ಸಖತ್ ಕ್ಯಾಮೆರಾ ಇದೆ ಈ ಮೊಬೈಲಿನಲ್ಲಿ

Posted By: Staff
ಸಖತ್ ಕ್ಯಾಮೆರಾ ಇದೆ ಈ ಮೊಬೈಲಿನಲ್ಲಿ
ಶಾರ್ಪ್ ಅಕ್ವಾಸ್ 104SH ಮೊಬೈಲ್ ಇದೀಗ ಸುದ್ದಿಯಲ್ಲಿರುವ ಮೊಬೈಲ್. ಆಂಡ್ರಾಯ್ಡ್ ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿರುವ ಈ ಮೊಬೈಲ್ ಈ ವರ್ಷ ತೆರೆಗೊಳ್ಳಲಿರುವ ಅನೇಕ ಮೊಬೈಲ್ ಗಳಿಗೆ ಪೈಪೋಟಿ ಒಡ್ಡಲು ತಯಾರಾಗಿದೆ.

ಟೆಕ್ಸಾಸ್ ಇನ್ಸ್ ಟ್ರುಮೆಂಟ್ಸ್ OMAP 4460 ಪ್ರೊಸೆಸರನ್ನು ಪಡೆದುಕೊಂಡಿರುವ ಈ ಮೊಬೈಲ್ 1.5 GHz ವೇಗದ ಪ್ರೊಸೆಸರ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಈ ಮೊಬೈಲಿನಲ್ಲಿ ಇನ್ನೂ ಹಲವು ಆಯ್ಕೆಗಳಿವೆ. ಅದೇನೆಂದು ಮುಂದೆ ತಿಳಿದುಕೊಳ್ಳಿ.

ಶಾರ್ಪ್ ಅಕ್ವಾಸ್ 104SH ಮೊಬೈಲ್ ವಿಶೇಷತೆ:

* 65 ಎಂಎಂ x 129 ಎಂಎಂ x 8.7 ಎಂಎಂ ಸುತ್ತಳತೆ

* 4.5 ಇಂಚಿನ ASV TFT ಟಚ್ ಸ್ಕ್ರೀನ್ ಡಿಸ್ಪ್ಲೇ, 720 x 1280 ಪಿಕ್ಸಲ್ ರೆಸೊಲ್ಯೂಷನ್

* 12.8 ಮೆಗಾ ಪಿಕ್ಸಲ್ ಕ್ಯಾಮೆರಾ, ಆಟೊ ಫೋಕಸ್

* 0.3 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ

* 1 ಜಿಬಿ RAM

* ಆಡಿಯೋ ಜ್ಯಾಕ್

* GPS ಬೆಂಬಲಿತ

* ಮೆಮೊರಿ ವಿಸ್ತರಣೆಗೆ ಅವಕಾಶ

* ಬ್ಲೂಟೂಥ್ 3.0, USB 2.0, ವೈ-ಫೈ 802.11 b/g/n

ಕಪ್ಪು ಬಣ್ಣದಲ್ಲಿ ಮೂಡಿಬಂದಿರುವ ಈ ಮೊಬೈಲ್ ವಿಸ್ತಾರವಾದ ಸ್ಕ್ರೀನ್ ಹೊಂದಿದೆ. ಈ ಮೊಬೈಲಿನಲ್ಲಿರುವ OMAP 4460 ಪ್ರೊಸೆಸರ್ ಯಾವುದೇ ಅಡಚಣೆಯಿಲ್ಲದೆ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಟ್ರಾನ್ಸ್ ಫ್ಲಾಶ್ ಮಾದರಿಯ ಮೆಮೊರಿ ಕಾರ್ಡ್ ಇದೆ.

ಈ ಶಾರ್ಪ್ ಅಕ್ವಾಸ್ 104SH ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ನಿಗದಿ ಪಡಿಸಿಲ್ಲ. ಈ ವರ್ಷದ ಮಾರ್ಚ್ ನಲ್ಲಿ ಬಿಡುಗಡೆಗೊಳ್ಳುವ ಈ ಮೊಬೈಲ್ ಕುರಿತ ಪೂರ್ಣ ಮಾಹಿತಿ ಮತ್ತು ಬೆಲೆ ಮುಂದಿನ ತಿಂಗಳಿನಲ್ಲಿ ಕಂಪನಿ ಘೋಷಿಸುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot