ಹೊಸ ವರ್ಷಕ್ಕೆ ಸ್ಯಾಮ್‌ಸಂಗ್‌ನಿಂದ ಕೊಡುಗೆ

By Super
|

ಹೊಸ ವರ್ಷಕ್ಕೆ ಸ್ಯಾಮ್‌ಸಂಗ್ ಕಂಪೆನಿ ತನ್ನ ಹ್ಯಾಂಡ್‌ ಸೆಟ್‌ಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಈ ಮೂಲಕ ಹೊಸ ವರ್ಷಕ್ಕೆ ಭಾರತೀಯ ಗ್ರಾಹಕರಿಗೆ ಕೊಡುಗೆ ನೀಡಿದೆ. 16 GBಯ ಸ್ಯಾಮ್‌ಸಂಗ್‌ ಗೆಲಾಕ್ಸಿ S3 31,900 ರೂಪಾಯಿಯಾದ್ರೆ 32GBಯ ಗೆಲಾಕ್ಸಿ S3 34,900 ರೂಪಾಯಿ ನೀಡಿ ನೀವು ಖರೀದಿಸಬಹುದು.

ಸ್ಯಾಮಸಂಗ್‌ ಗೆಲಾಕ್ಸಿ ನೋಟ್ ಈಗ 27,500 ರೂಪಾಯಿಗೆ ಲಭ್ಯವಾಗಿದೆ.ಇನ್ನು ಸ್ಯಾಮ್‌ಸಂಗ್‌ನ ಡ್ಯೂಯಲ್‌ ಸಿಮ್ ಗೆಲಾಕ್ಸಿ ಏಸ್ ಡ್ಯೂಯಸ್ ಬೆಲೆ 10,990 ಆದ್ರೆ, ಗೆಲಾಕ್ಸಿ S ಡ್ಯೂಯಸ್ ಈಗ 14,900 ರೂಪಾಯಿ ಆಗಿದೆ. ಅನಲೈನ್‌ ಮಾರಾಟ ತಾಣಗಳಾದ ಪ್ಲಿಪ್‌ಕಾರ್ಟ್ ಮತ್ತು ಸಾಹೋಲಿಕ್‌ನಲ್ಲಿ ನೀವು ಈ ಹ್ಯಾಂಡ್‌ ಸೆಟ್‌ಗಳನ್ನು ಖರೀದಿಸಬಹುದು.

 ಹೊಸ ವರ್ಷಕ್ಕೆ ಸ್ಯಾಮ್‌ಸಂಗ್‌ನಿಂದ ಕೊಡುಗೆ
ಸ್ಯಾಮ್‌ಸಂಗ್ ಗೆಲಾಕ್ಸಿಯ S3 ವಿಶೇಷತೆ ಬಗ್ಗೆ ಹೇಳುವುದಿದ್ರೆ 4.8 ಇಂಚಿನ AMOLED ದರ್ಶಕವಿದೆ. ಕ್ವಾಡ್ ಕೋರ್ 1.4GHz ಪ್ರೊಸೆಸರ್, 1GB RAM ,ಆಟೋಫೋಕಸ್ ಮತ್ತು ಎಲ್ಇಡಿ ಫ್ಲಾಶ್ ಸಹಿತ ಹಿಂದುಗಡೆ 8MP ಕ್ಯಾಮೆರಾ ಇದ್ರೆ ವಿಡಿಯೋ ಮಾತುಕತೆಗಾಗಿ 1.9MP ಕ್ಯಾಮೆರಾವಿದೆ.

ಗೆಲಾಕ್ಸಿ ನೋಟ್‌ ಪ್ಯಾಬ್ಲೆಟ್ನಲ್ಲಿ 5.3 ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌, 1.4GHz ಡ್ಯುಯಲ್ ಕೋರ್ ARM ಕಾರ್ಟೆಕ್ಸ್ ಎ 9 ಪ್ರೊಸೆಸರ್‌, ಹಿಂದುಗಡೆ 8MP ಕ್ಯಾಮೆರಾ, ಮುಂದುಗಡೆ 2MP ಕ್ಯಾಮೆರಾ, ಆಂಡ್ರಾಯ್ಡ್ 4.0 ಆಪರೆಟಿಂಗ್‌ ಸಿಸ್ಟಂ, Wi-Fi, ಬ್ಲೂಟೂತ್, 16GB ಆಂತರಿಕ ಮೆಮೊರಿ, 32GB ವರೆಗೂ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ, 2,500 mAh ಲಿಯಾನ್‌ ಬ್ಯಾಟರಿ ನೀಡಲಾಗಿದೆ.

ಗೆಲಾಕ್ಸಿ S ಡ್ಯೂಯೊಸ್‌ನಲ್ಲಿ 4 ಇಂಚಿನ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌, ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಆಪರೆಟಿಂಗ್‌ ಸಿಸ್ಟಂ, 1GHz ಪ್ರೊಸೆಸರ್, 5MP ಹಿಂದುಗಡೆ ಕ್ಯಾಮೆರಾ, ಎದುರಗಡೆ VGA ಕ್ಯಾಮೆರಾ, 4GB ಆಂತರಿಕ ಮೆಮೊರಿ, 768MB RAM, 32GB ವರೆಗೂ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ, 1,500 mAh ಲಿಯಾನ್‌ ಬ್ಯಾಟರಿ ನೀಡಲಾಗಿದೆ.

ಗೆಲಾಕ್ಸಿ Ace ಡ್ಯೂಯೊಸ್‌ನಲ್ಲಿ 3.5 ಇಂಚು ಕೆಪ್ಯಾಸಿಟಿವ್ ಟಚ್ ಸ್ಕ್ರೀನ್‌, 832MHz ಪ್ರೊಸೆಸರ್, ಹಿಂದುಗಡೆ 5MP ಕ್ಯಾಮೆರಾ, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್, Wi-Fi, 3Gb ಆಂತರಿಕ ಶೇಖರಣಾ ಸಾಮಾರ್ಥ್ಯ , 512MB RAM, 1,300 mAh ಬ್ಯಾಟರಿ ನೀಡಲಾಗಿದೆ

ಕಡಿಮೆ ಬೆಲೆಯಲ್ಲಿ ಡ್ಯೂಯಲ್ ಸಿಮ್‌ ಪ್ಯಾಬ್ಲೆಟ್‌ ಖರಿದೀಸಿಕಡಿಮೆ ಬೆಲೆಯಲ್ಲಿ ಡ್ಯೂಯಲ್ ಸಿಮ್‌ ಪ್ಯಾಬ್ಲೆಟ್‌ ಖರಿದೀಸಿ

ಹೊಸ ವರ್ಷಕ್ಕೆ ಟೆಕ್ ರೆಸೂಲ್ಯೂಷನ್

ಬರಲಿದೆ ಆಪಲ್ ಐ ವಾಚ್

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X