ಮೊಬೈಲ್ ಫೋನ್‌ಗಳ 6 ಇಂಟ್ರೆಸ್ಟಿಂಗ್ ವಿಷಯಗಳು ನಿಮ್ಮನ್ನು ನಿಬ್ಬೆರಗಾಗಿಸುತ್ತವೆ!!..ಏನವು?
ವೈಜ್ಞಾನಿಕ ಸಂಶೋಧನೆಯೊಂದರ ಪ್ರಕಾರ, ಒಂದು ಟಾಯ್ಲೆಟ್‌ನಲ್ಲಿರುವ ಕೀಟಾಣುಗಳ 18 ಪಟ್ಟು ಹೆಚ್ಚು ಸಂಖ್ಯೆ ಕೀಟಾಣುಗಳು ಮೊಬೈಲ್ ಮೇಲಿರುತ್ತವೆಯಂತೆ.!!
ಕೇವಲ ಎರಡು ಮೂರು ದಶಕಗಳಲ್ಲಿಯೇ ಮೊಬೈಲ್ ಜಗತ್ತು ಎಂಬುದು ಒಂದು ಕುತೋಹಲಗಳ ಆಗರವಾಗಿ ಬದಲಾಗಿದ್ದನ್ನು ಯಾರೂ ಕೂಡ ಊಹೆ ಮಾಡಿರಲಿಲ್ಲ ಎನ್ನಬಹುದು.! ಪ್ರಪಂಚದ ಎಲ್ಲಾ ಜನರು ಮೊಬೈಲ್ ಎಂಬ ಮಾಯಾ ಪ್ರಪಂಚಕ್ಕೆ ಮಾರುಹೋಗಿ, ಅದರ ಹಿಂದೆ ಬಿದ್ದದ್ದು ಈಗ ಇತಿಹಾಸ.!!
ಇಂತಹ ಅತ್ಯದ್ಬುತವಾದ ಇತಿಹಾಸ ಹೊಂದಿರುವ ಮುಬೈಲ್ ಜಗತ್ತು ಈಗಲೂ ಬೆಳವಣಗೆ ಹೊಂದುತ್ತಲೇ ಇದ್ದು, ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಸಹ ಹುಟ್ಟಿಹಾಕಿದೆ.!! ಹಾಗಾಗಿ, ಇಂದಿನ ಲೇಖನದಲ್ಲಿ ಮೊಬೈಲ್ ಜಗತ್ತಿನ ಬಗೆಗಿನ ಕೆಲವೊಮದು ಇಂಟ್ರೆಸ್ಟಿಂಗ್ ವಿಷಯಗಳನ್ನು ನಾವು ಇಂದಿನ ಲೇಖಸದಲ್ಲಿ ತಿಳಿಯೋಣ.!!

ಟಾಯ್ಲೆಟ್‌ಗಿಂತ ಕೊಳಕು ಜಾಸ್ತಿ!!
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಿಮಗೆ ಗೊತ್ತಾ?.ವೈಜ್ಞಾನಿಕ ಸಂಶೋಧನೆಯೊಂದರ ಪ್ರಕಾರ, ಒಂದು ಟಾಯ್ಲೆಟ್‌ನಲ್ಲಿರುವ ಕೀಟಾಣುಗಳ 18 ಪಟ್ಟು ಹೆಚ್ಚು ಸಂಖ್ಯೆ ಕೀಟಾಣುಗಳು ಮೊಬೈಲ್ ಮೇಲಿರುತ್ತವೆಯಂತೆ.!! ಆದರೆ, ಕಾಣಿಸುತ್ತಿಲ್ಲ ಎಂದು ಕೇಳಬೇಡಿ. ಅವುಗಳು ಸೂಕ್ಮಾಣು ಜೀವಿಗಳು.!!

40 ಜನರಲ್ಲಿ 35ಜನ ಮಾತ್ರ ಟೂಥ್ ಬ್ರಷ್ ಬಳಸ್ತಾರೆ!!
ಇದೊಂತರ ವಿಚಿತ್ರವಾದ ಸಮೀಕ್ಷೆ ಎನ್ನಬಹುದು.!! ಪ್ರತಿ 40 ಜನ ಮೊಬೈಲ್ ಬಳಕೆ ಮಾಡುತ್ತಿದ್ದರೆ ಅವರಲ್ಲಿ 35ಜನ ಮಾತ್ರ ಟೂಥ್ ಬ್ರಷ್ ಉಪಯೋಗಿಸ್ತಾರಂತೆ.! ಉಳಿದ 5 ಜನರಿಗೆಲ್ಲ ಮೊಬೈಲ್ ಇಲ್ಲದಿದ್ದರೆ ಒಂದು ನಿಮಿಷನ ಕೂಡ ಇರೋಕಾಗಲ್ಲ ಎಂಬ ಅರ್ಥವೇನೊ.?!

ಮೂರೇ ನಿಮಿಷದ ಎಸ್ಎಮ್ಎಸ್ ಓದ್ತಾರೆ!!
ವಾಟ್ಸ್‌ಆಪ್‌ನಲ್ಲೆಲ್ಲಾ 1 ತಿಂಗಳ ಮೇಸೆಜ್‌ಗಳು ಹಾಗೆ ಓದದೆ ಇರಬಹುದನ್ನು ನೀವು ನೋಡಬಹುದು.! ಆದರೆ, ಪ್ರಪಂಚದಲ್ಲಿ ಎಸ್ಎಮ್ಎಸ್ ಬಂದ ಮೂರೆ ನಿಮಿಷದಲ್ಲಿ ಶೇಕಡ 90ರಷ್ಟು ಎಸ್ಎಮ್ಎಸ್ ಓದಿ ಆಗಿರುತಂತ್ತೆ. ಆದರೆ, ಇದು ಹಳೆ ವಿಷಯ!!

ನೋಕಿಯಾ 1100 ದಾಖಲೆ ಮುರಿಯೋಕಾಗಿಲ್ಲ.!!
ಒಂದು ಕಾಲದ ನಮ್ಮ ನಿಮ್ಮ ಕೈಯಲ್ಲಿ ರಾರಾಜಿಸಿದ್ದ ನೋಕಿಯಾ 1100 ನಿರ್ಮಿಸಿದ್ದ ಮೊಬೈಲ್ ದಾಖಲೆಯನ್ನು ಯಾವ ಮೊಬೈಲ್ ಕೂಡ ಮುರಿಯಲು ಆಗಿಲ್ಲ.! ಒಟ್ಟು 240 ಬಿಲಿಯನ್ ನೋಕಿಯ 1100 ಮೊಬೈಲ್‌ಗಳ ಮಾರಾಟವಾಗಿ ಇಮದಿಗೂ ಈ ದಾಖಲೆ ಹಾಗೆಯೇ ಇದೆ.!!ಪ್ರಪಂಚದಲ್ಲಿ ಅತಿ ಹೆಚ್ಚು ಮಾರಾಟವಾದ ವಿದ್ಯುತ್ ಉಪಕರಣ ಎಂಬ ಕಿರ್ಥಿಗೂ ಭಾಜನವಾಗಿದೆ.!!

ಲಕ್ಷ ಮೊಬೈಲುಗಳು ಟಾಯ್ಲೆಟ್‌ಗೆ ಬೀಳ್ತಾವೆ!
ಟಾಯ್ಲೆಟ್‌ಗೆ ಹೋಗುವಾಗ ಮೊಬೈಲ್ ಬಳಕೆ ಮಾಡದಿದ್ದರೆ ಎಷ್ಟೊ ಜನರಿಗೆ ಅದೇ ಆಗಲ್ಲವಂತೆ ಎನ್ನುತ್ತಾರೆ.! ಅದೆಲ್ಲಾ ಬಿಡಿ, ಟಾಯ್ಲೆಟಿಗೆ ಹೋಗುವಾಗ ನೀವು ಮೊಬೈಲ್ ತೆಗೆದುಕೊಂಡು ಹೋಗಬೇಡಿ ಯಾಕೆ ಗೊತ್ತಾ ? ಬ್ರಿಟನಿನಲ್ಲಿ ಪ್ರತಿ ವರ್ಷ 1ಲಕ್ಷ ಮೊಬೈಲುಗಳು ಟಾಯ್ಲೆಟ್ ಹೊಂಡದೊಳಗೆ ಬೀಳುತ್ತವಂತೆ.!!

ಮೊದಲ ಮೊಬೈಲ್ ಬೆಲೆ ತಲೆತಿರುಗಿಸುತ್ತದೆ!!
ಇಂದು 10೦ ರೂಪಾಯಿ ಕೊಟ್ಟರೆ ಒಂದು ಮೊಬೈಲ್ ಸಿಗುತ್ತದೆ. ಆದರೆ, ನಿಮಗೆ ಗೊತ್ತಾ? 1983ರ ಅಮೆರಿಕಾದಲ್ಲಿ ಜಗತ್ತಿನ ಮೊದಲ ಮೊಬೈಲ್ ಬಿಡುಗಡೆ ಆದಾಗ ಪ್ರತಿ ಮೊಬೈಲ್ ಬೆಲೆ 4,000 ಡಾಲರ್ ಅಂದರೆ ಈಗಿನ 2,64,000 ರೂಪಾಯಿ ಆಗಿತ್ತಂತೆ.!!


Click it and Unblock the Notifications