ಹಲವು ಆಯ್ಕೆಗಳೊಂದಿಗೆ ಸ್ಯಾಮ್ ಸಂಗ್ ವೇವ್ ಮೊಬೈಲ್

Posted By: Staff
ಹಲವು ಆಯ್ಕೆಗಳೊಂದಿಗೆ ಸ್ಯಾಮ್ ಸಂಗ್ ವೇವ್ ಮೊಬೈಲ್

 

ಮೊಬೈಲ್ ತಯಾರಿಕೆಯಲ್ಲಿ ಸ್ಯಾಮ್ ಸಂಗ್ ಕಂಪನಿ ಹೆಚ್ಚು ಹೆಸರು ಮಾಡಿದೆ. ನೂತನ ಆಯ್ಕೆಗಳನ್ನು ಹೊಂದಿರುವ ಮೊಬೈಲನ್ನು ಕೈಗೆಟುಕುವ ದರದಲ್ಲಿ ನೀಡುವುದು ಕಂಪನಿಯ ವಿಶೇಷತೆ. ಇತ್ತೀಚೆಗಷ್ಟೆ ಸ್ಯಾಮ್ ಸಂಗ್ ವೇವ್ ಎಂ ಎಂಬ ಮೊಬೈಲನ್ನು ಕಂಪನಿ ಪರಿಚಯಿಸಿದೆ.

832 MHz ಪ್ರೊಸೆಸರ್ ನೊಂದಿಗೆ ಬಡಾ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ ನಲ್ಲಿನ ಡಾಲ್ಫಿನ್ ವೆಬ್ ಬ್ರೌಸರ್ ನಿಂದ ವೇಗವಾದ ಇಂಟರ್ನೆಟ್ ಸಂಪರ್ಕ ಸಾಧ್ಯವಾಗಲಿದೆ. ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಮೊಬೈಲನ್ನು ವಿನ್ಯಾಸಗೊಳಿಸಲಾಗಿದೆ.

ಸ್ಯಾಮ್ ಸಂಗ್ ವೇವ್ ಎಂ ಮೊಬೈಲ್ ವಿಶೇಷತೆ:

* ಟಚ್ ಸ್ಕ್ರೀನ್ ಮೊಬೈಲ್

* 3.65 ಇಂಚಿನ LCD ಡಿಸ್ಪ್ಲೇ, 320 x480 ಪಿಕ್ಸಲ್ ರೆಸೊಲ್ಯೂಷನ್

* 113.8 ಎಂಎಂ x 63.3 ಎಂಎಂ x 12.2 ಎಂಎಂ

* ಡ್ಯೂಯಲ್ ಕ್ಯಾಮೆರಾ

* 5 ಮೆಗಾ ಪಿಕ್ಸಲ್ ಕ್ಯಾಮೆರಾ

* LED ಫ್ಲಾಶ್, ವಿಡಿಯೋ ರೆಕಾರ್ಡಿಂಗ್

* ಟಚ್ ವಿಝ್ ಇಂಟರ್ ಫೇಸ್

* HSDPA, ವೈ-ಫೈ, ಬ್ಲೂಟೂಥ್, A-GPS

* ಡಿಜಿಟಲ್ ಲಿವಿಂಗ್ ನೆಟ್ ವರ್ಕ್ ಅಲಯನ್ಸ್ (DLNA)

* ಎನ್ ಎಫ್ ಸಿ ತಂತ್ರಜ್ಞಾನ

* ಎಫ್ ಎಂ, ಮಲ್ಟಿಮೀಡಿಯಾ ಪ್ಲೇಯರ್

1350 mAh ಬ್ಯಾಟರಿ ಹೊಂದಿರುವ ಈ ವೇವ್ ಮೊಬೈಲ್ ನಿಂದ 3ಜಿನಲ್ಲಿ 6 ಗಂಟೆ 30 ನಿಮಿಷ ಟಾಕ್ ಟೈಂ ಮತ್ತು 20 ದಿನಗಳ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಈ ಸ್ಯಾಮ್ ಸಂಗ್ ವೇವ್ ಎಂ ಮೊಬೈಲ್ 12,000ರೂ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವುದಾಗಿ ನಿರೀಕ್ಷಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot