ಮುಂದಿನ ವರ್ಷಕ್ಕೆ ಎಸ್ ಐಸಿಟಿ ಗಿಫ್ಟ್ ಏನು?

2012 ಜನವರಿಯ ಎರಡನೇ ವಾರದಲ್ಲಿ ಮೊದಲ ಆಂಡ್ರಾಯ್ಡ್ ಫೋನ್ ಬರಲಿದೆ ಎಂದು ಐವಿಕೆ ಮೊಬೈಲ್ ಕಂಪನಿ ಸಿಇಒ ಅನಿಲ್ ಕೌಶಿಕ್ ತಿಳಿಸಿದ್ದಾರೆ. ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ. 4.3 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದ್ದು, 1GHz ಪ್ರೊಸೆಸರ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ.
ಎಸ್ ಐಸಿಟಿ ಸಹಯೋಗದೊಂದಿಗೆ ಜನವರಿ ಕೊನೆಯಲ್ಲೂ ಇನ್ನೊಂದು ಮೊಬೈಲ್ ತೆರೆಕಾಣಲಿದೆ. ಈ ಸ್ಮಾರ್ಟ್ ಫೋನ್ 5 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಪಡೆದುಕೊಂಡಿದ್ದು, ಡ್ಯೂಯಲ್ ಕ್ಯಾಮೆರಾ ಇರುವುದು ವಿಶೇಷ. ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿರುವ ಜೊತೆ 1GHz ಪ್ರೊಸೆಸರ್ ಕೂಡ ಇದರಲ್ಲಿದೆ.
2012ರ ಜನವರಿ ವೇಳೆಗೆ ಬಿಡುಗಡೆಗೊಳ್ಳುವ ನಿರೀಕ್ಷೆಯಿರುವ ಈ ಎರಡೂ ಫೋನ್ ಗಳು 15,000 ರೂ ಗಿಂತ ಕಡಿಮೆ ಬೆಲೆ ಇರುವ ಅಂದಾಜಿದೆ. ಹಾಗೆಯೇ ಫೆಬ್ರುವರಿ ಮಧ್ಯದಲ್ಲಿ ಆಂಡ್ರಾಯ್ಡ್ ಟ್ಯಾಬ್ಲೆಟ್ ಕೂಡ ಬಿಡುಗಡೆಯಾಗುವ ಸೂಚನೆ ನೀಡಿದೆ.
ಅಂತರರಾಷ್ಟ್ರೀಯ ಮೊಬೈಲ್ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ SICT ಇದೀಗ ಐವಿಕೆ ಮೊಬೈಲ್ ಸಹಯೋಗದೊಂದಿಗೆ ಹೊರತರುತ್ತಿರುವ ಈ ಸ್ಮಾರ್ಟ್ ಫೋನ್ ಗಳು ಭಾರೀ ಮಾರಾಟವಾಗುವ ನಿರೀಕ್ಷೆ ಹೊಂದಿದೆ.


Click it and Unblock the Notifications








