Home
ಮೊಬೈಲ್

Samsung: ಎರಡು ದೈತ್ಯ ಫೋನ್ ಲಾಂಚ್; 200MP ಕ್ಯಾಮೆರಾ.. 512GB ಸ್ಟೋರೇಜ್‌.. ಬೆಲೆ ಇಷ್ಟೊಂದಾ?

ಟೆಕ್ ದೈತ್ಯ ಸ್ಯಾಮ್‌ಸಂಗ್ (Samsung) ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಕಂಪನಿಯು ಸದ್ದಿಲ್ಲದೆ ಎರಡು ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ. ಹೌದು, ಸ್ಯಾಮ್‌ಸಂಗ್ W25 (Samsung W25) ಮತ್ತು ಸ್ಯಾಮ್‌ಸಂಗ್ W25 ಫ್ಲಿಪ್ (Samsung W25 Flip) ಎಂಬ ದೈತ್ಯ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ನೂತನ ಫೋಲ್ಡಬಲ್‌ಗಳು ಗ್ಯಾಲಕ್ಸಿ ಎಐ ವೈಶಿಷ್ಟ್ಯಗಳನ್ನು ಹೊಂದಿವೆ. ನೀವು, ನವೆಂಬರ್ 15 ರಿಂದ ಖರೀದಿಸಬಹುದು. ಬನ್ನಿ, ಹೊಸ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಕಂಪನಿಯು ಸ್ಯಾಮ್‌ಸಂಗ್ W25 ಫೋನನ್ನು Samsung Galaxy Z Fold 6 SE ಉತ್ತರಾಧಿಕಾರಿಯಾಗಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ಲಾಂಚ್ ಮಾಡಲಾಗಿತ್ತು. ಸ್ಯಾಮ್ಸಂಗ್ W25 ಫ್ಲಿಪ್ ಮೊಬೈಲ್ Samsung Galaxy Z Flip 6 ಉತ್ತರಾಧಿಕಾರಿಯಾಗಿದೆ. ಎರಡೂ ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತವೆ. ಸ್ಯಾಮ್‌ಸಂಗ್ W25 ಫೋನ್ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಎರಡರಲ್ಲೂ 4400mAh ಬ್ಯಾಟರಿ ಲಭ್ಯವಿದೆ.

Samsung: ಎರಡು ಹೊಸ ಫೋನ್ ಬಿಡುಗಡೆ; 200MP ಕ್ಯಾಮೆರ, 512GB ಸ್ಟೋರೇಜ್‌.. ಬೆಲೆ?

ಸ್ಯಾಮ್‌ಸಂಗ್ W25 ಮತ್ತು ಸ್ಯಾಮ್‌ಸಂಗ್ W25 ಫ್ಲಿಪ್ ಬೆಲೆ

ಕಂಪನಿಯು ಸ್ಯಾಮ್‌ಸಂಗ್ W25 ಫೋನಿನ 16GB + 512GB ಸ್ಟೋರೇಜ್‌ ರೂಪಾಂತರವನ್ನು 1,88,000 ರೂ.ಗೆ (CNY 15,999) ಬಿಡುಗಡೆ ಮಾಡಿದೆ. 16GB + 1TB ಸ್ಟೋರೇಜ್ ಆಯ್ಕೆಯ ಬೆಲೆ 2,11,500 ರೂ. (CNY 17,999) ಆಗಿದೆ. ಇನ್ನೂ, ಸ್ಯಾಮ್‌ಸಂಗ್ W25 ಫ್ಲಿಪ್ ಮೊಬೈಲ್‌ನ 12GB + 512GB ಸ್ಟೋರೇಜ್ ರೂಪಾಂತರವನ್ನು 1,17,500 ರೂ.ಗೆ (CNY 9,999) ಲಾಂಚ್ ಮಾಡಲಾಗಿದೆ. ನೂತನ ಫೋಲ್ಡಬಲ್‌ಗಳು ನವೆಂಬರ್ 15 ರಿಂದ ಚೀನಾದಲ್ಲಿ ಮಾರಾಟವಾಗಲಿವೆ.

ಸ್ಯಾಮ್‌ಸಂಗ್ W25 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಸ್ಯಾಮ್‌ಸಂಗ್ W25 ಮೊಬೈಲ್ 8 ಇಂಚಿನ ಅಮೋಲೆಡ್‌ ಡಿಸ್ಪ್ಲೇಯನ್ನು ಹೊಂದಿದೆ. ಇದು 2184 X 1968 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ, 2600 ನಿಟ್ಸ್‌ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ. ಜೊತೆಗೆ 6.5 ಇಂಚಿನ ಕವರ್ ಡಿಸ್ಪ್ಲೇ ಇದೆ. ಇದು 2020 X 1820 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹೊಸ ಫೋಲ್ಡಬಲ್ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನ್ 16GB RAM ಮತ್ತು 512GB, 1TB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.

ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್ W25 ಫೋಲ್ಡಬಲ್ ಫೋನ್ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಫೋನಿನಲ್ಲಿ 10 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 4 ಮೆಗಾಪಿಕ್ಸೆಲ್ ಅಂಡರ್ ಡಿಸ್ಪ್ಲೇ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್‌

ಕಂಪನಿಯು ಹೊಸ ಫೋಲ್ಡಬಲ್ ಫೋನನ್ನು 4400mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 25W ವೇಗದ ವೈರ್ಡ್ ಚಾರ್ಜಿಂಗ್‌ ಸೌಲಭ್ಯ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP48 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಬ್ಲೂಟೂತ್ 5.3, ವೈ-ಫೈ, ಎನ್‌ಎಫ್‌ಸಿ ಮತ್ತು ಜಿಪಿಎಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಸ್ಯಾಮ್‌ಸಂಗ್ W25 ಫ್ಲಿಪ್ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಸ್ಯಾಮ್‌ಸಂಗ್ W25 ಫ್ಲಿಪ್ ಮೊಬೈಲ್ 6.7 ಇಂಚಿನ ಅಮೋಲೆಡ್‌ ಡಿಸ್ಪ್ಲೇಯನ್ನು ಹೊಂದಿದೆ. ಇದು 2640 X 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಹೊಂದಿದೆ. ಜೊತೆಗೆ 3.4 ಇಂಚಿನ ದ್ವಿತೀಯ ಡಿಸ್ಪ್ಲೇ ಇದೆ. ಇದು 720 X 748 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹೊಸ ಫ್ಲಿಪ್ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 12GB RAM ಮತ್ತು 512GB ಸ್ಟೋರೇಜ್ ಹೊಂದಿದೆ.

ಕ್ಯಾಮೆರಾ ಸೆಟಪ್

ಸ್ಯಾಮ್‌ಸಂಗ್ W25 ಫ್ಲಿಪ್ ಮೊಬೈಲ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 10 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ನೂತನ ಫ್ಲಿಪ್ ಫೋನನ್ನು 4000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಇದು 25W ವೇಗದ ಚಾರ್ಜಿಂಗ್ ಬೆಂಬಲ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ W25 ಫ್ಲಿಪ್ ಸ್ಮಾರ್ಟ್‌ಫೋನ್ ಧೂಳು ಮತ್ತು ನೀರು ನಿರೋಧ IP48 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಬ್ಲೂಟೂತ್ 5.3, ವೈ ಫೈ, ಎನ್‌ಎಫ್‌ಸಿ ಮತ್ತು ಜಿಪಿಎಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Samsung W25 and Samsung W25 Flip foldables launched: price, specifications. ಸ್ಯಾಮ್‌ಸಂಗ್ W25 ಮತ್ತು ಸ್ಯಾಮ್‌ಸಂಗ್ W25 ಫ್ಲಿಪ್ ಮೊಬೈಲ್‌ಗಳನ್ನು ಬಿಡುಗಡೆ ಮಾಡಲಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+