ಮಾರುಕಟ್ಟೆಗೆ ಬಂದಿದೆ ಸೂಪರ್ ಸಿಲ್ಕ್ ಹ್ಯಾಂಡ್ ಸೆಟ್

Posted By: Staff
ಮಾರುಕಟ್ಟೆಗೆ ಬಂದಿದೆ ಸೂಪರ್ ಸಿಲ್ಕ್ ಹ್ಯಾಂಡ್ ಸೆಟ್
|ತೀಚೆಗಷ್ಟೆ ಭಾರತೀಯ ಮಾರುಕಟ್ಟೆಗೆ ಸಿಲ್ಕ್ ಎಂಬ ಹ್ಯಾಂಡ್ ಸೆಟ್ಟನ್ನು ಬಿಡುಗಡೆಗೊಳಿಸಿದೆ. ಅನೇಕ ಆಯ್ಕೆಗಳನ್ನು ಒಳಗೊಂಡಿರುವ ಈ ಮೊಬೈಲ್ ಅತಿ ದುಬಾರಿ ಪೋನ್ ನಂತೆ ವಿನ್ಯಾಸ ಪಡೆದುಕೊಂಡಿದೆ.

ಈ ಸಿಲ್ಕ್ ಮೊಬೈಲ್ ಕಡಿಮೆ ಬೆಲೆಗೆ ಅತ್ಯದ್ಭುತ ಆಯ್ಕೆಗಳನ್ನು ಒಳಗೊಂಡಿರುವುದಾಗಿ ಕಂಪನಿ ತನ್ನ ಅಧೀಕೃತ ವರದಿಯಲ್ಲಿ ತಿಳಿಸಿದೆ.

SICT ಸಿಲ್ಕ್ ಫೋನ್ ವಿಶೇಷತೆ:

* ಡ್ಯೂಯಲ್ ಸಿಮ್

* ಡ್ಯೂಯಲ್ ಬ್ಯಾಂಡ್

* 1.3 ಮೆಗಾ ಪಿಕ್ಸಲ್ ಕ್ಯಾಮೆರಾ

* ಆಟೊ ಫೋಕಸ್, ಫ್ಲಾಶ್ ಲೈಟ್

* 20 fps ಹೈ ಡೆಫನಿಶನ್ ವಿಡಿಯೋ

* 2.8 ಇಂಚಿನ ಸ್ಕ್ರೀನ್ ಡಿಸ್ಪ್ಲೇ

* 'ರಿಯಲ್' ಟಚ್ ಪ್ಯಾಡ್ ಡಿಸ್ಪ್ಲೇ

* 3.5 ಎಂಎಂ ಆಡಿಯೋ ಜ್ಯಾಕ್

* ಬ್ಲೂಟೂಥ್, USB, GPRS

* HDMI ಇನ್ ಪುಟ್ ಪೋರ್ಟ್

* 16 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಕಾರ್ಡ್ ಸ್ಲಾಟ್

ಈ ಎಲ್ಲಾ ಗುಣವಿಶೇಷತೆಗಳೊಂದಿಗೆ SICT ಸಿಲ್ಕ್ ಹ್ಯಾಂಡ್ ಸೆಟ್ ನಲ್ಲಿ 'ಹ್ಯಾಂಡ್ ರೈಟಿಂಗ್ ಹೋಲ್ಡ್ ಅಪ್' ಆಯ್ಕೆ ನೀಡಲಾಗಿದೆ. ಇದರಲ್ಲಿ ಕಾಲ್ ಕನೆಕ್ಟ್ ನೋಟೀಸ್ ಕೂಡ ಇದ್ದು, ವಿಕಿರಣಗಳಿಂದ ಆರೋಗ್ಯ ತೊಂದರೆಯನ್ನುಂಟುಮಾಡುವುದನ್ನು ತಡೆಯಲು ಇದನ್ನು ಅಳವಡಿಸಲಾಗಿದೆ.

ಸುರಕ್ಷತೆಗೆಂದೂ ಮೊಬೈಲ್ ಟ್ರ್ಯಾಕರ್ ನೀಡಲಾಗಿದೆ. ಇದರಲ್ಲಿ HTML ಬ್ರೌಸರ್ ಇರುವುದರಿಂದ ಅತಿ ಹೆಚ್ಚಿನ ಇಂಟರ್ನೆಟ್ ವೇಗ ಸಾಧ್ಯವಿದೆ. ಎಫ್ ಎಂ ರೇಡಿಯೋ ಜೊತೆ MP3, WAV, AMR ಫಾರ್ಮೆಟ್ ಬೆಂಬಲಿಸುವ ಆಡಿಯೋ, AVI, 3GP ಮತ್ತು MP4 ವಿಡಿಯೋ ಫಾರ್ಮೆಟ್ ಗಳನ್ನು ಬೆಂಬಲಿಸಲಿದೆ.

SICT ಹೊರ ತಂದಿರುವ ಸಿಲ್ಕ್ ಹ್ಯಾಂಡ್ ಸೆಟ್ ಮೊಬೈಲ್ ಬೆಲೆ 2, 700ರು ಎಂದು ಅಂದಾಜಿಸಲಾಗಿದೆ. ಕಡಿಮೆ ಬೆಲೆಯಲ್ಲಿ ಒಳ್ಳೆ ಲುಕ್ ಹೊಂದಿರುವ ಈ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಮಾರಾಟವಾಗುವ ನಿರೀಕ್ಷೆಯಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot