ಈಗ 4ಜಿ ಫೋನ್ ಖರೀದಿಸಬೇಕೇ?..ಅಥವಾ 5ಜಿ ಫೋನ್‌ಗಳಿಗಾಗಿ ಕಾಯಬೇಕೇ?
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ 2019ರಲ್ಲಿ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಪ್ರಮುಖ ಕಂಪನಿಗಳಲ್ಲಿ ಸ್ಯಾಮ್‌ಸಂಗ್ ಕಂಪನಿ ಪ್ರಮುಖವಾಗಿದೆ. ಗೆಲಾಕ್ಸಿ ಎಸ್10, ಎಸ್10+ ಮತ್ತು ಎಸ್10ಇ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮವಾಗಿದ್ದು, ಬಳಕೆದಾರರಿಗೆ ಬಹಳಷ್ಟು ಮೌಲ್ಯವರ್ಧಿತ ವೈಶಿಷ್ಟ್ಯಗಳನ್ನು ನೀಡುತ್ತಿವೆ. ಅದೇ ರೀತಿ ಇತರ ಸ್ಮಾರ್ಟ್‌ಫೋನ್ ಕಂಪನಿಗಳಾದ ಒನ್‌ಪ್ಲಸ್, ಸೋನಿ, ಎಲ್‌ಜಿ, ಮತ್ತು ಹುವಾವೇ ಕೂಡ ಮುಂದಿನ ದಿನಗಳಲ್ಲಿ ತಮ್ಮ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಟಾಪ್ ಫೀಚರ್ ಇದ್ರೂ 5ಜಿ ಇಲ್ಲ
ಈ ಸ್ಮಾರ್ಟ್‌ಫೋನ್‌ಗಳು ಟಾಪ್ ಫೀಚರ್‌ಗಳನ್ನು ನೀಡುತ್ತಿದ್ದರೂ, ಸಂಪರ್ಕ ವಿಭಾಗದಲ್ಲಿ ಯಾವುದೇ ಪ್ರಮುಖ ಸುಧಾರಣೆಯನ್ನು ಕಾಣುತ್ತಿಲ್ಲ. ವಾಸ್ತವವಾಗಿ, ಈ ಮೇಲೆ ತಿಳಿಸಿದ ಕಂಪನಿಗಳು ಯುರೋಪ್ ಮತ್ತು ಯುಎಸ್‌ನಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿವೆ. ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್10 ಸ್ಯಾಮ್‌ಸಂಗ್‌ನ ಮೊದಲ 5ಜಿ ಸ್ಮಾರ್ಟ್‌ಫೋನ್ ಆಗಿದ್ದು, ಹುವಾವೇ ಮೇಟ್ ಎಕ್ಸ್ ಹುವಾವೇಯ ಮೊದಲ 5ಜಿ ಸ್ಮಾರ್ಟ್‌ಫೋನ್ ಆಗಿದೆ. ಮತ್ತು ಎಲ್‌ಜಿ ವಿ50 ಥಿಂಕ್ಯೂ ಸ್ಮಾರ್ಟ್‌ಫೋನ್ ಕೂಡ 5ಜಿ ನೆಟ್‌ವರ್ಕ್‌ನ್ನು ಬೆಂಬಲಿಸುತ್ತದೆ. ಒನ್‌ಪ್ಲಸ್, ಒಪ್ಪೊ, ಮತ್ತು ಶಿಯೋಮಿಯಂತಹ ಕಂಪನಿಗಳು ಸಹ 5ಜಿ ಸ್ಮಾರ್ಟ್‌ಫೋನ್ ಅಭಿವೃದ್ಧಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

5ಜಿ ನೆಟ್‌ವರ್ಕ್
5ಜಿ ಎಂದರೆ 5ನೇ ಜನರೇಷನ್ ವೈರ್‌ಲೆಸ್ ಕನೆಕ್ಟಿವಿಟಿ ಸ್ಟ್ಯಾಂಡರ್ಡ್ ಆಗಿದೆ. ಇದು ವೇಗವಾದ ಡೌನ್‌ಲೋಡ್ ಅನುಭವವನ್ನು ನೀಡುತ್ತದೆ. 5ಜಿ ನೆಟ್‌ವರ್ಕ್ ಬಳಸಿ ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕ್ಯೂಎಚ್‌ಡಿ ರೆಸಲ್ಯೂಶನ್ ಚಲನಚಿತ್ರವನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇದು ಗ್ರಾಫಿಕ್ಸ್‌ನ್ನು ಸಕ್ರಿಯಗೊಳಿಸಲು ಕ್ಲೌಡ್ ಸರ್ವರ್‌ಗಳನ್ನು ಬಳಸಿಕೊಂಡು ಐಒಟಿ, ಸ್ಮಾರ್ಟ್ ಹೋಮ್ ಮತ್ತು ಕನ್ಸೋಲ್ ತರಹದ ಗೇಮಿಂಗ್‌ನಂತಹ ಅಸಂಖ್ಯಾತ ಆಪ್‌ಗಳನ್ನು ಸಹ ಶಕ್ತಗೊಳಿಸುತ್ತದೆ.

4ಜಿ ಗಿಂತ 5ಜಿ ಅತ್ಯುತ್ತಮ
4ಜಿ ಗೆ ಹೋಲಿಸಿದರೆ, 5ಜಿ 10 ಪಟ್ಟು ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೀಡುತ್ತದೆ ಎನ್ನಲಾಗಿದೆ. ಇದು ರಿಮೋಟ್ ಸರ್ವರ್‌ನಿಂದಲೂ ಲ್ಯಾಗ್ ಫ್ರೀ 4 ಕೆ ಅಥವಾ 8ಕೆ ವಿಡಿಯೋ ಸ್ಟ್ರೀಮಿಂಗ್ ನೀಡುತ್ತದೆ. 5ಜಿ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಸಾಧನಗಳಲ್ಲಿ ವೈರ್‌ಲೆಸ್ ಆಗಿ ವೇಗವಾಗಿ ಡೇಟಾ ವರ್ಗಾವಣೆಯನ್ನು ಮಾಡುತ್ತದೆ.

ಯಾವಾಗ 5ಜಿ ಸೇವೆ..?
ಭಾರತದಲ್ಲಿ 5ಜಿ ನೆಟ್‌ವರ್ಕ್ ಜನರ ಬಳಕೆಗೆ ಸಿಗಲು ಬಹಳ ದಿನ ಕಾಯಬೇಕು. ಏಕೆಂದರೆ ಸರ್ಕಾರ ಇನ್ನೂ 5ಜಿ ಸ್ಪೆಕ್ಟ್ರಮ್‌ನ್ನು ಹರಾಜು ಮಾಡಿಲ್ಲ, 5ಜಿ ಸ್ಪೆಕ್ಟ್ರಮ್ ಹಂಚಿಕೆಯ ನಂತರ ಮಾತ್ರ ವಿವಿಧ ಟೆಲಿಕಾಂಗಳು 5ಜಿ ತಂತ್ರಜ್ಞಾನದಲ್ಲಿ ಕೆಲಸ ಮಾಡಬಹುದು. ಸ್ಪೆಕ್ಟ್ರಮ್ ಪರವಾನಗಿ ಪಡೆದು ಮತ್ತು 5ಜಿಗಾಗಿ ಹಾರ್ಡ್‌ವೇರ್‌ನ್ನು ಹೊಂದಿಸುವುದು ಮತ್ತು 5ಜಿ ನೆಟ್‌ವರ್ಕ್‌ನ ಆಂತರಿಕ ಪರೀಕ್ಷೆ ಮತ್ತು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ.

2021ಕ್ಕೆ ಬರಬಹುದು..?
ಇನ್ನು, 5ಜಿ ನೆಟ್‌ವರ್ಕ್ ನಿಯೋಜನೆಯಲ್ಲಿನ ತೊಂದರೆಗಳನ್ನು ನೋಡಿದರೆ ಜನರಿಗೆ 5ಜಿ ನೆಟ್‌ವರ್ಕ್ ಸಿಗಲು ಒಂದು ವರ್ಷ ಕಾಲ ಹಿಡಿಯಬಹುದಾಗಿದ್ದು, 2020ರ ಕೊನೆ ಅಥವಾ 2021ರ ಆರಂಭದಲ್ಲಿ ಜನರಿಗೆ ಸಿಗಬಹುದು. ಆದರೂ, ಭಾರತದಲ್ಲಿ 5ಜಿ ಬಳಕೆಗೆ ಮುಕ್ತಗೊಳ್ಳಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ. ಮೊದಲ ತಲೆಮಾರಿನ 5ಜಿ ಸ್ಮಾರ್ಟ್‌ಫೋನ್‌ಗಳು 4ಜಿ ಸ್ಮಾರ್ಟ್‌ಫೋನ್‌ಗಳ ಬೆಲೆಗೆ ಹೋಲಿಸಿದರೆ ದುಬಾರಿಯಾಗಿರುವ ಸಾಧ್ಯತೆಯಿದೆ.

ಸದ್ಯಕ್ಕೆ 4ಜಿ ಸ್ಮಾರ್ಟ್‌ಫೋನ್ ಬೆಸ್ಟ್..!
ನೀವು ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸುವ ಯೋಜನೆಯಲ್ಲಿದ್ದರೆ, 2020ರವರೆಗೆ 5ಜಿ ಸ್ಮಾರ್ಟ್‌ಫೋನ್‌ನ್ನು 30,000 ರೂ.ಗಿಂತ ಕಡಿಮೆ ದರದಲ್ಲಿ ನಿರೀಕ್ಷಿಸಬೇಡಿ. 5ಜಿ ಸ್ಮಾರ್ಟ್‌ಫೋನ್‌ಗಾಗಿ ಕಾಯುವ ಬದಲು, 4ಜಿ ಸ್ಮಾರ್ಟ್‌ಫೋನ್ ಖರೀದಿಸಿ ಮತ್ತು ಇತ್ತೀಚಿನ ಸ್ಮಾರ್ಟ್‌ಫೋನ್ ಆವಿಷ್ಕಾರಗಳನ್ನು ಆನಂದಿಸಿ. 2019ರ ಅಂತ್ಯಕ್ಕೆ ಯುರೋಪ್ ಮತ್ತು ಯುಎಸ್‌ನಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳನ್ನು ನೋಡಲು ನಾವು ನಿರೀಕ್ಷಿಸಬಹುದು, ಏಕೆಂದರೆ ಅಲ್ಲಿನ ಟೆಲಿಕಾಂ ಕಂಪನಿಗಳು ಈಗಾಗಲೇ 5ಜಿ ನೆಟ್‌ವರ್ಕ್ ನಿಯೋಜನೆಗೆ ಸಿದ್ಧತೆ ನಡೆಸುತ್ತಿವೆ.


Click it and Unblock the Notifications








