Home
ಮೊಬೈಲ್

Galaxy Z TriFold: ಸ್ಯಾಮ್‌ಸಂಗ್‌ನ ಮೊದಲ ಟ್ರೈಪೋಲ್ಡ್ ಫೋನ್‌ ನೋಡಿ!

ದಕ್ಷಿಣ ಕೊರಿಯಾದ ತಂತ್ರಜ್ಞಾನ ದಿಗ್ಗಜ Samsung ಕಂಪೆನಿಯು ತನ್ನ ಮುಂದಿನ ತಲೆಮಾರಿನ ಅಥವಾ ಟ್ರೈಪೋಲ್ಡ್ ಮುಡಿಸುವ ಫೋನ್‌ಗಳ ಲೋಕಕ್ಕೆ ಹೊಸ ಅಧ್ಯಾಯವನ್ನು ಬರೆಯಲು ಸಜ್ಜಾಗಿದೆ. Samsung ಕಂಪನಿಯು ತನ್ನ ಬಹು ನಿರೀಕ್ಷಿತ Galaxy Z TriFold ಫೋನ್‌ನ ಮೊದಲ ನೋಟವನ್ನು ಏಸಿಯಾ-ಪೆಸಿಫಿಕ್ ಎಕಾನಾಮಿಕ್ ಕೋ-ಆಪರೇಷನ್ (APEC) ಶೃಂಗಸಭೆಯ ವೇಳೆ ಪ್ರದರ್ಶಿಸಿದ್ದು, ಈ ವಿಶಿಷ್ಟ ಟ್ರೈ-ಪೋಲ್ಡ್ ವಿನ್ಯಾಸದ ಫೋನ್ ಶೀಘ್ರದಲ್ಲೇ ಆಯ್ದ ದೇಶಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹಾಗಾದರೆ, Samsung ಕಂಪೆನಿಯಯ ಮೊದಲ ಟ್ರೈಪೋಲ್ಡ್ ಫೋನ್ ಹೇಗಿರಲಿದೆ ಎಂದು ನೋಡೋಣ ಬನ್ನಿ

ದಕ್ಷಿಣ ಕೊರಿಯಾದ "ದಿ ಚೋಸುನ್ ಡೈಲಿ"(The Chosun Daily) ಮಾಧ್ಯಮವು Galaxy Z TriFold ಚಿತ್ರಗಳನ್ನು ಪ್ರಕಟಿಸಿದೆ. ಈ ಸ್ಮಾರ್ಟ್‌ಫೋನ್ ಎರಡು ಒಳಮುಖ ಹಿಂಜ್‌ಗಳನ್ನು ಹೊಂದಿದ್ದು, ಮೂರು ಸ್ಕ್ರೀನ್‌ಗಳನ್ನು Z ಆಕಾರದಲ್ಲಿ ಮುಡಿಸಬಹುದಾಗಿದೆ ಎಂಬುದು ತೋರಿಸುತ್ತದೆ. ಈ ಫೋನನ್ನು ಮುಚ್ಚಿದಾಗ ಇದು ಸಾಮಾನ್ಯ ಬಾರ್ ಶೈಲಿಯ ಸ್ಮಾರ್ಟ್‌ಫೋನ್‌ನಂತೆ ಕಾಣುತ್ತದೆ. ಇದು ಕಂಪೆನಿಯ ಇತ್ತೀಚಿನ Galaxy Z Fold ಸರಣಿಯ ಶೈಲಿಯಂತೆಯೇ ಕಾಣುತ್ತಿದೆ. ಇನ್ನು ಈ ಪೋನಿನ ಬಲಭಾಗದ ಸ್ಕ್ರೀನ್‌ನಲ್ಲಿ ಇನ್‌-ಡಿಸ್ಪ್ಲೇ ಹೋಲ್-ಪಂಚ್ ಕ್ಯಾಮೆರಾ ನೀಡಲಾಗಿದ್ದು, ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ.

Galaxy Z TriFold ಸ್ಮಾರ್ಟ್‌ಫೋನಿನ ಅಧಿಕೃತ ವಿವರಗಳು ಬಹಿರಂಗವಾಗದಿಲ್ಲ. ಆದರೆ, ಸೋರಿಕೆಯ ಮಾಹಿತಿಗಳ ಪ್ರಕಾರ ಈ Galaxy Z TriFold ಸ್ಮಾರ್ಟ್‌ಫೋನ್ ಟೈಟೇನಿಯಂ ಫ್ರೇಮ್ ಹೊಂದಿರಲಿದೆ. ಈ ಪೋನಿನ ಮುಂಭಾಗದಲ್ಲಿ 6.54 ಇಂಚಿನ ಕವರ್ ಸ್ಕ್ರೀನ್, ಹಾಗೂ ಒಳಗೆ 9.96 ಇಂಚಿನ ಟ್ರೈ-ಪೋಲ್ಡ್ ಡಿಸ್ಪ್ಲೇ ನೀಡುವ ಸಾಧ್ಯತೆ ಇದೆ. ಇದು Huawei Mate XT ಅಲ್ಟಿಮೇಟ್ ವಿನ್ಯಾಸದಂತೆಯೇ Z-ಶೈಲಿಯಲ್ಲಿ ಮಡಚಬಹುದಾದ ಮೂರು ಪಕ್ಕ-ಪಕ್ಕದ ಪರದೆಗಳನ್ನು ಹೊಂದಿರಲಿದೆ. ಕಾರ್ಯಕ್ಷಮತೆಗಾಗಿ, ಈ ಸ್ಮಾರ್ಟ್‌ಫೋನ್ Snapdragon 8 Elite ಚಿಪ್‌ಸೆಟ್, 16GB RAM ಅನ್ನು ಒಳಗೊಂಡಿರಬಹುದು.

ಕ್ಯಾಮೆರಾ ವಿಭಾಗದಲ್ಲಿ, Galaxy Z TriFold ಸ್ಮಾರ್ಟ್‌ಫೋನ್ ಎಡಭಾಗದ ಹಿಂಭಾಗದ ಪ್ಯಾನೆಲ್‌ನಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ನಾವು ರೆಂಡರ್‌ಗಳನ್ನು ನಂಬುವುದಾದರೆ, ಈ ಫೋನಿನ ಕ್ಯಾಮೆರಾ ಸೆಟಪ್ ಪ್ರಸ್ತುತ Galaxy Z Fold 7ನಲ್ಲಿರುವ ಘಟಕವನ್ನು ಹೋಲುತ್ತದೆ. ಇನ್ನು ಕ್ಯಾಮೆರಾ ಸಾಮರ್ಥ್ಯದ ಕುರಿತು ನೋಡುವುದಾದರೆ, ಈ ಸ್ಮಾರ್ಟ್‌ಫೋನ್ 200 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, ಹಾಗೂ 100x ಡಿಜಿಟಲ್ ಜೂಮ್ ಸೌಲಭ್ಯ ಹೊಂದಿರಬಹುದು. ಬ್ಯಾಟರಿ ವಿಭಾಗದಲ್ಲಿ, ಲಿಕಾನ್-ಕಾರ್ಬನ್ ತಂತ್ರಜ್ಞಾನ ಬಳಸುವ ಸಾಧ್ಯತೆಯನ್ನು ಹೇಳಲಾಗಿದೆ.

Galaxy Z TriFold: ಸ್ಯಾಮ್‌ಸಂಗ್‌ನ ಮೊದಲ ಟ್ರೈಪೋಲ್ಡ್ ಫೋನ್‌ ನೋಡಿ!
(photo credit: chosun.com)

ಆಯ್ದ ಮಾರುಕಟ್ಟೆಗಳಿಗಳಲ್ಲಿ ಮಾತ್ರ ಬಿಡುಗಡೆ?
Samsung ಕಂಪೆನಿಯು ಪ್ರಾರಂಭಿಕ ಹಂತದಲ್ಲಿ ಈ Galaxy Z TriFold ಸ್ಮಾರ್ಟ್‌ಪೋನನ್ನು ಆಯ್ದ ಮಾರುಕಟ್ಟೆಗಳಲ್ಲಿ ಮಾತ್ರ ಬಿಡುಗಡೆಮಾಡಲು ಯೋಜಿಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಕಂಪನಿಯು Galaxy Z TriFold ನ ಕೇವಲ 50,000 ಯೂನಿಟ್‌ಗಳನ್ನು ಮಾತ್ರ ತಯಾರಿಸಲು ಉದ್ದೇಶಿಸಿದೆ ಮತ್ತು ಪ್ರಾರಂಭಿಕ ಹಂತದಲ್ಲಿ ಈ ಫೋನ್ ಅನ್ನು ಕೇವಲ ಚೀನಾ, ಸಿಂಗಪೂರ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ಯುಎಇ ದೇಶಗಳಲ್ಲಿ ಮಾತ್ರ ಬಿಡುಗಡೆ ಮಾಡಲು ಯೋಜಿಸಿದೆ ಎನ್ನಲಾಗಿದೆ. ಆದರೆ, ಕಂಪೆನಿಯು ಈ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಪ್ರೀಮಿಯಂ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಪ್ರಸ್ತುತ Samsung ಕಂಪೆನಿಯು ದಿಗ್ಗಜನಾಗಿ ಹೊರಹೊಮ್ಮಿದೆ. ಇದೀಗ Galaxy Z TriFold ಸ್ಮಾರ್ಟ್‌ಫೋನ್ ಮೂಲಕ ಮಡುಚುವ ಫೋನ್ ತಂತ್ರಜ್ಞಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು Samsung ಮುಂದಾಗಿದೆ. ಈ ಹೊಸ ಫೊನ್ ಬಳಕೆದಾರರಿಗೆ ಟ್ಯಾಬ್ಲೆಟ್‌ನ ಅನುಭವ ಮತ್ತು ಸ್ಮಾರ್ಟ್‌ಫೋನ್‌ನ ಸುಲಭ ಬಳಕೆ ಎರಡನ್ನೂ ಒಟ್ಟಿಗೆ ನೀಡುವ ಹೊಸ ಪ್ರಯತ್ನವಾಗಿರಬಹುದು. ಈ ಮಾದರಿಯು, ಹುವಾವೇ ಬಿಡುಗಡೆ ಮಾಡಿದ Mate XT Ultimate Design ನಂತರ, ವಿಶ್ವದ ಎರಡನೇ ಟ್ರೈ-ಪೋಲ್ಡ್ ವಾಣಿಜ್ಯ ಸ್ಮಾರ್ಟ್‌ಫೋನ್ ಆಗಬಹುದು.

ಭಾರತ ಸೇರಿದಂತೆ ಇತರ ದೇಶಗಳಲ್ಲಿ ಈ ಫೋನ್ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಕಂಪನಿ ಶೀಘ್ರದಲ್ಲೇ ಅಧಿಕೃತ ಮಾಹಿತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಅನ್ನು ಫಾಲೋ ಮಾಡುತ್ತಿರಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Samsung showcased an initial glimpse of its highly anticipated Galaxy Z TriFold phone at the Asia-Pacific Economic Cooperation (APEC) summit, highlighting its distinctive tri-fold design. The phone is projected to be launched in select countries in the near future.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+