಭ್ಯತೆ

ನೂತನ ಸ್ಮಾರ್ಟ್‌ಫೋನ್‌ನ ಬೆಲೆ ಹಾಗೂ ಬಿಡುಗಡೆಯ ದಿನಾಂಕ ಕುರಿತಾಗಿ ಮಾಹಿತಿಗಳು ಲಭ್ಯವಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot