ವೇವ್ ಬರುತಿದೆ ಬಡಾ ಆಪರೇಟಿಂಗ್ ಸಿಸ್ಟಮ್ ಜೊತೆ

By Super
|
ವೇವ್ ಬರುತಿದೆ ಬಡಾ ಆಪರೇಟಿಂಗ್ ಸಿಸ್ಟಮ್ ಜೊತೆ

ಸ್ಯಾಮ್ ಸಂಗ್ ಕಂಪನಿ ಇತ್ತೀಚೆಗಷ್ಟೆ ಬಡಾ 2.0 ಆಂಡ್ರಾಯ್ಡ್ ಆಯಾಮದ ತನ್ನ ವಿನೂತನ ಸ್ಮಾರ್ಟ್ ಪೋನ್ ಸ್ಯಾಮ್ ಸಂಗ್ ವೇವ್ Y ಅನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಈ ಮೊಬೈಲನ್ನು ಯುವಜನತೆಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡೇ ತಯಾರಿಸಿರುವುದಾಗಿ ಕಂಪನಿ ತಿಳಿಸಿದೆ.

ಈ ಮೊಬೈಲಿನಲ್ಲಿ ಟಚ್ ವಿಝ್ ಯೂಸರ್ ಇಂಟರ್ ಫೇಸ್ ಇರುವುದು ವಿಶೇಷವೆನಿಸಿದೆ. 832 MHz ಪ್ರೊಸೆಸರ್ ನೊಂದಿಗೆ ಬಡಾ 2.0 ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿರುವುದು ಉತ್ತಮ ಕಾರ್ಯ ಕ್ಷಮತೆ ನೀಡಲಿದೆ.

ಸ್ಯಾಮ್ ಸಂಗ್ ವೇವ್ Y ಮೊಬೈಲ್ ವಿಶೇಷತೆ:

* 110 ಎಂಎಂ x 58.2 ಎಂಎಂ x 12.3 ಎಂಎಂ ಸುತ್ತಳತೆ

* 102.4 ಗ್ರಾಂ ತೂಕ

* 3.2 ಇಂಚಿನh TFT ಟಚ್ ಸ್ಕ್ರೀನ್, 320 x 480 ಪಿಕ್ಸಲ್ ರೆಸೊಲ್ಯೂಷನ್

* 2 ಮೆಗಾ ಪಿಕ್ಸಲ್ ಕ್ಯಾಮೆರಾ, 1600 x 1200 ಪಿಕ್ಸಲ್ ರೆಸೊಲ್ಯೂಷನ್

* LED ಫ್ಲಾಶ್

* ಅಕ್ಸೆಲೆರೊಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್

* ಜಾವಾ ಬೆಂಬಲಿತ

* ಮೀಡಿಯಾ ಪ್ಲೇಯರ್

* GPRS ಮತ್ತು EDGE

* ವೈ-ಫೈ, ಬ್ಲೂಟೂಥ್ 3.0

* 150 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ

* 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* 2ಜಿಬಿ ಮೆಮೊರಿ ಕಾರ್ಡ್

1200 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 570 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 6 ಗಂಟೆ 40 ನಿಮಿಷ ಟಾಕ್ ಟೈಂ ನೀಡುತ್ತದೆ. ಈ ಮೊಬೈಲ್ ಯುವಜನರನ್ನು ಉದ್ದೇಶವಾಗಿಟ್ಟುಕೊಂಡು ಹೊರಬರುತ್ತಿರುವುದರಿಂದ ಸಾಮಾಜಿಕ ತಾಣಗಳ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ.

ಇದರಲ್ಲಿರುವ ಲೈವ್ ಪೇನ್ ಅನೇಕ ಹೋಮ್ ಸ್ಕ್ರಿನ್ ಆಯ್ಕೆಗಳನ್ನು ನೀಡುತ್ತದೆ. ಇದರಲ್ಲಿ ಅನೇಕ ಅಪ್ಲಿಕೇಶನ್ ಗಳು ಇವೆ. ಮೊಬೈಲ್ ಮಲ್ಟಿಮೀಡಿಯಾ ಬೆಂಬಲಿತವಾಗಿದ್ದು, ಎಫ್ ಎಂ ರೇಡಿಯೋ ಕೂಡ ಇದೆ. ಸ್ಯಾಮ್ ಸಂಗ್ ವೇವ್ Y ಮೊಬೈಲ್ ಬೆಲೆ 8,000 ರೂ ಎಂದು ತಿಳಿದುಬಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X